More

    ಕೇಂದ್ರ ಬಜೆಟ್​ಗೆ ಸಲಹೆ, ಸೂಚನೆ ನೀಡಲು ದೇಶದ ಜನರಿಗೆ ಆಹ್ವಾನ ನೀಡಿದ ಪ್ರಧಾನಿ ಮೋದಿ; ‘ಮೈ ಗೌ’ ನಲ್ಲಿ ಅವಕಾಶ

    ನವದೆಹಲಿ: ಕೇಂದ್ರ ಬಜೆಟ್​ ಇರಲಿ, ರಾಜ್ಯದ ಬಜೆಟ್​ ಇರಲಿ ಜನಸಾಮಾನ್ಯರಿಗೆ ಒಂದು ಕುತೂಹಲ, ಅವರದ್ದೇ ಆದ ನಿರೀಕ್ಷೆಗಳು ಇದ್ದೇ ಇರುತ್ತವೆ. ಅದರಲ್ಲೂ ಕೇಂದ್ರ ಬಜೆಟ್​ ಮಂಡನೆಯ ದಿನ ಹತ್ತಿರ ಬಂದರೆ ಇನ್ನೂ ಒಂದು ಪಟ್ಟು ಜಾಸ್ತಿಯೇ ಕುತೂಹಲ.

    ಮುಂಬರುವ ಅಧಿವೇಶನದಲ್ಲಿ ಮಂಡನೆಯಾಗಲಿರುವ ಕೇಂದ್ರ ಬಜೆಟ್​ಗೆ ಸಲಹೆ, ಸೂಚನೆಗಳನ್ನು ನೀಡುವ ಅವಕಾಶವನ್ನು ದೇಶದ ಪ್ರಜೆಗಳಿಗೆ ನೀಡಲಾಗಿದೆ.

    ಪ್ರಧಾನಿ ನರೇಂದ್ರ ಮೋದಿಯವರು ಟ್ವೀಟ್​ ಮಾಡುವ ಮೂಲಕ ಸಲಹೆಗಳನ್ನು ಆಹ್ವಾನಿಸಿದ್ದಾರೆ. ದೇಶದ ನಾಗರಿಕರು ಹಾಗೂ ಕೇಂದ್ರ ಸರ್ಕಾರದ ಕೊಂಡಿಯಾಗಿರುವ ಮೈ ಗೌ (ನನ್ನ ಸರ್ಕಾರ) ವೆಬ್​ ಪೋರ್ಟ್​ಲ್​ ಮೂಲಕ ಬಜೆಟ್​ಗೆ ಸಂಬಂಧಿಸಿದ ಸಲಹೆಗಳನ್ನು ಯಾರು ಬೇಕಾದರೂ ನೀಡಬಹುದು ಎಂದು ಸ್ಪಷ್ಟಪಡಿಸಿದ್ದಾರೆ.

    ಕೇಂದ್ರ ಬಜೆಟ್​ ಈ ದೇಶದ 130 ಕೋಟಿ ಜನರ ಆಶೋತ್ತರಗಳನ್ನು ಪ್ರತಿನಿಧಿಸುತ್ತದೆ. ಅಲ್ಲದೆ ಈ ದೇಶದ ಅಭಿವೃದ್ಧಿಯ ದಾರಿಯನ್ನು ರೂಪಿಸುತ್ತದೆ. ಹಾಗಾಗಿ ನೀವೆಲ್ಲರೂ ಬಜೆಟ್​ ಬಗ್ಗೆ ನಿಮ್ಮ ಕಲ್ಪನೆ, ಸಲಹೆಗಳನ್ನು ಮೌ ಗೌ ವೆಬ್​ನಲ್ಲಿ ಬರೆಯಿರಿ ಎಂದು ನರೇಂದ್ರ ಮೋದಿಯವರು ಟ್ವೀಟ್​ ಮಾಡಿದ್ದಾರೆ.

    ಕೆಲವೇ ದಿನಗಳ ಹಿಂದೆ ಮೈ ಗೌ ಇಂಡಿಯಾ ಟ್ವೀಟ್ ಮಾಡುವ ಮೂಲಕ ಈ ಬಗ್ಗೆ ತಿಳಿಸಿತ್ತು. ನಿಮ್ಮ ಸಲಹೆಗಳನ್ನು ನಮ್ಮೊಂದಿಗೆ ಶೇರ್​ ಮಾಡಿಕೊಳ್ಳಿ ಎಂದು 12 ಸೆಕೆಂಡ್​​ಗಳ ವಿಡಿಯೋ ಶೇರ್​ ಮಾಡಿತ್ತು. ಆ ವಿಡಿಯೋವನ್ನು ರೀಟ್ವೀಟ್ ಮಾಡಿದ ಮೋದಿಯವರೂ ಸಲಹೆಗಳಿಗೆ ಆಹ್ವಾನಿಸಿದ್ದಾರೆ.

    ಅಲ್ಲದೆ, ಭಾರತದ ಆರ್ಥಿಕತೆ ಎದುರಿಸುತ್ತಿರುವ ಸವಾಲುಗಳು, ಬೆಳವಣಿಗೆಗೆ ತೆಗೆದುಕೊಳ್ಳಬೇಕಾದ ಕ್ರಮಗಳು ಹಾಗೂ ಉದ್ಯೋಗ ಸೃಷ್ಟಿಯ ಬಗ್ಗೆ ದೇಶದ ಪ್ರಮುಖ ಉದ್ಯಮಿಗಳೊಂದಿಗೆ ನರೇಂದ್ರ ಮೋದಿಯವರು ಚರ್ಚಿಸಿದ್ದಾರೆ ಎನ್ನಲಾಗಿದೆ. ಈ ಚರ್ಚೆಯಲ್ಲಿ ಮುಖೇಶ್​ ಅಂಬಾನಿ, ಟಾಟಾ ಗ್ರೂಪ್​ನ ರತನ್​ ಟಾಟಾ, ಸುನೀಲ್​ ಭಾರ್ತಿ ಮಿತ್ತಲ್​, ಗೌತಮ್​ ಅದಾನಿ, ಆನಂದ್​ ಮಹೀಂದ್ರಾ ಇತರರು ಇದ್ದರು ಎನ್ನಲಾಗಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts