ರಾಜಕೀಯ ಜೀವನದಲ್ಲಿ ನಾನು ಸಾರ್ವಜನಿಕರ ಆಸ್ತಿ ದೋಚಿಲ್ಲ: ಸಿದ್ದರಾಮಯ್ಯ

ಬೆಂಗಳೂರು: ಎಲ್ಲ ದಾರ್ಶನಿಕರ ಜಯಂತಿ ನಾನೇ ಮಾಡಿದ್ದು. ಹಡಪದ ಹಪ್ಪಣ್ಣ, ಹೇಮರೆಡ್ಡಿ ಮಲ್ಲಮ್ಮ, ವಿಶ್ವಕರ್ಮ ನಿಗಮ ರಚನೆ, ಅಂಬೀಗರ ಚೌಡಯ್ಯ ಸೇರಿ ಎಲ್ಲ ಸಮುದಾಯಗಳ ದಾರ್ಶನಿಕರ ಜಯಂತಿ ಮಾಡಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಕನಕ ಸಮುದಾಯ ಭವನ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ, 2013 ರಿಂದ 2017ರವರೆಗೂ ರಾಜ್ಯದ ಆರ್ಥಿಕ ಸ್ಥಿತಿ ಉತ್ತಮವಾಗಿತ್ತು. ಇನ್ನೂ 5 ವರ್ಷ ಅಧಿಕಾರ ಸಿಕ್ಕರೆ ಇನ್ನು ಏನೆಲ್ಲ ಮಾಡುತ್ತಿದ್ದೆ. ಅಪಪ್ರಚಾರದಿಂದ ಮತ್ತು ಹೊಟ್ಟೆಕಿಚ್ಚಿನಿಂದ ಸೋಲಿಸಿದರು. ಸ್ವಾಭಿಮಾನದಿಂದ ರಾಜಕಾರಣ ಮಾಡಿದ್ದೇನೆ ಹೊರತು ಯಾರಿಗೂ ತಲೆತಗ್ಗಿಸಿಲ್ಲ ಎಂದು ಹೇಳಿದರು.

ವಿಧಾನಸಭಾ ಮತ್ತು ಸಂಸತ್ ಚುನಾವಣೆಗೆ ಹಿಂದುಳಿದ ವರ್ಗಗಳ ಮಹಿಳೆಯರಿಗೆ ಮೀಸಲಾತಿ ಬರಬೇಕು. ಮೀಸಲಾತಿ ಇಲ್ಲದಿದ್ದರೆ ಹಿಂದುಳಿದ ವರ್ಗಗಳ ನಾಯಕರು ಯಾರು ಮುಂದೆ ಬರುತ್ತಿರಲಿಲ್ಲ. ಸಿಎಂ ಆಗಿದ್ದಾಗ ಅಹಿಂದದವರಿಗೆ ಸ್ವಲ್ಪ ಹೆಚ್ಚು ನೆರವು ನೀಡಿದರೂ ಕೂಡ ಎಲ್ಲ ವರ್ಗದವರಿಗೂ ನೆರವು ನೀಡಿದ್ದೇನೆ ಎಂದರು.‌

ಬಂದಮೇಲೆ ಕೇವಲ ಕುರುಬರಿಗೆ ಮಾತ್ರ ಅಸಾರ್ವಜನಿಕರ ಆಸ್ತಿ ದೋಚಬಾರದು. ಅದು ವಿಷ ಇದ್ದ ಹಾಗೆ. ರಾಜಕಾರಣಕ್ಕೆ ಲ್ಲ, ಹಿಂದುಳಿದ ಎಲ್ಲ ವರ್ಗಗಳಿಗೂ ಸಹಾಯ ಮಾಡಿದ್ದೇನೆ. ಪ್ರತಿ ಹಳ್ಳಿ ಹಳ್ಳಿಗೆ ಹೋಗಿ ಕನಕ ಜಯಂತಿ ಮಾಡಿದೆ. ಇದರಿಂದಾಗಿ ಕನಕ ಪೀಠ ರಚನೆಯಾಯಿತು. ಕಾಗಿನೆಲೆ ಪೀಠ ರಚನೆಯಾಗಿ ಸಮುದಾಯದ ಸ್ವಾಮಿಜಿಗಳ ಪೀಠಾರೋಹಣ ನಡೆಯಿತು. ಕಾಗಿನೆಲೆ ಮಠ ಉದ್ಘಾಟನೆ ವೇಳೆ ಕೆ.ಎಸ್.ಈಶ್ವರಪ್ಪ ಮೊದಲ ಸಭೆಗೆ ಬಂದು ವಾಪಸ್ ಬರಲೇ ಇಲ್ಲ ಎಂದು ಹೇಳಿದರು. (ದಿಗ್ವಿಜಯ ನ್ಯೂಸ್)