ಒಬ್ಬ ಮಗನಾಗಿ ನನ್ನ ಎಲ್ಲ ಕರ್ತವ್ಯ ಮಾಡಿದ್ದೇನೆ ಎಂದ ಚಾಲೆಂಜಿಂಗ್​​​ ಸ್ಟಾರ್​ ದರ್ಶನ್​​​​

ಬೆಂಗಳೂರು: ಸುಮಲತಾ ಗೆದ್ದಾಗ ಅವರ ಜತೆ ಹೋದರೆ ಎಂಜಾಯ್​​ ಮಾಡುವುದಕ್ಕೆ ಬಂದಿದ್ದಾರೆ ಅಂದುಕೊಳ್ಳುತ್ತಾರೆ. ಅದು ನನಗೆ ಇಷ್ಟ ಇಲ್ಲ ಎಂದು ನಟ ಚಾಲೆಂಜಿಂಗ್​​​ ಸ್ಟಾರ್​ ದರ್ಶನ್​​​ ತಿಳಿಸಿದ್ದಾರೆ.

ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್​​​ ಪರ ಪ್ರಚಾರ ಮಾಡಿದ್ದ ದರ್ಶನ್​​ ಗೆಲುವಿನ ಸಮಯದಲ್ಲಿ ದೂರ ಉಳಿದಿದ್ದಾರೆ. ಪಾಂಡಿಚೇರಿಯಲ್ಲಿ ರಾಬರ್ಟ್​ ಶೂಟಿಂಗ್​​ನಲ್ಲಿ ನಿರತವಾಗಿರುವ ಅವರು ಸುಮಲತಾ ಗೆಲುವಿನ ಬಗ್ಗೆ ಮಾತನಾಡಿದ್ದಾರೆ.

ಚುನಾವಣೆ ಪ್ರಚಾರದ ವೇಳೆ ಸುಮಲತಾ ಪರ ಒಬ್ಬ ಮಗನಾಗಿ ಮಾಡಬೇಕಾದ ಎಲ್ಲ ಕೆಲಸವನ್ನು ನಾನು ಮಾಡಿದ್ದೇನೆ. ಅಲ್ಲಿಗೆ ನನ್ನ ಕರ್ತವ್ಯ ಮುಗಿದಿತ್ತು. ಈಗ ಗೆದ್ದಾಗ ಅವರ ಜತೆ ಹೋಗುವುದಿಲ್ಲ, ಜತೆಯಲ್ಲಿ ಹೋದರೆ ಎಂಜಾಯ್​​ ಮಾಡಲು ಬಂದಿದ್ದಾರೆ ಅಂದುಕೊಳ್ಳುತ್ತಾರೆ. ಒಂದು ವೇಳೆ ಅವರು ಸೋತಿದ್ದರೆ ಅವರ ಕಷ್ಟದಲ್ಲಿ ಭಾಗಿಯಾಗುತ್ತಿದ್ದೆ ಎಂದು ದರ್ಶನ್​​ ತಮ್ಮ ನಿರ್ಧಾರ ತಿಳಿಸಿದ್ದಾರೆ.
ದರ್ಶನ್​​​​ ಶನಿವಾರ ಪಾಂಡಿಚೇರಿಯಿಂದ ನೇರವಾಗಿ ಬೆಂಗಳೂರಿಗೆ ಆಗಮಿಸಲಿದ್ದಾರೆ. (ದಿಗ್ವಿಜಯ ನ್ಯೂಸ್​ )

Leave a Reply

Your email address will not be published. Required fields are marked *