ಜೀವನದಲ್ಲಿ ಇದೇ ಮೊದಲ ಬಾರಿಗೆ ಹುಬ್ಬಳ್ಳಿ-ಧಾರವಾಡ ಮಣ್ಣು ತುಳಿದಿದ್ದೇನೆ ಎಂದ ಜೂನಿಯರ್ ರೆಬಲ್​ಸ್ಟಾರ್

ಧಾರವಾಡ: ಜೀವನದಲ್ಲಿ ಇದೇ ಮೊದಲ ಬಾರಿಗೆ ಹುಬ್ಬಳ್ಳಿ-ಧಾರವಾಡ ನೆಲದ ಮೇಲೆ ಹೆಜ್ಜೆ ಇಟ್ಟಿದ್ದೇನೆ ಎಂದು ನಟ ಅಭಿಷೇಕ್​​ ಅಂಬರೀಷ್​​ ಅವರು ಹೇಳಿದ್ದಾರೆ.

ಇಲ್ಲಿನ ನುಗ್ಗಿಕೇರಿ ಹನಮಂತ ದೇವಸ್ಥಾನದಲ್ಲಿ ಸಂಸದೆ ಸುಮಲತಾ ಅಂಬರೀಷ್​ ಮತ್ತು ಅಭಿಷೇಕ್​ ಅವರ ತುಲಾಭಾರದ ನಂತರ ಮಾತನಾಡಿದ ಅವರು ನಮ್ಮ ಕುಟುಂಬಕ್ಕೆ ಒಳ್ಳೆಯದಾಗಲಿ ಎಂದು ಅಭಿಮಾನಿಗಳೇ ಈ ತುಲಾಭಾರ ಏರ್ಪಡಿಸಿದ್ದಾರೆ. ಈ ತುಲಾಭಾರದ ಬಗ್ಗೆ ನಮಗೆ ಗೊತ್ತೇ ಇಲ್ಲ. ಇಲ್ಲಿಗೆ ಬಂದ ಮೇಲೆ ಗೊತ್ತಾಯಿತು. ಜೀವನದಲ್ಲಿ ಇದೇ ಮೊದಲ ಬಾರಿಗೆ ಹುಬ್ಬಳ್ಳಿ-ಧಾರವಾಡಕ್ಕೆ ಭೇಟಿ ನೀಡಿದ್ದೇನೆ. ನನ್ನ ಹೊಸ ಚಿತ್ರ ಅಮರ್​​​​ ಬಗ್ಗೆ ಪ್ರಚಾರ ಮಾಡಲು ನಾವು ಇಲ್ಲಿಗೆ ಬಂದಿದ್ದೇವೆ ಎಂದು ಅಭಿಷೇಕ್​​ ತಿಳಿಸಿದರು.

ಬಳಿಕ ಮಾತನಾಡಿದ ಸುಮಲತಾ, ಸುಮಾರು ಆರೇಳು ವರ್ಷಗಳ ಹಿಂದೆ ಅಂಬರೀಷ್​​ ಜತೆ ಹುಬ್ಬಳ್ಳಿ-ಧಾರವಾಡಕ್ಕೆ ಬಂದಿದ್ದೆ. ನಂತರ ಈಗ ಇಲ್ಲಿಗೆ ಭೇಟಿ ನೀಡಿರುವುದಕ್ಕೆ ಸಂತೋಷವಾಗಿದೆ. ಚುನಾವಣೆ ವೇಳೆ ಹುಬ್ಬಳ್ಳಿ ಕಡೆಯಿಂದಲೂ ನನಗೆ ಬೆಂಬಲು ನೀಡಲು ಮಂಡ್ಯಕ್ಕೆ ಬಂದಿದ್ದರು. ಅವರೆಲ್ಲರಿಗೂ ಧನ್ಯವಾದಗಳು. ನಮ್ಮ ಮೇಲಿನ ಅಭಿಮಾನದಿಂದ ಈ ತುಲಾಭಾರ ಏರ್ಪಡಿಸಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

ಸುಮಲತಾ ಅವರಿಗೆ 75 ಕೆ.ಜಿ ಸಕ್ಕರೆ ಮತ್ತು 15 ಕೆ.ಜಿ ತುಪ್ಪದಿಂದ ತುಲಾಭಾರವಾದರೆ, ಅಭಿಷೇಕ್​ಗೆ 100 ಕೆ,ಜಿ ಸಕ್ಕರೆ ಹಾಗೂ 15 ಕೆ.ಜಿ ತುಪ್ಪದಲ್ಲಿ ತುಲಾಭಾರ ನೇರವೇರಿತು. ನಟ ದೊಡ್ಡಣ, ನಿರ್ಮಾಪಕ ರಾಕ್​ಲೈನ್ ವೆಂಕಟೇಶ್​ ನಿರ್ದೇಶಕರಾದ ಯೋಗರಾಜ್ ಭಟ್ ಹಾಗೂ ನಾಗಶೇಖರ ಉಪಸ್ಥಿತರಿದ್ದರು. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *