ಫಲಿತಾಂಶ ನೋಡಿ ಧೈರ್ಯಗೆಡಬೇಡಿ, ನಮ್ಮ ಮಾಲೀಕರಾದ ಜನತೆ ನೀಡಿರುವ ತೀರ್ಪನ್ನು ಗೌರವಿಸೋಣ: ರಾಹುಲ್​

ನವದೆಹಲಿ: ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಜನತೆಯೇ ಮಾಲೀಕರು ಎಂದು ಹೇಳಿದ್ದೆ. ಹಾಗಾಗಿ, ನಮ್ಮ ಮಾಲೀಕರಾದ ಜನತೆ ನೀಡಿರುವ ತೀರ್ಪನ್ನು ಒಪ್ಪಿಕೊಳ್ಳುತ್ತೇವೆ ಎಂದು ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ಹೇಳಿದ್ದಾರೆ.

ನವದೆಹಲಿಯಲ್ಲಿ ಎಐಸಿಸಿ ಪ್ರಧಾನ ಕಚೇರಿಯಲ್ಲಿ ಗುರುವಾರ ಆಯೋಜನೆಗೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಭಾರಿ ಜಯ ದಾಖಲಿಸಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಯನ್ನು ಅಭಿನಂದಿಸಿದರು.

ಈ ಬಾರಿಯ ಫಲಿತಾಂಶ ಕಂಡು ಧೈರ್ಯಗೆಡುವ ಅವಶ್ಯಕತೆ ಇಲ್ಲ. ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದವರು, ಸೋತವರು ಮತ್ತು ಪಕ್ಷದ ಕಾರ್ಯಕರ್ತರೆಲ್ಲರಿಗೂ ಈ ಮಾತು ಅನ್ವಯ ಎಂದರು.

ಅಮೇಠಿಯಲ್ಲಿ ತಮ್ಮ ವಿರುದ್ಧ ಬಿಜೆಪಿಯ ಸ್ಮೃತಿ ಇರಾನಿ ಗೆದ್ದಿದ್ದಾರೆ. ಬೇರೊಂದು ರಾಜ್ಯದಿಂದ ಬಂದು ಇಲ್ಲಿ ಸ್ಪರ್ಧಿಸಿ ಗೆದ್ದಿರುವ ಅವರಿಗೆ ಅಭಿನಂದನೆಗಳು. ಅನ್ಯರಾಜ್ಯದವರಾದರೂ ಅವರ ಮೇಲೆ ನಂಬಿಕೆ ಇಟ್ಟು ಆಯ್ಕೆ ಮಾಡಿರುವ ಅಮೇಠಿ ಜನತೆಯ ನಿರ್ಧಾರವನ್ನು ಸ್ವಾಗತಿಸುವುದಾಗಿ ಹೇಳಿದರು. (ಏಜೆನ್ಸೀಸ್​)

Leave a Reply

Your email address will not be published. Required fields are marked *