ಸ್ಲಿಮ್ ಆಗಿ SHOCK ಕೊಡ್ತೀನಿ!

ಕ್ಷಿಣ ಭಾರತದ ಚಿತ್ರರಂಗದಲ್ಲಿ ನಟಿ ನಿತ್ಯಾ ಮೆನನ್ ಸಿಕ್ಕಾಪಟ್ಟೆ ಫೇಮಸ್. ಅಕ್ಷಯ್ ಕುಮಾರ್ ಮುಖ್ಯಭೂಮಿಕೆ ನಿಭಾಯಿಸಲಿರುವ ‘ಮಿಷನ್ ಮಂಗಳ್’ ಚಿತ್ರದ ಮೂಲಕ ಅವರು ಈಗ ಬಾಲಿವುಡ್​ಗೂ ಕಾಲಿಡುತ್ತಿದ್ದಾರೆ. ಇದೆಲ್ಲದರ ಹೊರತಾಗಿಯೂ ನಿತ್ಯಾ ಮತ್ತೊಂದು ವಿಚಾರಕ್ಕೆ ಚರ್ಚೆಯ ಕೇಂದ್ರಬಿಂದು ಆಗಿದ್ದರು. ದಿನದಿಂದ ದಿನಕ್ಕೆ ಅವರ ದೇಹದ ತೂಕ ಹೆಚ್ಚುತ್ತಿರುವುದು ಏಕೆ? ಇದು ಅಭಿಮಾನಿ ವಲಯದ ಅಚ್ಚರಿಯ ಪ್ರಶ್ನೆಯಾಗಿತ್ತು. ಆದರೆ ಇನ್ಮುಂದೆ ಇಂಥ ಮಾತುಗಳಿಗೆ ಅವಕಾಶವೇ ಇರುವುದಿಲ್ಲವೇನೋ? ಯಾಕೆಂದರೆ ನಿತ್ಯಾ, ಹೊಸ ಚಾಲೆಂಜ್​ಗೆ ಸಿದ್ಧರಾಗುತ್ತಿದ್ದಾರೆ. ಸದ್ದಿಲ್ಲದೆ, ದೇಹವನ್ನು ಸಪೂರಾಗಿಸಿಕೊಳ್ಳಲು ತೀರ್ವನಿಸಿದ್ದಾರೆ. ಹಾಗಂತ ವೈಯಕ್ತಿಕ ಉದ್ದೇಶದಿಂದ ಅವರು ಈ ಕಾರ್ಯಕ್ಕೆ ಮುಂದಾಗುತ್ತಿಲ್ಲ. ಬದಲಿಗೆ ಶಹೀದ್ ಖಾದರ್ ನಿರ್ದೇಶನದ ಕ್ರೀಡಾಧಾರಿತ ಮಲಯಾಳಂ ಚಿತ್ರವೊಂದರ ಸಲುವಾಗಿ ನಿತ್ಯಾ ಇಂಥ ಸಾಹಸಕ್ಕೆ ಕೈ ಹಾಕಲಿದ್ದಾರೆ. ಈ ಚಿತ್ರದಲ್ಲಿ ಅವರು ಅಥ್ಲೀಟ್ ಪಾತ್ರ ಮಾಡುತ್ತಿದ್ದು, ಅದಕ್ಕೆ ತಕ್ಕಂತೆ ದೇಹದ ತೂಕ ಕಡಿಮೆ ಮಾಡಿಕೊಳ್ಳಲಿದ್ದಾರಂತೆ. ಈ ಬಗ್ಗೆ ಇತ್ತೀಚೆಗಷ್ಟೇ ಪ್ರತಿಕ್ರಿಯೆ ನೀಡಿರುವ ಅವರು, ‘ಕ್ರೀಡೆ ಆಧರಿತ ಸಿನಿಮಾಕ್ಕೆ ನಿರ್ದೇಶಕರು ನನ್ನನ್ನು ಆಯ್ದುಕೊಳ್ಳುತ್ತಾರೆಂದು ನಾನು ಅಂದುಕೊಂಡಿರಲಿಲ್ಲ. ನನ್ನ ದೇಹದ ತೂಕದ ವಿಚಾರವಾಗಿಯೇ ನಾನು ಇಷ್ಟು ದಿನ ಸುದ್ದಿಯಾಗುತ್ತಿದ್ದೆ. ಇನ್ನು ಕೆಲವೇ ದಿನಗಳಲ್ಲಿ ಹೊಸ ಲುಕ್ ಮೂಲಕ ಎಲ್ಲರಿಗೂ ಶಾಕ್ ನೀಡಲಿದ್ದೇನೆ’ ಎಂದಿದ್ದಾರೆ. -ಏಜೆನ್ಸೀಸ್