ನೀನು ನನ್ನ ಹೆಂಡತಿ ಇದ್ದಂತೆ ಎಂದು ಧವನ್ ಹೇಳಿದ್ದು ಯಾರಿಗೆ?

blank

ನವದೆಹಲಿ: ಟೀಮ್ ಇಂಡಿಯಾದ ಎಡಗೈ ಆರಂಭಿಕ ಶಿಖರ್ ಧವನ್, 2012ರಲ್ಲಿ ಬಿರುಸಿನ ಶತಕದ ಮೂಲಕ ಟೆಸ್ಟ್ ಕ್ರಿಕೆಟ್‌ಗೆ ಎಂಟ್ರಿ ಕೊಟ್ಟಿದ್ದವರು. ವೀರೇಂದ್ರ ಸೆಹ್ವಾಗ್-ಗೌತಮ್ ಗಂಭೀರ್ ಜೋಡಿಯ ಬಳಿಕ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತ ತಂಡಕ್ಕೆ ಉತ್ತಮ ಆರಂಭ ಒದಗಿಸುವ ಹೊಣೆಗಾರಿಕೆ ಅವರ ಮೇಲಿತ್ತು. ಆ ಸಮಯದಲ್ಲಿ ಅವರಿಗೆ ಸಮರ್ಥ ಸಾಥ್ ನೀಡಿದವರು ತಮಿಳುನಾಡಿನ ಆರಂಭಿಕ ಮುರಳಿ ವಿಜಯ್. ಇವರಿಬ್ಬರು ಜತೆಯಾಗಿ ಕೆಲವು ಅಪೂರ್ವ ಇನಿಂಗ್ಸ್‌ಗಳನ್ನು ಆಡಿದ್ದರೂ, ಇವರಿಬ್ಬರ ನಡುವೆ ಸಾಕಷ್ಟು ವಾಗ್ವಾದಗಳೂ ನಡೆಯುತ್ತಿದ್ದವಂತೆ. ಆಗೆಲ್ಲ ಧವನ್‌ಗೆ ಅವರ ಹೆಂಡತಿಯೇ ನೆನಪಾಗುತ್ತಿದ್ದರಂತೆ!

ಇದನ್ನೂ ಓದಿ: ತವರಿನ ಜನರ ನೆರವಿಗೆ ನಿಂತ ಕೆಕೆಆರ್ ಟೀಮ್​

ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಸಹ-ಆಟಗಾರರಾಗಿರುವ ತಮಿಳುನಾಡಿನವರೇ ಆದ ಸ್ಪಿನ್ನರ್ ಆರ್. ಅಶ್ವಿನ್ ಜತೆಗಿನ ಇನ್‌ಸ್ಟಾಗ್ರಾಂ ಲೈವ್ ಮಾತುಕತೆಯ ವೇಳೆ ಶಿಖರ್ ಧವನ್, ಮುರಳಿ ವಿಜಯ್ ಜತೆಗಿನ ಬ್ಯಾಟಿಂಗ್ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ‘ಮೈದಾನದ ಒಳಗೆ ಮತ್ತು ಹೊರಗೆ ಅವರದು (ಮುರಳಿ ವಿಜಯ್) ಲವಲವಿಕೆಯ ವ್ಯಕ್ತಿತ್ವ. ಅವರೊಂದಿಗೆ ಆಪ್ತವಾಗಿದ್ದೆ. ಆದರೆ ಆಗಾಗ, ಹಾಗೆ ಮಾಡಬೇಡ, ಹೀಗೆ ಮಾಡಬೇಡ ಎಂದು ಹೇಳುತ್ತಿದ್ದರು. ನೀನು ನನ್ನ ಹೆಂಡತಿ ಇದ್ದಂತೆ ಎಂದು ನಾನು ಆಗ ಅವರಿಗೆ ಹೇಳುತ್ತಿದ್ದೆ. ಕೆಲವೊಮ್ಮೆ ರನ್ ಗಳಿಸದೇ ಇದ್ದಾಗ ನಾವು ವಾಗ್ವಾದಕ್ಕಿಳಿಯುತ್ತಿದ್ದೆವು. ಆದರೆ ಅದು ಬೇಗನೆ ಬಗೆಹರಿಯುತ್ತಿತ್ತು. ಕೆಲವೊಮ್ಮೆ ಅವರನ್ನು ಅರ್ಥಮಾಡಿಕೊಳ್ಳುವುದು ಕಷ್ಟವಾಗುತ್ತಿತ್ತು. ತಾಳ್ಮೆಯಿಂದ ಇದ್ದರೆ ಅವರನ್ನು ಅರ್ಥಮಾಡಿಕೊಳ್ಳಬಹುದಿತ್ತು’ ಎಂದು ಧವನ್ ನೆನಪಿಸಿಕೊಂಡಿದ್ದಾರೆ.

ಇದನ್ನೂ ಓದಿ: ಯುವರಾಜ್‌ಗೆ ರೈನಾ ಟಾಂಗ್ ನೀಡಿದ್ದೇಕೆ?

‘ಮುರಳಿ ವಿಜಯ್ ಜತೆ ಇನಿಂಗ್ಸ್ ಆರಂಭಿಸುವುದನ್ನು ನಾನು ಆನಂದಿಸುತ್ತಿದ್ದೆ. ನಾವಿಬ್ಬರೂ ಉತ್ತಮ ಸ್ನೇಹಿತರಾಗಿದ್ದೇವೆ. ಮುಂದಿನ ದಿನಗಳಲ್ಲಿ ಅವರೊಂದಿಗೆ ಮತ್ತಷ್ಟು ಸಮಯ ಕಳೆಯುವುದನ್ನು ಮತ್ತು ಮಾತನಾಡುವುದನ್ನು ಎದುರು ನೋಡುತ್ತಿದ್ದೇನೆ’ ಎಂದು ಧವನ್ ಹೇಳಿದ್ದಾರೆ.

ನಿವೃತ್ತಿ ನಂತರ ವೀಕ್ಷಕವಿವರಣೆಕಾರನಾಗುವೆ
ಅಶ್ವಿನ್ ಜತೆಗಿನ ಮಾತುಕತೆಯ ವೇಳೆ ಧವನ್ ನಿವೃತ್ತಿ ನಂತರದ ಯೋಜನೆಗಳನ್ನೂ ವಿವರಿಸಿದ್ದು, ವೀಕ್ಷಕವಿವರಣೆಕಾರರಾಗುವ ಹಂಬಲ ವ್ಯಕ್ತಪಡಿಸಿದ್ದಾರೆ. ‘ತಮಾಷೆಯ ವ್ಯಕ್ತಿತ್ವವೇ ನನ್ನ ಶಕ್ತಿ. ನಾನು ವೀಕ್ಷಕವಿವರಣೆಕಾರನಾದಾಗ ಅದರಲ್ಲಿ ಉತ್ತಮ ಯಶಸ್ಸು ಸಾಧಿಸುವ ವಿಶ್ವಾಸವಿದೆ. ನನ್ನ ಹಿಂದಿ ಭಾಷೆಯೂ ಅತ್ಯುತ್ತಮವಾಗಿದೆ. ಸ್ಫೂರ್ತಿದಾಯಕ ಭಾಷಣವನ್ನೂ ನೀಡಬಲ್ಲೆ. ಕೊಳಲು ನುಡಿಸುವುದನ್ನೂ ಮುಂದುವರಿಸುವೆ’ ಎಂದು 34 ವರ್ಷದ ಧವನ್ ಹೇಳಿಕೊಂಡಿದ್ದಾರೆ. ಅವರು ಭಾರತ ತಂಡದ ಪರ ಇದುವರೆಗೆ 34 ಟೆಸ್ಟ್, 136 ಏಕದಿನ ಮತ್ತು 61 ಟಿ20 ಪಂದ್ಯ ಆಡಿದ್ದು, ಕ್ರಮವಾಗಿ 2315, 5688 ಮತ್ತು 1588 ರನ್ ಗಳಿಸಿದ್ದಾರೆ.

Share This Article

ಇತ್ತೀಚೆಗೆ ಜನಪ್ರಿಯತೆ ಗಳಿಸುತ್ತಿರುವ ಬ್ಲೂ ಝೋನ್ ಡಯಟ್​ ಅಂದ್ರೆ ಏನು? ತೂಕ ಇಳಿಕೆಗೆ ಹೇಗೆ ಸಹಕಾರಿ? Blue Zone Diet

Blue Zone Diet : ಬ್ಲೂ ಝೋನ್ ಆಹಾರ ಪದ್ಧತಿ ಇತ್ತೀಚೆಗೆ ಭಾರಿ ಜನಪ್ರಿಯತೆ ಗಳಿಸುತ್ತಿದೆ.…

ನಿಮ್ಮ ನೆಚ್ಚಿನ ಹಣ್ಣುನ್ನು ಆಯ್ಕೆ ಮಾಡಿ.. ನಿಮ್ಮ ವ್ಯಕ್ತಿತ್ವವನ್ನು ತಿಳಿದುಕೊಳ್ಳಿ!.. Personality Test

Personality Test : ಒಬ್ಬ ವ್ಯಕ್ತಿ ಹೇಗಿದ್ದಾನೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ತುಂಬಾ ಕಷ್ಟ. ವ್ಯಕ್ತಿಯ ವ್ಯಕ್ತಿತ್ವವನ್ನು…

ಚಾಣಕ್ಯ ನೀತಿಯಲ್ಲಿನ ಈ 4 ವಿಷಯಗಳನ್ನು ನೆನಪಿನಲ್ಲಿಡಿ; ಸಂಬಂಧದಲ್ಲಿ ಮೋಸ ಹೋದ ನೋವನ್ನು ನೀವು ಅನುಭವಿಸಬೇಕಿಲ್ಲ.. | Chanakya Niti

ಕಾಲಾನಂತರದಲ್ಲಿ ಜನರ ಬದಲಾಗುತ್ತಿರುವ ಆಲೋಚನೆಗಳಲ್ಲಿ ನಿಜವಾದ ಪ್ರೀತಿ ಕಳೆದುಹೋಗುತ್ತಿದೆ. ಈ ಜಗತ್ತಿನಲ್ಲಿ ನಿಮ್ಮನ್ನು ಉತ್ಸಾಹದಿಂದ ಪ್ರೀತಿಸುವ…