More

    ಧೋನಿಯನ್ನು ಇಂದಿಗೂ ಕಾಡುತ್ತಿದೆ ವಿಶ್ವಕಪ್​ ಸಮಿಫೈನಲ್​ ರನೌಟ್​: ಮಾಹಿ ಬೇಸರದಿಂದ ಹೇಳಿದ್ದೇನು ಗೊತ್ತಾ?

    ನವದೆಹಲಿ: ಕಳೆದ ವರ್ಷದ ಜುಲೈ 9ರಂದು ಇಂಗ್ಲೆಂಡ್​ನಲ್ಲಿ ನಡೆದ ಏಕದಿನ ವಿಶ್ವಕಪ್​ ಟೂರ್ನಿಯ ನ್ಯೂಜಿಲೆಂಡ್​ ವಿರುದ್ಧದ ಸೆಮಿಫೈನಲ್​ ಪಂದ್ಯದಲ್ಲಿ ಮಾಜಿ ನಾಯಕ ಎಂ.ಎಸ್​.ಧೋನಿ ಅವರು ರನೌಟ್​ ಆಗಿದ್ದು ಟೀಮ್​ ಇಂಡಿಯಾ ಅಭಿಮಾನಿಗಳಿಗಾದ ಬಹುದೊಡ್ಡ ನಿರಾಸೆ ಎಂದು ಹೇಳಿದರೆ ತಪ್ಪಾಗಲಾರದು.

    ಕೀವೀಸ್​ ಪಡೆ ನೀಡಿದ ಕೇವಲ 240 ರನ್ ಗುರಿ ಬೆನ್ನತ್ತಿದ ಕೊಹ್ಲಿ ಪಡೆ ಒಂದೆಡೆ ವಿಕೆಟ್ ಕಳೆದುಕೊಳ್ಳುತ್ತಾ ಸೋಲಿನ ದವಡೆಯತ್ತ ಸಾಗಿತ್ತು. ಆದರೆ ಕೊನೆಯಲ್ಲಿ ಅದ್ಭುತ ಜತೆಯಾಟವಾಡಿದ ಧೋನಿ ಮತ್ತು ರವೀಂದ್ರ ಜಡೇಜ ಪಂದ್ಯದ ದಿಕ್ಕನ್ನೇ ಬದಲಾಯಿಸಿದ್ದರು. ಕೊನೆಯ 2 ಓವರ್​ನಲ್ಲಿ 31 ರನ್​ ಬೇಕಿದ್ದಾಗ ಲುಕಿ ಫರ್ಗ್ಯೂಸನ್​ ಎಸೆದ 49ನೇ ಓವರ್​ನ ಮೊದಲನೇ ಎಸೆತವನ್ನು ಬೌಂಡರಿ ಗೆರೆ ದಾಟಿಸಿದ್ದರು. ಆದರೆ ಮೂರನೇ ಎಸೆತದಲ್ಲಿ ಎರಡು ರನ್​ ಕದಿಯಲು ಯತ್ನಿಸುವಾಗ ಲಾಂಗ್​ ಆನ್​ನಿಂದ ಮಾರ್ಟಿನ್​ ಗುಪ್ಟಿಲ್​ ಎಸೆದ ಚೆಂಡ್​ ನೇರವಾಗಿ ವಿಕೆಟ್​ಗೆ ಬಡಿದಿದ್ದು ಭಾರತೀಯ ಕ್ರೀಡಾಭಿಮಾನಿಗಳ ಎದೆಗೆ ಬರಸಿಡಿಲು ಬಡಿದಂತಾಯಿತು.

    ಧೋನಿ ಇರೋವರೆಗೂ ಪಂದ್ಯ ನಮ್ಮದೇ ಅಂದುಕೊಂಡಿದ್ದ ಅಭಿಮಾನಿಗಳು ಧೋನಿ ನಿರ್ಗಮನದ ಬಳಿ ಸೋಲು ಗ್ಯಾರೆಂಟಿ ಎಂದು ನಿರ್ಣಯಿಸಿಕೊಂಡರು. ಅದರಂತೆ ಇಂಡಿಯಾ 18 ರನ್​ ಅಂತರದಲ್ಲಿ ಪಂದ್ಯ ಸೋತು ವಿಶ್ವಕಪ್​ನಿಂದಲೇ ಹೊರಬಿದ್ದಿತು. ವಿಪರ್ಯಾಸವೆಂದರೆ ಸೆಮಿಫೈನಲ್​ಗೂ ಮುನ್ನ ಭಾರತ ಒಂದೇ ಒಂದು ಪಂದ್ಯವನ್ನು ಸೋತಿರಲಿಲ್ಲ.

    ಕಾಡುತ್ತಿದೆ ಧೋನಿಗೆ ಪಶ್ಚತಾಪ
    ಮಹತ್ವದ ಪಂದ್ಯದಲ್ಲಿ ರನೌಟ್​ ಆಗಿದ್ದು ಧೋನಿಗೆ ಇಂದಿಗೂ ಕಾಡುತ್ತಿದೆಯಂತೆ. ಮಾಧ್ಯಮ ಸಂದರ್ಶನವೊಂದರಲ್ಲಿ ಮಾತನಾಡಿರುವ ಧೋನಿ, ಅಂದು ನಾನೇಕೆ ಡೈವ್​ ಮಾಡಬಾರದಿತ್ತೆಂದು ನನ್ನಷ್ಟಕ್ಕೇ ನಾನೇ ಪ್ರಶ್ನೆ ಮಾಡಿಕೊಳ್ಳುತ್ತಿದ್ದೇನೆ. ಧೋನಿ ನೀನು ಡೈವ್​ ಮಾಡಬಹುದಿತ್ತು ಎಂದು ನಾನೇ ಕೇಳಿಕೊಳ್ಳುತ್ತೇನೆಂದು ಬೇಸರ ವ್ಯಕ್ತಪಡಿಸಿದ್ದಾರೆ.

    ಅಂದು ಧೋನಿ ಔಟಾದಂತಹ ಸಮಯದಲ್ಲಿ ಭಾರತ ಗೆಲ್ಲಲು 10 ಬಾಲ್​ಗೆ 25 ರನ್​ ಬೇಕಾಗಿತ್ತು. ಇದು ಧೋನಿಗೆ ಸವಾಲೇನಲ್ಲ. ಏಕೆಂದರೆ ಉತ್ತಮ ಫೀನಿಶರ್​ ಎಂಬ ಹೆಸರು ಗಳಿಸಿರುವ ಧೋನಿ, ಒಂದೇ ಓವರ್​ನಲ್ಲಿ 20 ರನ್ ಬಾರಿಸಿ ಪಂದ್ಯ ಗೆಲ್ಲಿಸಿದ ಸಾಕಷ್ಟ ಉದಾಹರಣೆಗಳಿವೆ. ಆದರೆ ಸೆಮಿಫೈನಲ್​ನಲ್ಲಿ ವಿಧಿಯಾಟವೇ ಬೇರೆ ಇತ್ತು ಅನಿಸುತ್ತದೆ.

    ಇದೀಗ ಧೋನಿ ಅವರ ವಿದಾಯದ ಮಾತುಗಳು ಕೇಳಿಬರುತ್ತಿದ್ದು, ಅದಕ್ಕೆ ಪುಷ್ಟಿ ನೀಡುವಂತೆ ಇತ್ತೀಚೆಗಷ್ಟೇ ಟೀಮ್​ ಇಂಡಿಯಾ ಮುಖ್ಯ ತರಬೇತುದಾರ ರವಿಶಾಸ್ತ್ರಿ ಧೋನಿ ನಿವೃತ್ತಿ ಬಗ್ಗೆ ಮಾತನಾಡಿ, ಧೋನಿ ಏಕದಿನ ಪಂದ್ಯಗಳಿಗೆ ಆದಷ್ಟು ಬೇಗ ನಿವೃತ್ತಿ ಘೋಷಿಸಲಿದ್ದಾರೆ. ಆದರೆ ಟಿ20 ಮಾದರಿ ಪಂದ್ಯಗಳನ್ನು ಮುಂದುವರಿಸಲಿದ್ದಾರೆ ಎಂದು ಹೇಳಿದ್ದರು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts