ನಾನು ಉಗ್ರಗಾಮಿ ಆಗಲು ಬಯಸಿದ್ದೆ! ವಿಧಾನಸಭೆಯಲ್ಲಿ ಶಾಸಕ Qaiser Jamshaid Lone ಹೇಳಿಕೆ ವೈರಲ್

blank

ಜಮ್ಮು-ಕಾಶ್ಮೀರ: ಇಲ್ಲಿನ ವಿಧಾನಸಭೆಯಲ್ಲಿ 370 (ವಿಶೇಷ ಸ್ಥಾನಮಾನ) ಕುರಿತು ಆಡಳಿತ ಮತ್ತು ಪ್ರತಿಪಕ್ಷಗಳು ವಾಗ್ವಾದಕ್ಕೆ ಇಳಿದಿದೆ. ಇದರ ನಡುವೆ ಶಾಸಕರೊಬ್ಬರು ತಮ್ಮ ಜೀವನದ ಘಟನೆಗಳನ್ನು ಮೇಲುಕ ಹಾಕುತ್ತಾ ‘ನಾನು ಉಗ್ರಗಾಮಿ’ ಆಗಲು ಬಯಸಿದ್ದೆ ಎಂದು ಹೇಳಿದ್ದಾರೆ.

ಮೊದಲ ಅಧಿವೇಶನದ ನ್ಯಾಷನಲ್​ ಕಾನ್ಫೆರೆನ್ಸ್​ ಶಾಸಕ ಖೈಸರ್ ಜಮೈದ್​​ ಲೋನ್(Qaiser Jamshaid Lone)​ ನಾನು ಉಗ್ರಗಾಮಿಯಾಗಲು ಬಯಸಿದ್ದ ಸಂದರ್ಭದಲ್ಲಿ ಈ ವ್ಯವಸ್ಥೆ ನನ್ನನ್ನು ಹೇಗೆ ಬದಲಾಯಿಸಿತು ಎಂಬುವುದನ್ನು ವಿವರಿಸಿದ್ದಾರೆ.

ನಾನು ಉಗ್ರಗಾಮಿ ಆಗಲು ಬಯಸಿದ್ದೆ! ವಿಧಾನಸಭೆಯಲ್ಲಿ ಶಾಸಕ Qaiser Jamshaid Lone ಹೇಳಿಕೆ ವೈರಲ್

ಲೆಫ್ಟಿನೆಟ್​ ಗೌರ್ವರ್ ಅವರ​ ವಂದನಾ ಭಾಷಣದಲ್ಲಿ ಮಾತನಾಡಿದ ಶಾಸಕ ಲೋನ್​, ತಾನು ಯುವಕನಾಗಿದ್ದಾಗ ಸೇನಾಧಿಕಾರಿ ಮತ್ತು ಸೇನೆಯಿಂದ ‘ಚಿತ್ರಹಿಂಸೆ ಮತ್ತು ಅವಮಾನಕ್ಕೆ ಒಳಗಾದಗ’ ಬಳಿಕ ನಾನು ಉಗ್ರಗಾಮಿಯಾಗಲು ಮುಂದಾಗಿದ್ದೆ. ಆದರೆ, ಒಬ್ಬ ಹಿರಿಯ ಅಧಿಕಾರಿಯು ಮಾತುಗಳು ‘ಈ ವ್ಯವವಸ್ಥೆಯಲ್ಲಿ ನಂಬಿಕೆ ಇಡುವಂತೆ ಮಾಡಿತು. ಅ ಘಟನೆಯಿಂದ ಬದಲಾದೆ” ಎಂದು ಶಾಸಕ ಲೋನ್​ ಹೇಳಿದರು.

ಇದನ್ನೂ ಓದಿ :ಕೋವಿಡ್‌ ಹಗರಣ: ತನಿಖೆಗೆ ಆಯೋಗ ಶಿಫಾರಸು! ಬಿಎಸ್​ವೈ, ವಿಜಯೇಂದ್ರ ಕೊಟ್ಟ ಪ್ರತಿಕ್ರಿಯೆ ಹೀಗಿದೆ

”ನಾನು ಚಿಕ್ಕವಾನಾಗಿದ್ದಾಗ ನಮ್ಮ ಪ್ರದೇಶದಲ್ಲಿ ದಬ್ಬಾಳಿಕೆ ಇತ್ತು. ನಾನು 10 ನೇ ತರಗತಿಯಲ್ಲಿ ವ್ಯಾಸಂಗ ಮಾಡಬೇಕಾದರೆ, ನಾನು ಸೇರಿದಂತೆ 32 ಜನ ಯುವಕರನ್ನು ವಿಚಾರಣೆಗೆ ಕರೆದೊಯ್ಯಲಾಯಿತು. ಅಲ್ಲಿ ಎಲ್ಲರನ್ನು ಪ್ರತ್ಯೇಕಿಸಿ ವಿಚಾರಣೆ ಮಾಡಿದರು. ನಿಮ್ಮ ಪ್ರದೇಶದ ಕೆಲ ಯುವಕರು ಭಯೋತ್ಪದಾರೊಂದಿಗೆ ಸೇರಿಕೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ಪ್ರಶ್ನಿಸಿದರು. ಇದಕ್ಕೆ ನಾನು ಇಲ್ಲ, ನನಗೆ ಗೊತ್ತಿಲ್ಲ ಎಂದು ಉತ್ತರಿಸಿದೆ. ಇದಕ್ಕೆ ಅವರು ನನ್ನನ್ನು ಮನಬಂದಂತೆ ಥಳಿಸಿದ್ದರು” ಎಂದು ಲೋನ್​ ಹೇಳಿದರು.

ಈ ಘಟನೆ ಬಳಿಕ ಹಿರಿಯ ಅಧಿಕಾರಿಯೊಬ್ಬರು ಸ್ಥಳಕ್ಕಾಗಮಿಸಿ, ಜೀವನದಲ್ಲಿ ಏನು ಆಗಬೇಕು ಎಂದು ಕೇಳಿದರು. ಇದಕ್ಕೆ ನಾನು ಉಗ್ರಗಾಮಿ ಆಗುತ್ತೇನೆ ಎಂದು ಉತ್ತರಿಸಿದ್ದೇ. ಯಾಕೆ ಇಂತಹ ನಿರ್ಧಾರ ಮಾಡಿರುವೆ ಎಂದರು, ಅದಕ್ಕೆ ಉತ್ತರಿಸಿದ ನಾನು, ನನ್ನ ಮತ್ತು ನಮ್ಮ ಪ್ರದೇಶದ ಜನರ ಮೇಲೆ ನಡೆದ ದಬ್ಬಾಳಿಕೆ ಮತ್ತು ಚಿತ್ರಹಿಂಸೆಯ ಬಗ್ಗೆ ತಿಳಿಸಿದೆ.

ಲೋನ್​ ಜತೆ ಮಾತನಾಡಿದ ಹಿರಿಯ ಅಧಿಕಾರಿ, ಸಾರ್ವಜನಿಕವಾಗಿ ಅವರ ಅಧಿನ ಅಧಿಕಾರಿಗಳನ್ನು ನಿಂದಿಸಿದರು. ಅವರ ವರ್ತನೆಯನ್ನು ಖಂಡಿಸಿದ್ದರು. ಈ ಘಟನೆ ನನಗೆ ‘ವ್ಯವಸ್ಥೆಯಲ್ಲಿ ನಂಬಿಕೆ ಇಡುವಂತೆ ಮಾಡಿತು’ ಎಂದು ವಿಧಾನ ಸಭೆಯಲ್ಲಿ ತಮ್ಮ ಅನುಭದ ಕಹಿ ಘಟನೆಗಳನ್ನು ಶಾಸಕ ಲೋನ್​ ತಿಳಿಸಿದರು.

ವಿಚಾರಣೆಗೆ ಒಳಗಾದ 32 ಜನರ ಪೈಕಿ 27 ಮಂದಿ ಉಗ್ರಗಾಮಿ ಸಂಘಟನೆಗೆ ಸೇರಿದ್ದಾರೆ ಎಂದು ಕೆಲ ವರ್ಷಗಳ ಬಳಿಕ ತಿಳಿಯಿತು ಎಂದು ಲೋನ್​ ಹೇಳಿದ್ದಾರೆ.(ಏಜೆನ್ಸೀಸ್​).

ಕೋವಿಡ್‌ ಹಗರಣ: ತನಿಖೆಗೆ ಆಯೋಗ ಶಿಫಾರಸು! ಬಿಎಸ್​ವೈ, ವಿಜಯೇಂದ್ರ ಕೊಟ್ಟ ಪ್ರತಿಕ್ರಿಯೆ ಹೀಗಿದೆ

Share This Article

ಸಾಮಾನ್ಯವಾಗಿ ಮಾಡುವ ಈ ತಪ್ಪುಗಳಿಂದಲೇ ಲೈಂಗಿಕ ಜೀವನದಲ್ಲಿ ಸಾಕಷ್ಟು ಸಮಸ್ಯೆ ಎದುರಿಸಬೇಕಾಗುತ್ತೆ ಎಚ್ಚರ! Relationship Tips

Relationship Tips : ಪರಸ್ಪರ ತಿಳುವಳಿಕೆಯುಳ್ಳ ಉತ್ತಮ ಲೈಂಗಿಕ ಜೀವನವು ಸಂತೋಷದ ದಾಂಪತ್ಯಕ್ಕೆ ಕಾರಣವಾಗುತ್ತದೆ. ಲೈಂಗಿಕ…

ಬ್ರೆಡ್​​ ಇಲ್ಲದೆ ಮನೆಯಲ್ಲೇ ಮಾಡಿ ಸ್ಯಾಂಡ್ವಿಚ್​; ಇಲ್ಲಿದೆ ಸಿಂಪಲ್​ ವಿಧಾನ | Recipe

ತ್ವರಿತ ಉಪಹಾರಕ್ಕಾಗಿ ಸ್ಯಾಂಡ್ವಿಚ್ ಮಾಡುವುದು ಜನರ ಮೊದಲ ಆಯ್ಕೆಯಾಗಿದೆ. ಮಕ್ಕಳು ಟಿಫಿನ್ ಮುಗಿಸಿ ಅದೇ ಟಿಫಿನ್…

ಒಣದ್ರಾಕ್ಷಿಯಿಂದಾಗುವ ಆರೋಗ್ಯ ಪ್ರಯೋಜನ ಗೊತ್ತಿದೆ; ಮನೆಯಲ್ಲೇ Dry Grapes ತಯಾರಿಸುವ ವಿಧಾನ ಇಲ್ಲಿದೆ | Recipe

ಒಣದ್ರಾಕ್ಷಿ ತಿನ್ನುವುದರಿಂದ ಹಲವಾರು ಪ್ರಯೋಜನಗಳಿವೆ. ಆದರೆ ಒಣದ್ರಾಕ್ಷಿಯಲ್ಲಿ ಯಾವುದೇ ಕಲಬೆರಕೆ ಇಲ್ಲಿದಿದ್ದಾಗ ಮಾತ್ರ ಈ ಪ್ರಯೋಜನ…