ಮುಂಬೈ: ಇತ್ತೀಚಿನ ವರ್ಷಗಳಲ್ಲಿ ಜನರು ಒಂದಿಲ್ಲೊಂದು ಖಾಯಿಲೆಯಿಂದ ಬಳಲುತ್ತಿದ್ದು, ಖ್ಯಾತ ನಟ-ನಟಿಯರು ಇದಕ್ಕೆ ಹೊರತಾಗಿಲ್ಲ. ಇತ್ತೀಚಿನ ದಿನಗಳಲ್ಲಿ ಖ್ಯಾತನಾಮರು ತಾವು ವಿಭಿನ್ನ ಹಾಗೂ ವಿಚಿತ್ರ ಖಾಯಿಲೆಗಳಿಂದ ಬಳಲುತ್ತಿರುವುದಾಗಿ ಹೇಳಿಕೊಳ್ಳುತ್ತಿದ್ದು, ಇದಕ್ಕೆ ಬಾಲಿವುಡ್ ನಟ ಅರ್ಜುನ್ ಕಪೂರ್(Arjun Kapoor) ಹೊರತಾಗಿಲ್ಲ ಎಂಬುದಾಗಿ ತಿಳಿದು ಬಂದಿದೆ.
ದೀಪಾವಳಿ ಹಬ್ಬದ ಪ್ರಯುಕ್ತ ರೋಹಿತ್ ಶೆಟ್ಟಿ ನಿರ್ದೇಶನದ ಸಿಂಗಮ್ ರಿಟನ್ಸ್ ಸಿನಿಮಾ ಬಿಡುಗಡೆಯಾಗಿತ್ತು. ಅಜಯ್ ದೇವಗನ್ ನಾಯಕನಾಗಿ ಕಾಣಿಸಿಕೊಂಡರೆ ಅರ್ಜುನ್ ಕಪೂರ್ ಖಳನಟನಾಗಿ ಅಬ್ಬರಿಸಿದ್ದಾರೆ. ಆದರೆ, ಚಿತ್ರೀಕರಣದ ಸಮಯದಲ್ಲಿ ತಮಗಾದ ವಿಚಿತ್ರ ಅನುಭವದ ಕುರಿತು ನಟ ಅರ್ಜುನ್ ಕಪೂರ್ ಮಾತನಾಡಿದ್ದು, ಈ ವಿಚಾರ ಬಿ-ಟೌನ್ನಲ್ಲಿ ಹೊಸ ಚರ್ಚೆಯನ್ನು ಹುಟ್ಟು ಹಾಕಿದೆ.
ನಾನು ಖಿನ್ನತೆಯಿಂದ ಬಳಲುತ್ತಿದ್ದೇನೆ ಎಂಬ ವಿಚಾರ ನನಗೆ ತಿಳಿದೇ ಇರಲಿಲ್ಲ. ಇದನ್ನರಿತಾಗಿ ಚಿಕಿತ್ಸೆಗಾಗಿ ನಾನು ಅಲೆದಾಡಿದೆ. ನಾನು ಸಿನಿಮಾ ಮಾಡುತ್ತಿದ್ದೇನೆ. ನನಗೆ ಮುಂದೆ ಅವಕಾಶಗಳು ಸಿಗುತ್ತಾ ಅಥವಾ ಇಲ್ವ ಎಂಬ ಪ್ರಶ್ನೆ ಕಾಡತೊಡಗಿತು. ನಾನು ಯಾವತ್ತು ನಕರಾತ್ಮಕ ಯೋಚನೆ ಮಾಡುವವನಲ್ಲ. ಆದರೆ, ಪ್ರತಿದಿನ ನಕರಾತ್ಮಕ ಭಾವನೆ ಮೂಡಲು ಶುರುವಾಯಿತು.
ಇದನರಿತು ನಾನು ಚಿಕಿತ್ಸೆಗೆ ಒಳಗಾದೆ. ಏನು ಮಾಡಬೇಕು ಎನ್ನುವುದು ನನಗೆ ಗೊತ್ತಾಗಲಿಲ್ಲ. ಕೊನಗೆ ಒಬ್ಬ ಮಹಿಳಾ ವೈದ್ಯೆ ನನಗೆ ಇರುವ ಖಾಯಿಲೆಯನ್ನು ಮತ್ತು ಖಿನ್ನತೆಯನ್ನು ಪತ್ತೆ ಹಚ್ಚಿದರು. ಅವತ್ತು ನಿಜವಾಗಿಯೂ ನನ್ನ ಜತೆ ಮಾತಾಡುವವರನ್ನ ಕಂಡುಕೊಂಡೆ.
ನನಗೆ ಹಶಿಮೋಟೊಸ್ ಖಾಯಿಲೆ ಇದೆ, ನಾನು ಇದನ್ನು ನಾನು ಒಪ್ಪುತ್ತೇನೆ. ದು ಥೈರಾಡ್ನಿಂದ ವಿಸ್ತಾರಣೆಯಾಗಿದೆ. ಇದರಿಂದ ದೇಹವೂ ಪ್ಲೈಟ್ಮೋಡ್ನಲ್ಲಿರುತ್ತದೆ. ಇದು ನನಗೆ 30 ವರ್ಷ ಇದ್ದಾಗಲೇ ಅವರಿಸಿದೆ. ನನ್ನ ತಾಯಿ ಮತ್ತು ಸಹೋದರಿಗೆ ಈ ಖಾಯಿಲೆ ಇತ್ತು. ಇದು ನಿನಗೂ ಇದೆ ಎಂದು ಹೇಳಿದ್ದರು. ನನಗೆ ಇಲ್ಲ ಎಂದೇ ವಾದಿಸಿದ್ದೆ. ಆದರೆ, ಅಲ್ಲಿದಂದ ಇಲ್ಲಿಯವರೆಗೂ ನನ್ನ ಚಲನಚಿತ್ರಗಳಲ್ಲಿ ದೇಹ ಬದಲಾವಣೆಯನ್ನು ಗುರುತಿಸಬಹುದಾಗಿದೆ ಎಂದು ನಟ ಅರ್ಜುನ್ ಕಪೂರ್ ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.