More

    ಬಂಗಾರಪ್ಪನ ಹಾದಿಯಲ್ಲಿ ಸಾಗುವೆ, ಮಗ ಪ್ರಮಾಣ

    ಚಳ್ಳಕೆರೆ: ಪ್ರತಿಯೊಬ್ಬರೂ ಅಕ್ಷರವಂತರಾಗಬೇಕು ಎನ್ನುವ ದೂರದೃಷ್ಟಿಯ ಚಿಂತನೆಯಡಿ ಅಕ್ಷರ ತುಂಗಾ ಯೋಜನೆಯನ್ನು ಎಸ್.ಬಂಗಾರಪ್ಪ ಜಾರಿಗೆ ತಂದಿದ್ದರು. ಹಳ್ಳಿ ಭಾಗದ ಮಗು ಒಂದು ದಿನ ಶಾಲೆಗೆ ಹೋದರೆ 1 ರೂಪಾಯಿ ನೀಡಲಾಗುತ್ತಿತ್ತು. ಕೃಪಾಂಕ ಜಾರಿ ಮಾಡಿ ಗ್ರಾಮಾಂತರ ಎಷ್ಟೋ ನಿರುದ್ಯೋಗಿಗಳಿಗೆ ಉದ್ಯೋಗ ಭಾಗ್ಯ ಸಿಗುವಂತೆ ಮಾಡಿದ್ದಾರೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.

    ತಾಲೂಕು ಖಾಸಗಿ ಅನುದಾನ ರಹಿತ ಶಾಲಾ ಆಡಳಿತ ಮಂಡಳಿ ಟ್ರಸ್ಟ್ ಚಿತ್ರದುರ್ಗ ಜಿಲ್ಲೆ, ಚಳ್ಳಕೆರೆ ನಗರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಶೈಕ್ಷಣಿಕ ಸಮಾವೇಶ, ಶಿಕ್ಷಕರ ದಿನಾಚರಣೆ ಮತ್ತು ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

    ಅಪ್ಪನ ಇಂತಹ ಚಿಂತನೆಯಲ್ಲಿ ನಾನು ಸಾಗುವ ಪ್ರಯತ್ನದಲ್ಲಿದ್ದೇನೆ. ಅಧಿಕಾರ ವಹಿಸಿಕೊಂಡ ಮೇಲೆ ಬಿಸಿಯೂಟದಲ್ಲಿ 10ನೇ ತರಗತಿಯವರೆಗೂ ಮೊಟ್ಟೆ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ. ಮಕ್ಕಳಿಗೆ ಪರೀಕ್ಷೆಗಳು ಅವಕಾಶವೇ ಹೊರತು, ಫೇಲು ಮಾಡುವ ವ್ಯವಸ್ಥೆ ಆಗಬಾರದು. ಈ ದೃಷ್ಟಿಯಿಂದ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಮಕ್ಕಳಿಗೆ 3 ಹಂತದ ಪರೀಕ್ಷೆ ಜಾರಿ ಮಾಡುವ ಗುರಿ ಇದೆ ಎಂದು ತಿಳಿಸಿದರು.

    ರಾಜ್ಯೋತ್ಸವ ರಸಪ್ರಶ್ನೆ - 26

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts