ನನಗೆ ಕಮಲ‌ ಮಾತ್ರ ಗೊತ್ತು, ಆಪರೇಷನ್ ಗೊತ್ತಿಲ್ಲ ಎಂದ ಎಸ್‌.ಎಂ.ಕೃಷ್ಣ

ಕೋಲಾರ: ನಾನು ನನ್ನ ಕೈ ನೋಡುವುದಕ್ಕೇ ಬರುವುದಿಲ್ಲ. ಹೀಗಿರುವಾಗ ಸಮ್ಮಿಶ್ರ ಸರ್ಕಾರದ ಭವಿಷ್ಯ ಹೇಳಲಾದರೂ ಹೇಗೆ ಸಾಧ್ಯ ಎಂದು ಮಾಜಿ ಸಿಎಂ ಎಸ್.ಎಂ.ಕೃಷ್ಣ ಪ್ರಶ್ನಿಸಿದ್ದಾರೆ.

ರಾಜಕಾರಣದಲ್ಲಿ ನಾನು ಅಷ್ಟು ಸಕ್ರಿಯವಾಗಿಲ್ಲ. ದೂರದಿಂದಲೇ ಎಲ್ಲವನ್ನೂ ಗಮನಿಸುತ್ತಿದ್ದೇನೆ. ರಾಜ್ಯ ರಾಜಕಾರಣದ ಪ್ರಸಕ್ತ ಬೆಳವಣಿಗೆಗಳಿಂದ ದೂರ ಇದ್ದೇನೆ. ನನಗೆ ಕಮಲ‌ ಮಾತ್ರ ಗೊತ್ತು ಆಪರೇಷನ್ ಗೊತ್ತಿಲ್ಲ ಎಂದು ಹೇಳಿದರು.

ಸುಮಲತಾ ಅಂಬರೀಷ್​​​ ಕಾಂಗ್ರೆಸ್​ ಅಭ್ಯರ್ಥಿ ಎಂಬ ಮಾಹಿತಿ‌ ಇಲ್ಲ. ಮಂಡ್ಯದಲ್ಲಿ ಅಭ್ಯರ್ಥಿಯನ್ನು ಅಲ್ಲಿನ ಬಿಜೆಪಿ ಅಧ್ಯಕ್ಷರು ತೀರ್ಮಾನಿಸುತ್ತಾರೆ. ಪ್ರಧಾನಿ ಮೋದಿ ಸಮರ್ಪಕವಾದ ಬಜೆಟ್ ಕೊಟ್ಟಿದ್ದಾರೆ. ಎಲ್ಲ ವರ್ಗಗಳ‌ ಜನರಿಗೆ ಸ್ಪಂದಿಸುವ ಬಜೆಟ್ ಅದಾಗಿದೆ ಎಂದು ಹೇಳಿದರು. (ದಿಗ್ವಿಜಯ ನ್ಯೂಸ್)