ಐಟಿ ದಾಳಿ ವೇಳೆ 5 ಕೋಟಿ ರೂ.ನಗದು ಪತ್ತೆ : ನಗದು ವಶಕ್ಕೆ ಪಡೆದ ಅಧಿಕಾರಿಗಳು

ಬೆಂಗಳೂರು: ಮಾಜಿ ಉಪ ಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ ಹಾಗೂ ಆರ್​.ಎಲ್​.ಜಾಲಪ್ಪ ಅವರ ಒಡೆತನದ ಶಿಕ್ಷಣ ಸಂಸ್ಥೆಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ ವೇಳೆ 5 ಕೋಟಿ ರೂಪಾಯಿ ನಗದು ಪತ್ತೆಯಾಗಿದೆ.


ಬೆಂಗಳೂರು, ತುಮಕೂರು, ಕೋಲಾರ ಸೇರಿ 25 ಕಡೆಗಳಲ್ಲಿ ದಾಳಿ ನಡೆಸಿದಾಗ ಹಣ ಪತ್ತೆಯಾಗಿದೆ ಎಂದು ಐಟಿ ಅಧಿಕಾರಿಗಳು ತಿಳಿಸಿದ್ದಾರೆ.


ಡಾ. ಜಿ.ಪರಮೇಶ್ವರ ಅವರ ಕುಟುಂಬ 58 ವರ್ಷಗಳ ಹಿಂದೆ ಅವರ ತಂದೆ ಎಚ್ ಎಂ ಗಂಗಾಧರಯ್ಯ ಸ್ಥಾಪಿಸಿದ ಸಿದ್ಧಾರ್ಥ ಸಮೂಹ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದೆ. ಜಾಲಪ್ಪ ಅವರ ಪುತ್ರ ರಾಜೇಂದ್ರ ಅವರು ದೊಡ್ಡಬಳ್ಳಾಪುರ ಹಾಗೂ ಮತ್ತು ಕೋಲಾರದಲ್ಲಿ ಆರ್​ ಎಲ್​ ಜಾಲಪ್ಪ ಶಿಕ್ಷಣ ಸಂಸ್ಥೆ ನಡೆಸುತ್ತಿದ್ದಾರೆ.
ನೀಟ್ ಪರೀಕ್ಷೆಗೆ ಸಂಬಂಧಿಸಿದ ಬಹು ಕೋಟಿ ರೂಪಾಯಿ ತೆರಿಗೆ ವಂಚನೆಯಾಗಿರುವುದರಿಂದ ದಾಳಿ ನಡೆಸಲಾಗಿದೆ ಎಂದು ಐಟಿ ಅಧಿಕಾರಿಗಳು ತಿಳಿಸಿದ್ದಾರೆ.


ಡಾ. ಜಿ. ಪರಮೇಶ್ವರ ಅವರ ಸಹೋದರ ಜಿ.ಶಿವಪ್ರಸಾದ್ ಮತ್ತು ಕಚೇರಿ ಸಹಾಯಕ ರಮೇಶ್ ಅವರ ನಿವಾಸದಲ್ಲೂ ಅಧಿಕಾರಿಗಳು ಶೋಧ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *