More

    ನಿರ್ಭಯಾ ಪ್ರಕರಣ: ಕಾನೂನಿನ ಕೊನೆ ಅವಕಾಶ ಕ್ಯುರೇಟಿವ್​ ಅರ್ಜಿ ಸಲ್ಲಿಸಿ ಅಪರಾಧಿ ವಿನಯ್ ಸುಪ್ರೀಂ ಬಳಿ ಕೇಳಿದ್ದೇನು?​

    ನವದೆಹಲಿ: ನಿರ್ಭಯಾ ಪ್ರಕರಣದಲ್ಲಿ ಗಲ್ಲುಶಿಕ್ಷೆಗೆ ಗುರಿಯಾಗಿರುವ ನಾಲ್ವರು ಪ್ರಮುಖ ಅಪರಾಧಿಗಳಲ್ಲಿ ಓರ್ವ ಸುಪ್ರೀಂಕೋರ್ಟ್​ನಲ್ಲಿ ಗುರುವಾರ ಕ್ಯುರೇಟಿವ್​ ಅರ್ಜಿಯನ್ನು ಸಲ್ಲಿಸಿದ್ದಾನೆ.

    ಅಪರಾಧಿ ವಿನಯ್​ ಶರ್ಮಾ ಪರ ವಕೀಲರಾದ ಎ.ಪಿ.ಸಿಂಗ್​ ಅರ್ಜಿ ದಾಖಲಿಸಿದ್ದು, ಗಲ್ಲುಶಿಕ್ಷೆಗೆ ತಡೆ ನೀಡುವಂತೆ ಕೋರಿದ್ದಾರೆ. ಘಟನೆ ನಡೆದಾಗ ವಿನಯ್​ಗೆ ಕೇವಲ 19 ವರ್ಷ ವಯಸ್ಸಾಗಿತ್ತಷ್ಟೇ. ಚಿಕ್ಕ ವಯಸ್ಸು ಮತ್ತು ಸಾಮಾಜಿಕ-ಆರ್ಥಿಕ ಹಿನ್ನೆಲೆಯನ್ನು ಪರಿಗಣಿಸಿ ಕ್ಷಮಾದಾನ ನೀಡಿ ಎಂದು ವಿನಯ್​ ಪರ ವಕೀಲರು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.

    ಅಲ್ಲದೆ, ಅತ್ಯಾಚಾರ ಮತ್ತು ಕೊಲೆ ಸಂಬಂಧ ಇತರೆ 17 ಪ್ರಕರಣಗಳಲ್ಲಿ ಸುಪ್ರೀಂಕೋರ್ಟ್​ ಗಲ್ಲುಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ವರ್ಗಾಯಿಸಿದ ಉದಾಹರಣೆಗಳಿವೆ. ಅದೇ ಮಾದರಿಯಲ್ಲಿ ವಿನಯ್​ಗೂ ಪರಿಹಾರ ನೀಡಿ ಅರ್ಜಿಯಲ್ಲಿ ವಕೀಲರು ಮನವಿ ಮಾಡಿದ್ದಾರೆ.

    ಇದಕ್ಕೂ ಮುನ್ನ ದೆಹಲಿ ಹೈಕೋರ್ಟ್2012ರಂದು ನಿರ್ಭಯಾ ಮೇಲೆ ಅತ್ಯಾಚರವೆಸಗಿ ಮೃಗೀಯವಾಗಿ ಹಿಂಸಿಸಿ ಕೊಲೆಗೈದ ಪ್ರಕರಣದಲ್ಲಿ​ ನಾಲ್ವರು ಆರೋಪಿಗಳಾದ ಮುಕೇಶ್​(32), ಪವನ್​ ಗುಪ್ತಾ(25), ವಿನಯ್​ ಶರ್ಮಾ(26) ಮತ್ತು ಅಕ್ಷಯ್​ ಕುಮಾರ್​ ಸಿಂಗ್​(31)ಗೆ ಗಲ್ಲು ಶಿಕ್ಷೆಯನ್ನು ವಿಧಿಸಿದೆ. ಹೀಗಾಗಿ ನಾಲ್ವರನ್ನು ಜನವರಿ 22ರ ಬೆಳಗ್ಗೆ 7 ಗಂಟೆಗೆ ತಿಹಾರ್​ ಜೈಲಿನಲ್ಲಿ ನೇಣಿಗೇರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಆರೋಪಿಗಳಿಗೆ ಕಾನೂನಿನ ಅಡಿಯಲ್ಲಿ ಉಳಿದಿರುವ ಕಟ್ಟಕಡೆಯ ಅವಕಾಶವೆಂದರೆ ಅದು ಕ್ಯುರೇಟಿವ್​ ಅರ್ಜಿ ಸಲ್ಲಿಸುವುದಾಗಿದೆ. ಹೀಗಾಗಿ ಅಪರಾಧಿ ವಿನಯ್​ ಅರ್ಜಿ ಸಲ್ಲಿಸಿ ಕೊನೆಯ ಪ್ರಯತ್ನಕ್ಕೆ ಕೈಹಾಕಿದ್ದಾನೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts