#MeToo: ನಾನಾ ಪಾಟೇಕರ್‌ ಅಸಭ್ಯ ಎನ್ನುವುದು ನನಗೆ ಗೊತ್ತು ಎಂದ ರಾಜ್‌ ಠಾಕ್ರೆ

ಅಮರಾವತಿ: ನಟ ನಾನಾ ಪಾಟೇಕರ್‌ ‘ಅಸಭ್ಯ’ ವ್ಯಕ್ತಿ. ಆದರೆ ಓರ್ವ ನಟನೆಯ ಚಳುವಳಿಕಾರನಾಗಿ ಅವರನ್ನು ನಾನು ನಂಬುತ್ತೇನೆ. ಬಾಲಿವುಡ್‌ ನಟಿ ತನುಶ್ರೀ ದತ್ತಾ ಮಾಡಿರುವ ಲೈಂಗಿಕ ಕಿರುಕುಳ ಆರೋಪಕ್ಕೆ ಗುರಿಯಾಗಿರುವವರು ಮುಗ್ಧರು ಎಂದು ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಮುಖ್ಯಸ್ಥ ರಾಜ್‌ ಠಾಕ್ರೆ ಹೇಳಿದ್ದಾರೆ.

ನಾನಾ ಪಾಟೇಕರ್‌ ನನಗೆ ಗೊತ್ತು. ಅವರು ಅಸಭ್ಯರು. ಅವರು ಅಸಾಮಾನ್ಯ ಕೆಲಸಗಳನ್ನು ಮಾಡುತ್ತಾರೆ ಆದರೆ ಈ ರೀತಿಯ ಕೆಲಸಗಳನ್ನು ಮಾಡಿದ್ದಾರೆ ಎನ್ನುವುದನ್ನು ನಾನು ಯೋಚಿಸಿಯೇ ಇರಲಿಲ್ಲ. ಈ ವಿಚಾರವನ್ನು ನ್ಯಾಯಾಲಯ ನೋಡಿಕೊಳ್ಳುತ್ತದೆ. ಇದರೊಂದಿಗೆ ಮಾಧ್ಯಮಗಳು ಏನು ಮಾಡಲು ಸಾಧ್ಯ? ಮೀ ಟೂ ಅಭಿಯಾನ ಒಂದು ಗಂಭೀರ ವಿಷಯ. ಅದರ ಕುರಿತು ಕೇವಲ ಸಾಮಾಜಿಕ ಜಾಲತಾಣಗಳಲ್ಲಷ್ಟೇ ಚರ್ಚೆಯಾಗುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಕೇವಲ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿರುವ ಮೀಟೂ ಅಭಿಯಾನವು ತೈಲ ಬೆಲೆ ಏರಿಕೆ, ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ ಮತ್ತು ನಿರುದ್ಯೋಗ ಸೇರಿ ಇತರೆ ಸರ್ಕಾರದ ವೈಫಲ್ಯಗಳಿಂದ ಜನರ ಗಮನ ಬೇರೆಡೆಗೆ ಸೆಳೆಯಲು ಮಾಡುತ್ತಿರುವ ಪ್ರಯತ್ನವಿರಬಹುದು ಎಂದು ತಿಳಿಸಿದ್ದಾರೆ.

ಯಾವುದೇ ಮಹಿಳೆ ತೊಂದರೆ ಅನುಭವಿಸುತ್ತಿದ್ದರೆ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ನೆರವನ್ನು ಪಡೆಯಬಹುದು. ದೌರ್ಜನ್ಯ ನಡೆದ ಮಹಿಳೆಯರು ಅದರ ವಿರುದ್ಧ ದನಿ ಎತ್ತಬೇಕು. ಬದಲಿಗೆ ಹತ್ತು ವರ್ಷದ ನಂತರವಲ್ಲ ಎಂದು ತಿಳಿಸಿದಿದ್ದಾರೆ. (ಏಜೆನ್ಸೀಸ್)