Tuesday, 11th December 2018  

Vijayavani

ಪಂಚರಾಜ್ಯಗಳ ಫಲಿತಾಂಶದಲ್ಲಿ ಕೈ ಆಟ-3 ರಾಜ್ಯಗಳಲ್ಲಿ ಅಧಿಕಾರದತ್ತ ಕಾಂಗ್ರೆಸ್​ - ವರ್ಕೌಟ್​ ಆಗದ ಮೋದಿ - ಅಮಿತ್ ಷಾ ಅಲೆ        ರಾಜಸ್ಥಾನದಲ್ಲಿ ಮ್ಯಾಜಿಕ್ ನಂಬರ್ ಸನಿಹ ಕಾಂಗ್ರೆಸ್-95 ಕ್ಷೇತ್ರದಲ್ಲಿ ಕಾಂಗ್ರೆಸ್, 80 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ        ಮಧ್ಯಪ್ರದೇಶದಲ್ಲಿ ಹಾವು ಏಣಿ ಆಟ - ಕೈ ಕಮಲ ಸಮಬಲದ ಹೋರಾಟ - ಸರ್ಕಾರ ರಚನೆಗೆ ಪಕ್ಷೇತರರೇ ನಿರ್ಣಾಯಕರು        ತೆಲಂಗಾಣದಲ್ಲಿ ನಡೆಯದ ಕೈ-ಕಮಲದ ಆಟ-ಶರವೇಗದಲ್ಲಿ ಮುನ್ನುಗಿದ ಕೆಸಿಆರ್​-ನೂತನ ಸಿಎಂ ಆಗಿ ನಾಳೆ ಪ್ರಮಾಣ ವಚನ        ಛತ್ತೀಸ್​ಗಢದಲ್ಲಿ ಅಧಿಕಾರದತ್ತ ಕಾಂಗ್ರೆಸ್ - ಆಡಳಿತಾರೂಢ ಬಿಜೆಪಿಗೆ ಭಾರಿ ಮುಖಭಂಗ        ಮಿಜೋರಾಂನಲ್ಲಿ ಕಾಂಗ್ರೆಸ್​​​ಗೆ ಭಾರಿ ಮುಖಭಂಗ - ಅಧಿಕಾರದ ಗದ್ದುಗೆ ಹಿಡಿದ ಎಂಎನ್​​​ಎಫ್​ - 25 ಕ್ಷೇತ್ರಗಳಲ್ಲಿ ಭರ್ಜರಿ ಮುನ್ನಡೆ       
Breaking News

ಎಚ್ಚರಿಕೆ ಕೊಟ್ಟರೂ ಹಸ್ತ ಮೈಥುನ ಮಾಡಿಕೊಂಡವನಿಗೆ 68 ವರ್ಷದ ಮಹಿಳೆ ಮಾಡಿದ್ದೇನು?

Thursday, 09.08.2018, 11:00 AM       No Comments

ವಾಷಿಂಗ್ಟನ್​: ಸಾಕಷ್ಟು ಬಾರಿ ಎಚ್ಚರಿಕೆ ನೀಡಿದರೂ ಎದುರಿಗೆ ಬಂದು ಹಸ್ತಮೈಥುನ ಮಾಡಿಕೊಳ್ಳುತ್ತಿದ್ದವನನ್ನು 68 ವರ್ಷದ ಮಹಿಳೆ ಪಿಸ್ತೂಲ್​ನಿಂದ ಶೂಟ್​ ಮಾಡಿದ್ದಾರೆ.

ಸ್ಥಳೀಯ ಚಾನೆಲ್​ಗಳಲ್ಲಿ ಗ್ರ್ಯಾನಿ ಜೀನ್​ ಎಂದೇ ಬಿಂಬಿತವಾಗಿರುವ ಈ ಮಹಿಳೆ ಮಂಗಳವಾರ ಸಂಜೆ 5.15ರ ವೇಳೆ ಕಸ ಹಾಕಲು ಹೊರಗೆ ಹೋಗಿದ್ದಾಗ ಈ ಘಟನೆ ನಡೆದಿದೆ. ಮಹಿಳೆ ಹೊರಗಡೆ ಹೋದಾಗ ಸೈಕಲ್​ನಲ್ಲಿ ಹಿಂಬಾಲಿಸಿದ ವ್ಯಕ್ತಿ ಅಸಭ್ಯ ವರ್ತನೆ ಆರಂಭಿಸಿದ್ದಾನೆ. ಆಕೆಯ ಬಳಿ ಹೋಗಿ ಹಸ್ತ ಮೈಥುನ ಮಾಡಿದ್ದಾನೆ ಎಂದು ಹೌಸ್​ಟನ್​ ಪೊಲೀಸ್​ ಲೆ.ಲ್ಯಾರಿ ಕ್ರೌಸನ್​ ಹೇಳಿದ್ದಾರೆ.

ಇದೇ ವೇಳೆ ಕೆಲ ಯುವಕರು ಆ ವ್ಯಕ್ತಿಯ ಪ್ಯಾಂಟ್​ ಕೆಳಗೆ ಎಳೆದು ತಮಾಶೆ ಮಾಡಿದ್ದಾರೆ. ಇಷ್ಟೆಲ್ಲಾ ಆದರೂ ಮಹಿಳೆ ಹಿಂದೆಯೇ ವ್ಯಕ್ತಿ ಹೋಗುತ್ತಿದ್ದಾಗ, ನನ್ನ ಹಿಂದೆ ಬರುವುದನ್ನು ನಿಲ್ಲಿಸು, ಇಲ್ಲವಾದರೆ ಶೂಟ್​ ಮಾಡುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾಳೆ ಎಂದರು.

ಎಚ್ಚರಿಕೆ ನೀಡಿದರೂ ಮಹಿಳೆ ಮಾತು ಕೇಳದ ವ್ಯಕ್ತಿ ಮನೆ ಬಳಿಗೆ ಬಂದು ಬಾಗಿಲ ಬಳಿ ನಿಂತು ಅಸಭ್ಯ ವರ್ತನೆ ಮುಂದುವರಿಸಿದ್ದಾನೆ. ಕೋಪಗೊಂಡ ಮಹಿಳೆ ಪಿಸ್ತೂಲ್​ನಲ್ಲಿ ಶೂಟ್​ ಮಾಡಿದ್ದಾರೆ. ಪರಿಣಾಮ ಆತನ ಭುಜದ ಬಳಿ ಗುಂಡು ತಾಕಿದೆ ಎಂದು ತಿಳಿಸಿದ್ದಾರೆ.

ಸದ್ಯ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಅಂತೆಯೇ ಮಹಿಳೆಯನ್ನು ವಿಚಾರಣೆ ನಡೆಸಲಾಗುತ್ತಿದ್ದು, ಆಕೆಗೆ ಶಿಕ್ಷೆ ನೀಡುವ ಬಗ್ಗೆ ಇನ್ನೂ ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದಿದ್ದಾರೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *

Back To Top