VIDEO| ಬಿಎಸ್​​ವೈಗೆ ನನ್ನ ಕ್ಷೇತ್ರದಿಂದ ಐದು ಶಾಸಕರನ್ನು ಉಡುಗೊರೆಯಾಗಿ ನೀಡುವೆ: ಎಂ. ಮುನಿಸ್ವಾಮಿ

ಕೋಲಾರ: ಜಿಲ್ಲೆಯ ಐದು ಶಾಸಕರನ್ನು ಗೆಲ್ಲಿಸಿ ಯಡಿಯೂರಪ್ಪನವರಿಗೆ ಕೊಡುಗೆಯಾಗಿ ನೀಡುವೆ ಎಂದು ಕೋಲಾರ ಬಿಜೆಪಿ ಸಂಸದ ಎಂ. ಮುನಿಸ್ವಾಮಿ ಹೇಳಿಕೆ ನೀಡಿದ್ದಾರೆ.

ಶುಕ್ರವಾರ ನಗರದಲ್ಲಿ ಮಾತನಾಡಿದ ಅವರು ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಲು ನನ್ನ ಕ್ಷೇತ್ರದಿಂದ ಐದು ಶಾಸಕರನ್ನು ಬಿಜೆಪಿಯಿಂದ ಗೆಲ್ಲಿಸಿ ಉಡುಗೊರೆಯಾಗಿ ನೀಡುವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ರಾಜ್ಯ ಹಾಗೂ ದೇಶದಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿಯೂ ಉತ್ತಮ ಯಶಸ್ಸು ಸಾಧಿಸಲಿದೆ. ಕೋಲಾರದಿಂದ ನಾನು ಐದು ಶಾಸಕರನ್ನು ಗೆಲ್ಲಿಸಿ ಬಿಎಸ್​​ವೈಗೆ ಕೊಡುಗೆಯಾಗಿ ನೀಡುವೆ ಎಂದು ತಿಳಿಸಿದ್ದಾರೆ.

ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಹೊಸ ಬದಲಾವಣೆಯಾಗಲಿದೆ ಕಾದು ನೋಡಿ ಎಂದು ರಾಜ್ಯದ ಜನತೆಗೆ ಎಂ.ಮುನಿಸ್ವಾಮಿ ತಿಳಿಸಿದ್ದಾರೆ. ಕೋಲಾರ ಮೀಸಲು ಕ್ಷೇತ್ರದಲ್ಲಿ ಎಂ.ಮುನಿಸ್ವಾಮಿ 7 ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ಕಾಂಗ್ರೆಸ್​ ಪಕ್ಷದ ಕೆ.ಎಚ್​​. ಮುನಿಯಪ್ಪ ಅವರನ್ನು ಸೋಲಿಸಿ ಜಯ ಸಾಧಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *