ನಾನು ಇನ್ಮುಂದೆ ಯಾವುದೇ ಕಾರಣಕ್ಕೂ ಅಳಬಾರದೆಂದು ತೀರ್ಮಾನಿಸಿದ್ದೇನೆ ಎಂದ ಎಚ್‌ಡಿಕೆ

ಬೆಂಗಳೂರು: ನಾವು ಕಣ್ಣೀರು ಹಾಕುತ್ತೇವೆ ಹೌದು. ಆದರೆ ನಾನು ಈಗ ಕಣ್ಣೀರು ಹಾಕುವುದನ್ನು ನಿಲ್ಲಿಸಿದ್ದೇನೆ. ಯಾವುದೋ ಒಂದು ವಿಚಾರಕ್ಕೆ ಕಣ್ಣೀರು ಹಾಕಿದ್ದಕ್ಕೆ ಅದೇ ದೊಡ್ಡದಾಗಿ ಪ್ರಚಾರ ಆಯ್ತು. ಅದಕ್ಕೆ ಏನೇ ಆದರೂ ಕಣ್ಣೀರು ಹಾಕಬಾರದು ಎಂದು ತೀರ್ಮಾನಿಸಿದ್ದೇನೆ ಎಂದು ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ತಿಳಿಸಿದರು.

ದೇವೇಗೌಡರನ್ನು ಭೇಟಿ ಬಳಿಕ ಮಾತನಾಡಿದ ಅವರು, ಪ್ರತಿನಿತ್ಯ ಬರುವ ಜನರ ಕಷ್ಟ ನೋಡಿ ಕಣ್ಣೀರು ಹಾಕುತ್ತೀನಿ. ಇದು ನಮಗೆ ಹೊಸದಲ್ಲ. ಕೆಲವರು ಗ್ಲಿಸರಿನ್‌ ಹಾಕಿಕೊಂಡು ಅಳುತ್ತಾರೆ ಎಂದು ಹೇಳಿದರು. ಅಷ್ಟು ಸುಲಭವಾಗಿ ಅಳು ಬರುವುದಿಲ್ಲ. ಅದು ಹೃದಯದಲ್ಲಿ ಇರುವ ನೋವುಗಳು. ದೇವೇಗೌಡರ ಕೊಡುಗೆ ಈ ಕರ್ನಾಟಕಕ್ಕೆ ಇಲ್ವಾ? ನಾವು ದುಡಿಮೆ ಮಾಡಿದ್ದೇವೆ, ದುಡಿಮೆ ಮಾಡಿರೋದಕ್ಕೆ ಜನರ ಕಷ್ಟಗಳು, ಪರಿಸ್ಥಿತಿಗಳನ್ನು ಅರ್ಥ ಮಾಡಿಕೊಂಡಿದ್ದೇವೆ ಎಂದರು.

ಇವತ್ತು ಮಂಡ್ಯದಲ್ಲಿ ಜನತೆಯನ್ನು ಕೇಳದೆ ನಾನು ರಾಜಕೀಯ ಮಾಡಲು ಆಗುವುದಿಲ್ಲ. ಮಂಡ್ಯ, ಹಾಸನ ಜನತೆಯೇ ನಮ್ಮನ್ನು ಉಳಿಸಿಕೊಂಡಿರುವುದು. ಮಂಡ್ಯದ ರಾಜಕೀಯ ಏನು ಎಂದು ಗೊತ್ತಿದೆ. ಜನಗಳ ಮುಂದೆ ಹೋಗ್ತೀವಿ ಜನಗಳೇ ತೀರ್ಮಾನಿಸುತ್ತಾರೆ. ಏನೋ ಗೋ ಬ್ಯಾಕ್, ಗೋ ಬ್ಯಾಕ್ ಎಲ್ಲಿಂದ ಶುರುವಾಯ್ತು? ಮೊನ್ನೆ ವಿಧಾನಸಭೆಯಲ್ಲಿ ಉತ್ತಮ ಬಜೆಟ್ ಕೊಟ್ರು ಅಂತ ನೀವೆ ಹೊಗಳಿದಿರಿ. ಅಲ್ಲಿಂದಾನೇ ತಾನೇ ಶುರುವಾಗಿದ್ದು ಗೋ ಬ್ಯಾಕ್, ಗೋ ಬ್ಯಾಕ್ ಕುಮಾರಸ್ವಾಮಿ ಎನ್ನುವುದು ಎಂದು ಬಿಜೆಪಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.

ಬಿಜೆಪಿ ನಾಯಕರು ಟ್ವೀಟ್ ಮಾಡಿದ್ದಾರೆ. ಹಾವೇರಿಯಲ್ಲಿ 75 ರೈತ ಕುಟುಂಬಗಳ ಮನೆಗೆ ಯಾವ ನಾಯಕರು ಹೋಗಲಿಲ್ಲ ಆದರೆ ಈ ಕುಮಾರಸ್ವಾಮಿ ಹೋಗಿ 50 ಲಕ್ಷ ಕೊಟ್ಟು ಬಂದೆ. ರಾಯಚೂರು, ಗುಲ್ಬರ್ಗದಲ್ಲಿ 50 ರಿಂದ 60 ಜನ ರೈತರಿಗೆ ಹಣ ಕೊಟ್ಟು ಬಂದಿದ್ದೇನೆ. ಮಂಡ್ಯದಲ್ಲಿ 200 ಜನ ರೈತ ಕುಟುಂಬಗಳಿಗೆ 50 ಸಾವಿರದಿಂದ 1 ಲಕ್ಷ ಹಣ ಕೊಟ್ಟಿದ್ದೇನೆ. ರೈತರನ್ನು ನಾಡಿನ ಜನತೆಯ ನೋವನ್ನು ನಮ್ಮ ಕುಟುಂಬದ ಜನರಂತೆ ನೋಡುತ್ತೇವೆ. ಅವಾಗ ಅಶೋಕ್ ಎಲ್ಲಿ ಹೋಗಿದ್ದ? ದೇವೇಗೌಡ್ರು ಬಗ್ಗೆ ಚರ್ಚೆ ಮಾಡುತ್ತಾನೆ ಅಲ್ವಾ ಯಾವ ರೈತರ ಮನೆಗೆ ಅಶೋಕ್ ಹೋಗಿದ್ದಾನೆ ಹೇಳಿ ಎಂದು ಆರ್‌ ಅಶೋಕ್‌ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದರು.

1000 ಕೋಟಿ ಲೂಟಿ ಒಡೆದವರು ನಮ್ಮ ಕುಟುಂಬದ ಬಗ್ಗೆ ಮಾತನಾಡುತ್ತಾರೆ. ಜಗದೀಶ್ ಶೆಟ್ಟರ್ ಯಾರು? ದೇವೇಗೌಡ್ರುಗೂ ಹಾಸನ ಕ್ಷೇತ್ರಕ್ಕೂ 60 ವರ್ಷ ಸಂಬಂಧವಿದೆ. ಇವತ್ತು ಆ ಕ್ಷೇತ್ರವನ್ನು ಮೊಮ್ಮಗನಿಗೆ ಬಿಟ್ಟುಕೊಟ್ಟಿದ್ದಾರೆ. ದೇವೇಗೌಡರ ಕುಟುಂಬ ಇಲ್ಲ ಅಂದಿದ್ದರೆ ಈ ಪಕ್ಷ ಇರುತ್ತಿತ್ತಾ? ಇವತ್ತು ದೇವೇಗೌಡರನ್ನು ನೋಡಿಯೇ ಈ ಪಾರ್ಟಿಯನ್ನು ಜನತೆ ಉಳಿಸಿದ್ದಾರೆ. ಮನುಷ್ಯತ್ವದಿಂದ ಬದುಕಿದ್ದೇವೆ. ಮನೆ ಹತ್ತಿರ ತಮ್ಮ ಸಮಸ್ಯೆಗಳನ್ನ ಹೇಳಿಕೊಂಡು ಬಂದವರನ್ನು ನೋಡಿ ನಾನು ಕಣ್ಣಿರು ಹಾಕುತ್ತೇನೆ ಎಂದು ಹೇಳಿದರು. (ದಿಗ್ವಿಜಯ ನ್ಯೂಸ್)

One Reply to “ನಾನು ಇನ್ಮುಂದೆ ಯಾವುದೇ ಕಾರಣಕ್ಕೂ ಅಳಬಾರದೆಂದು ತೀರ್ಮಾನಿಸಿದ್ದೇನೆ ಎಂದ ಎಚ್‌ಡಿಕೆ”

Comments are closed.