ನಾನು ಅಂದು ಅಮಿತಾಭ್ ಬಚ್ಚನ್ ಆಗಿದ್ದೆ!

blank

ನವದೆಹಲಿ: ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಸ್ಮರಣೀಯ ಸ್ಥಾನವನ್ನು ಪಡೆದುಕೊಂಡಿರುವ ನಾಟ್‌ವೆಸ್ಟ್ ಟ್ರೋಫಿ ಗೆಲುವಿಗೆ ಸೋಮವಾರ 18 ವರ್ಷ ಪೂರೈಸಿದೆ. ಆ ಪಂದ್ಯದ ಹೀರೋ ಮೊಹಮದ್ ಕೈಫ್​ ಆಗಿನ ನೆನಪುಗಳನ್ನು ಹಂಚಿಕೊಂಡಿದ್ದು, ಆ ಗೆಲುವಿನ ಬಳಿಕ ತವರಿಗೆ ಮರಳಿ ಬಂದಾಗ ತಮಗೆ ಬಾಲಿವುಡ್ ಬಾದ್ ಷಾ ಅಮಿತಾಭ್ ಬಚ್ಚನ್ ಆಗಿಬಿಟ್ಟಂಥ ಅನುಭವ ಆಗಿತ್ತಂತೆ!

ಇಂಗ್ಲೆಂಡ್‌ನ 326 ರನ್ ಬೆನ್ನಟ್ಟುತ್ತಿದ್ದಾಗ ಭಾರತ ಕುಸಿತ ಕಂಡಿತ್ತು. ಇದರಿಂದ ಸೋಲಿನ ಭೀತಿ ಆವರಿಸಿತ್ತು. ಆಗ ಮತ್ತೊಬ್ಬ ಯುವ ಬ್ಯಾಟ್ಸ್‌ಮನ್ ಯುವರಾಜ್ ಸಿಂಗ್ ಜತೆಗೂಡಿದ್ದ 21 ವರ್ಷದ ಮೊಹಮ್ಮದ್ ಕೈಫ್​ 121 ರನ್‌ಗಳ ಅಮೋಘ ಜತೆಯಾಟದ ಮೂಲಕ ಪಂದ್ಯವನ್ನು ಭಾರತದತ್ತ ತಿರುಗಿಸಿದ್ದರು. ಕೈಫ್​ 75 ಎಸೆತಗಳಲ್ಲಿ 87 ರನ್ ಸಿಡಿಸಿ ಇನ್ನೂ 3 ಎಸೆತ ಬಾಕಿ ಇರುವಂತೆಯೇ 8 ನಷ್ಟದಲ್ಲಿ ಭಾರತವನ್ನು ಗೆಲುವಿನ ದಡ ಸೇರಿಸಿದ್ದರು. ಈ ಸಾಧನೆಯ ಬಳಿಕ ಅವರು ತವರೂರು ಅಲಹಾಬಾದ್‌ಗೆ ಬಂದಾಗ ಅಭೂತಪೂರ್ವ ಸ್ವಾಗತ ಲಭಿಸಿತ್ತು.

ಇದನ್ನೂ ಓದಿ: ಮಾಸ್ಕ್ ಧರಿಸಿ ಬ್ರಾ ತ್ಯಜಿಸಿ, ಕರೊನಾಗೆ ಗಾಲ್ಫ್ ಆಟಗಾರ್ತಿ ಮದ್ದು!

‘ಆ ಸಾಧನೆಯ ಬಳಿಕ ನಾನು ಮತ್ತೊಂದು ವಿಶೇಷ ಮ್ಯಾಜಿಕ್ ನೋಡಿದ್ದೆ. ನಾನು ಅಲಹಾಬಾದ್‌ಗೆ ಮರಳಿ ಬಂದಾಗ ನನ್ನನ್ನು ತೆರೆದ ಜೀಪ್‌ನಲ್ಲಿ ಮೆರವಣಿಗೆ ಮಾಡಲಾಗಿತ್ತು. ನನ್ನ ಮನೆಯ 5-6 ಕಿಲೋಮೀಟರ್ ದೂರವನ್ನು ಕ್ರಮಿಸಲು ಆಗ 3-4 ಗಂಟೆ ಹಿಡಿದಿತ್ತು. ಜನರು ರಸ್ತೆಯುದ್ದಕ್ಕೂ ನಿಂತಿದ್ದರು. ಜಯೋಷಗಳನ್ನು ಹಾಕುತ್ತಿದ್ದರು. ಹೂವು ಚೆಲ್ಲುತ್ತಿದ್ದರು. ಅವರ ಮುಖದಲ್ಲೆಲ್ಲ ನಗು ಇತ್ತು. ನನ್ನ ತವರೂರಿನ ಚುನಾವಣೆಯಲ್ಲಿ ಅಭಿತಾಭ್ ಬಚ್ಚನ್ ಅವರು ಸ್ಪರ್ಧಿಸಿ ಗೆದ್ದಾಗ ಅವರನ್ನು ತೆರೆದ ಜೀಪಿನಲ್ಲಿ ಮೆರವಣಿಗೆ ಮಾಡಿದ್ದನ್ನು ನಾನು ಬಾಲ್ಯದಲ್ಲಿ ನೋಡಿದ್ದೆ. ಆ ದಿನ ನನಗೂ ಅಮಿತಾಭ್ ಬಚ್ಚನ್ ಆಗಿಬಿಟ್ಟಂತೆ ಅನಿಸಿತ್ತು’ ಎಂದು ಮೊಹಮದ್ ಕೈಫ್​ ಮೆಲುಕು ಹಾಕಿದ್ದಾರೆ.

ಆ ಪಂದ್ಯದ ವೇಳೆ ಕೈಫ್​ ಮನೆಯವರು ಕೂಡ ಗೆಲುವಿನ ಆಸೆ ಕೈಚೆಲ್ಲಿದ್ದರು. ಸಚಿನ್ ತೆಂಡುಲ್ಕರ್ ಔಟಾದ ಬಳಿಕ ಅವರು ಪಂದ್ಯ ನೋಡಿರಲಿಲ್ಲ ಮತ್ತು ಶಾರುಖ್ ಖಾನ್ ಅವರ ಸಿನಿಮಾ ನೋಡಲು ಥಿಯೇಟರ್‌ಗೆ ಹೋಗಿದ್ದರು. ‘ಸಚಿನ್ ಔಟಾದ ಬಳಿಕ ನಾನು ಮೈದಾನಕ್ಕೆ ಇಳಿಯುತ್ತಿದ್ದರೆ, ಜನರು ಕ್ರೀಡಾಂಗಣದಿಂದ ಹೊರನಡೆಯುತ್ತಿದ್ದರು. ನನ್ನ ಮನೆಯವರು ಕೂಡ ಸಚಿನ್ ಔಟಾದ ನಂತರ ಪಂದ್ಯ ನೋಡಿರಲಿಲ್ಲ ಎಂದು ನನಗೆ ಬಳಿಕ ತಿಳಿದುಬಂದಿತ್ತು’ ಎಂದು ಕೈಫ್​ ವಿವರಿಸಿದ್ದಾರೆ.

VIDEO: ಲಾರ್ಡ್ಸ್​ ಅಂಗಳದಲ್ಲಿ ನಾಟ್​ವೆಸ್ಟ್​ ಸರಣಿ ವಿಕ್ರಮಕ್ಕೆ 18ರ ನೆನಪು…..

Share This Article

ಈ ಅಭ್ಯಾಸಗಳಿಂದ ನೀವು ಶ್ವಾಸಕೋಶ ಕ್ಯಾನ್ಸರ್​ಗೆ​ ತುತ್ತಾಗಬಹುದು ಎಚ್ಚರ! ತಡೆಗಟ್ಟದ್ದಿದ್ರೆ ಸಾವು ಕಟ್ಟಿಟ್ಟಬುತ್ತಿ | Lung Cancer

Lung Cancer: ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ಕಾಯಿಲೆಗೆ ತುತ್ತಾದವರ ಸಂಖ್ಯೆ ಗಣನೀಯವಾಗಿ ಏರಿಕೆ ಆಗುತ್ತಿದೆ. ವಯಸ್ಸಿನ…

ಪೂರ್ವಾಭಿಮುಖವಾಗಿ ಕುಳಿತು ಪೂಜೆ ಮಾಡುವುದೇಕೆ?; ಇಲ್ಲಿದೆ ಈ ಮಾತಿನ ಹಿಂದಿನ ಅಸಲಿ ಕಾರಣ | Health Tips

ಪೂಜೆ ಮಾಡುವಾಗ ಹೇಗೆ ನಿಯಮಗಳು ಮತ್ತು ನಿಬಂಧನೆಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಲಾಗುತ್ತದೆಯೋ ಅದೇ ರೀತಿಯಲ್ಲಿ ದಿಕ್ಕನ್ನು ಸಹ ಮನಸ್ಸಿನಲ್ಲಿಟ್ಟುಕೊಳ್ಳುವುದು…

ಊಟದ ಬಳಿಕ ಹೊಟ್ಟೆಯು ಬಲೂನ್‌ನಂತೆ ಊದಿಕೊಳ್ಳುತ್ತದೆಯೇ?; ಸಮಸ್ಯೆಗೆ ಇಲ್ಲಿದೆ ಪರಿಹಾರ | Health Tips

ಇತ್ತೀಚೆಗೆ ಜೀವನಶೈಲಿ ಮತ್ತು ಊಟದಿಂದಾಗಿ ಗ್ಯಾಸ್​​ ಸಮಸ್ಯೆಯು ತುಂಬಾ ಸಾಮಾನ್ಯವಾಗಿದೆ. ಇದು ಅನೇಕ ಕಾರಣಗಳಿಂದ ಉಂಟಾಗಬಹುದು.…