ರೈತನನ್ನು ಗುಂಡಿಟ್ಟು ಕೊಂದವರಿಂದ ಸಲಹೆ ಪಡೆದು ಸರ್ಕಾರ ನಡೆಸಬೇಕೆ: ಎಚ್ಡಿಕೆ

Latest News

ಮೂಡಬಿದರೆಯ ತೋಡಾರು ಗ್ರಾಮದ ಅಯ್ಯಪ್ಪ ಭಕ್ತರೊಂದಿಗೆ ಹೆಜ್ಜೆ ಹಾಕುತ್ತಿರುವ ಶ್ವಾನ

ಚಿಕ್ಕಮಗಳೂರು: ತಿರುಪತಿಯಿಂದ ಶಬರಿಮಲೆಗೆ ಪಾದಯಾತ್ರೆ ಮೂಲಕ ಹೊರಟಿರುವ ಭಕ್ತರ ತಂಡದ ಜತೆ ಶ್ವಾನವೊಂದು ತೆರಳಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದರೆಯ...

ವಿಆರ್​ಎಲ್​ ಪ್ರಾಯೋಜಕತ್ವದ ಹಾಫ್​ ಮ್ಯಾರಥಾನ್​ಗೆ ನಟಿ ಸುಮನ್ ನಗರ್‍ಕರ್ ಚಾಲನೆ: ಗಿನ್ನೆಸ್​ ದಾಖಲೆ ಬರೆದ ಓಜಲ್ ನಲವಡಿಗೆ ಸನ್ಮಾನ

ಹುಬ್ಬಳ್ಳಿ: ವಿಆರ್​ಎಲ್ ಪ್ರಾಯೋಜಕತ್ವದಲ್ಲಿ ನಡೆಯುತ್ತಿರುವ ಹಾಫ್ ಮ್ಯಾರಥಾನ್​ಗೆ ಖ್ಯಾತ ನಟಿ ಸುಮನ್ ನಗರ್‍ಕರ್ ಅವರು ಫ್ಲ್ಯಾಗ್ ಆಫ್ ಮಾಡುವ ಮೂಲಕ ಭಾನುವಾರ ಚಾಲನೆ...

16 ವರ್ಷದ ಬಾಲಕನಿಂದ ಸೋದರಸಂಬಂಧಿ ಬಾಲಕಿ ಮೇಲೆ ಅತ್ಯಾಚಾರ

ಗುರುಗ್ರಾಮ: ಹದಿನಾರು ವರ್ಷದ ಬಾಲಕನೊಬ್ಬ ಸೋದರಸಂಬಂಧಿಯ 15 ವರ್ಷದ ಬಾಲಕಿಯನ್ನು ಮಂಚಕ್ಕೆ ಕಟ್ಟಿಹಾಕಿ ಅತ್ಯಾಚಾರ ಎಸಗಿರುವ ಆರೋಪ ಹರಿಯಾಣದ ಗುರುಗ್ರಾಮ 51ನೇ ವಲಯದಲ್ಲಿ...

ಜೀಪಿಗೆ ಅಡ್ಡ ಬಂದ ಕಾಡುಕೋಣವನ್ನು ಹಿಮ್ಮೆಟ್ಟಿಸಿದ ಶ್ವಾನ: ವಿಡಿಯೋ ವೈರಲ್​

ಚಿಕ್ಕಮಗಳೂರು: ವಾಹನಕ್ಕೆ ಅಡ್ಡ ಬಂದ ಕಾಡುಕೋಣವನ್ನು ಶ್ವಾನ ಹಿಮ್ಮೆಟ್ಟಿಸಿದ ಘಟನೆಯ ವಿಡಿಯೋ ಚಿತ್ರೀಕರಣ ವೈರಲ್​ ಆಗಿದೆ. ಮೂಡಿಗೆರೆ ತಾಲೂಕಿನ ಜಾವಳಿ ಗ್ರಾಮದ ಕಾಫಿ ತೋಟದಲ್ಲಿ...

ಅನರ್ಹ ಪದವನ್ನೇ ಟೀಕಾಸ್ತ್ರವನ್ನಾಗಿ ಬಳಸಿಕೊಂಡು ಶ್ರೀಮಂತ್ ಪಾಟೀಲ್​ಗೆ ಟಾಂಗ್​​ ಕೊಟ್ಟ ಮಾಜಿ ಶಾಸಕ ರಾಜು ಕಾಗೆ

ಬೆಳಗಾವಿ: ರಾಜ್ಯದಲ್ಲಿ 15 ಕ್ಷೇತ್ರಗಳಲ್ಲಿ ನಡೆಯಲಿರುವ ಉಪಚುನಾವಣೆಗೆ ಅಭ್ಯರ್ಥಿಗಳ ಕಸರತ್ತು ಆರಂಭವಾಗಿದ್ದು, ಚುನಾವಣಾ ಕಣ ರಂಗೇರುತ್ತಿದೆ. ಸ್ಪರ್ಧಿ-ಪ್ರತಿಸ್ಪರ್ಧಿ ನಡುವಿನ ವಾಕ್ಸಮರ ಆರಂಭವಾಗಿದ್ದು, ಅದು...

ಬೆಂಗಳೂರು: ಕಬ್ಬು ಬೆಳೆಗಾರರ ವಿಚಾರದಲ್ಲಿ ಸರ್ಕಾರ ತಪ್ಪು ಮಾಡಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರು ಹೇಳುವಂತೆ ದುರಹಂಕಾರದಿಂದಲೂ ನಾನು ವರ್ತಿಸಿಲ್ಲ. ಗೊಬ್ಬರ ಕೇಳಿದ ರೈತನನ್ನು ಗುಂಡಿಟ್ಟುಕೊಂದ ಅವರಿಂದ ಸಲಹೆ ಪಡೆದು ನಾನು ಸರ್ಕಾರ ನಡೆಸಬೇಕಾಗಿಲ್ಲ ಎಂದು ಸಿಎಂ ಎಚ್​.ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಕಬ್ಬು ಬೆಳೆಗಾರರ ಪ್ರತಿಭಟನೆ ಇಂದು ತೀವ್ರ ಸ್ವರೂಪ ಪಡೆದುಕೊಂಡಿದ್ದ ಹಿನ್ನೆಲೆಯಲ್ಲಿ ಮತ್ತು ” ನಾಲ್ಕು ವರ್ಷಗಳಿಂದ ಎಲ್ಲಿ ಮಲಗಿದ್ದೆ ತಾಯಿ” ಎಂಬ ತಮ್ಮ ಹೇಳಿಕೆ ಭಾರಿ ಕೋಲಾಹಲ ಉಂಟು ಮಾಡಿದ್ದರ ಹಿನ್ನೆಲೆಯಲ್ಲಿ ಇಂದು ಸಿಎಂ ಎಚ್ಡಿಕೆ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದರು.
ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಸುವುದಾಗಿ ಹೋರಾಟಗಾರರಿಗೆ ಹೇಳಿದ್ದರೂ, ಮಾತುಕತೆಗೆ ಕರೆದಿದ್ದರೂ ಪ್ರತಿಭಟನೆಗೆ ಇಳಿದ ರೈತರ ಧೋರಣೆಯನ್ನು ಈ ವೇಳೆ ಅವರು ಪ್ರಶ್ನಿಸಿದರು.

“ನಾನು ಬಾಯಿ ತಪ್ಪಿಯೂ ಯಾರ ಬಗ್ಗೆಯೂ ಕೆಳಮಟ್ಟಕ್ಕೆ ಇಳಿದು ಮಾತನಾಡುವ ವ್ಯಕ್ತಿಯಲ್ಲ. ಪ್ರತಿಭಟನೆಯಲ್ಲಿ ತೊಡಗಿದ್ದ ಹೆಣ್ಣು ಮಗಳ ಬಗ್ಗೆ ನಾನು ಹೇಳಲಾದ ಮಾತನ್ನು ತಪ್ಪಾಗಿ ಅರ್ಥೈಸಲಾಯಿತು. ಅದನ್ನೇ ಮುಂದಿಟ್ಟುಕೊಂಡು ಬಿಜೆಪಿ ಮತ್ತು ಯಡಿಯೂರಪ್ಪ ಅವರು ನನ್ನನ್ನು ದುರಂಹಕಾರಿ ಎಂದರು. ನಾನು ಎಂದೂ ದುರಹಂಕಾರದ ವರ್ತನೆ ತೋರಿಲ್ಲ. ಇಂದು ನನ್ನನ್ನು ದುರಂಹಕಾರಿ ಎನ್ನುತ್ತಿರುವ ಯಡಿಯೂರಪ್ಪ ಅವರು ತಾವು ಮುಖ್ಯಮಂತ್ರಿಯಾಗಿದ್ದಾಗ ಗೊಬ್ಬರ ಕೇಳಿದ ರೈತನನ್ನೇ ಗುಂಡಿಟ್ಟು ಕೊಲ್ಲಿಸಿದ್ದರು. ಇವರಿಂದ ಸಲಹೆ ಪಡೆದು ನಾನು ಸರ್ಕಾರ ನಡೆಸಬೇಕೇ. ನನ್ನ ಜವಾಬ್ದಾರಿ ನನಗೆ ಗೊತ್ತಿದೆ. ಯಾರಿಂದಲೋ ಹೇಳಿಸಿಕೊಳ್ಳುವ ಅಗತ್ಯವಿಲ್ಲ. ರೈತರನ್ನು ರಕ್ಷಿಸಿಕೊಳ್ಳುವುದು ನನಗೆ ಗೊತ್ತಿದೆ,” ಎಂದು ಹೇಳಿದರು.

“ಕಬ್ಬು ಬೆಳೆಗಾರರ ಹೋರಾಟ ನಡೆದ ಆರಂಭದಲ್ಲೇ, ಪ್ರತಿಭಟನಾಕಾರರ ಮುಖಂಡರೊಂದಿಗೆ ನಾನು ಮಾತನಾಡಿದ್ದೆ. ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದೆ. ಮಾತುಕತೆಗೆ ಬರುವಂತೆ ತಿಳಿಸಿದ್ದೆ. ಅಗತ್ಯವಿದ್ದರೇ ನಾನೇ ಬೆಳಗಾವಿಗೆ ಬಂದು ಹೋರಾಟಗಾರರೊಂದಿಗೆ ಮಾತನಾಡುತ್ತೇನೆ ಎಂದು ಭರವಸೆ ನೀಡಿದ್ದೆ. ಆದರೂ, ಇಂದು ಬೆಂಗಳೂರಿಗೆ ಬಂದು ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸಿದರು. ಇಷ್ಟು ವ್ಯವಸ್ಥಿತವಾಗಿ, ಯಾವ ಕಾರಣಕ್ಕೆ ಪ್ರತಿಭಟನೆ ನಡೆಸುತ್ತಿದ್ದಾರೆ” ಎಂದು ಪ್ರಶ್ನಿಸಿದರು.

ಸುವರ್ಣ ಸೌಧದ ಬಾಗಿಲು ಒಡೆದ ಹೋರಾಟಗಾರ ಮತ್ತು ತಮ್ಮ ವಿರುದ್ಧ ಏಕವಚನದಲ್ಲಿ ಮಾತನಾಡಿದ ಮಹಿಳೆ ಕುರಿತು ಮಾತನಾಡಿದ ಸಿಎಂ, ” ನನ್ನ ರೈತರು ಶಾಂತಿ ಪ್ರಿಯರು. ಅದರೆ, ದಾಂಧಲೆ ನಡೆಸುವವರು, ಟ್ರ್ಯಾಕ್ಟರ್​ಗಳಿಗೆ ಬೆಂಕಿ ಇಟ್ಟು ಪ್ರಕ್ಷುಬ್ಧತೆ ಸೃಷ್ಟಿವವರು ಹೇಗೆ ರೈತರಾಗಲು ಸಾಧ್ಯ? ವಿಧಾನಸೌಧದ ಬಾಗಿಲು ಒಡೆದಿದ್ದು ಅಪರಾಧವಲ್ಲವೇ? ಜನರ ಪ್ರತಿನಿಧಿಯಾದ ಮುಖ್ಯಮಂತ್ರಿಯನ್ನು ಏಕವಚನದಲ್ಲಿ ನಾಲಾಯಕ್​ ಎಂದು ನಿಂದಿಸಿದ್ದು ತಪ್ಪಲ್ಲವೇ? ಅವರು ಅವಮಾನ ಮಾಡಿದ್ದ ಕುಮಾರಸ್ವಾಮಿಯನ್ನಲ್ಲ. ಜನರ ಪ್ರತಿನಿಧಿಯನ್ನು. ಅಪರಾಧ ಮಾಡಿದ ಇವರನ್ನು ಸುಮ್ಮನೆ ಬಿಟ್ಟರೆ ಸಮಾಜಕ್ಕೆ ಹೋಗುವ ಸಂದೇಶವೇನು? ಆದರೂ ಪೊಲೀಸರು ಪ್ರತಿಭಟನಾಕಾರರೊಂದಿಗೆ ದುರ್ವರ್ತನೆ ತೋರದೆ ಸಂಯಮದಿಂದ ನಡೆದುಕೊಂಡರು,” ಎಂದರು.

“ಕರ್ನಾಟಕ ಸರ್ಕಾರ ರೈತರ ಸಾಲಮನ್ನಾ ಮಾಡಿಲ್ಲ,” ಎಂಬ ಪ್ರಧಾನಿ ಮೋದಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿಎಂ ಎಚ್ಡಿಕೆ, “ಸಾಲಮನ್ನಾ ವಿಚಾರದಲ್ಲಿ ರಾಷ್ಟ್ರೀಕೃತ ಬ್ಯಾಂಕ್​ಗಳಿಂದ ಅಸಹಕಾರವಿದೆ. ಅದನ್ನು ಅವರು ಬಗೆಹರಿಸಲಿ. ಸಾಲಮನ್ನಾ ವಿಚಾರದಲ್ಲಿ ಅವರು ಲಘುವಾಗಿ ಮಾತನಾಡುವುದು ಬೇಡ. ಮುಂದಿನ ಬಜೆಟ್​ನಲ್ಲಿ ರೈತರ ಎಲ್ಲ ಸಾಲಮನ್ನಾ ಮಾಡಲು ಸಕಲ ಸಿದ್ಧತೆಗಳನ್ನೂ ನಾನು ಮಾಡಿದ್ದೇನೆ. ಅದರಲ್ಲಿ ಯಾವ ಸಂಶಯವೂ ಇಲ್ಲ,” ಎಂದರು.

ಪರೋಕ್ಷ ಕ್ಷಮೆ

“ನಾಲ್ಕು ವರ್ಷ ಎಲ್ಲಿ ಮಲಗಿದ್ದೆ ತಾಯಿ?,” ಎಂಬ ಹೇಳಿಕೆ ಕುರಿತು ಅಂತಿಮವಾಗಿ ಸಿಎಂ ಎಚ್ಡಿಕೆ ಪರೋಕ್ಷ ಕ್ಷಮೆ ಯಾಚಿಸಿದರು. ಆ ಪದ ಬಳಕೆ ತಪ್ಪಾಗಿದ್ದರೆ ಅದನ್ನು ಹಿಂಪಡೆಯುತ್ತೇನೆ. ಆದರೆ, ನಿಮ್ಮ ಯಾವ ಬೆದರಿಕೆಗೂ ನಾನು ಬಗ್ಗಲಾರೆ,” ಎಂದರು. ‘

ಮಾಧ್ಯಮಗಳ ನಡೆಗೆ ಆಕ್ಷೇಪ

ಇನ್ನೊಂದೆಡೆ ಮಾಧ್ಯಮಗಳ ವಿರುದ್ಧವೂ ಹರಿಹಾಯ್ದ ಎಚ್ಡಿಕೆ, “ಹೇಳಬೇಕಾದ್ದನ್ನು ಬಿಟ್ಟು ಬೇರೆಲ್ಲವನ್ನೂ ಮಾಧ್ಯಮಗಳು ವ್ಯವಸ್ಥಿತವಾಗಿ ಬಿತ್ತರಿಸುತ್ತಿವೆ. ನನ್ನನ್ನು ಟೀಕಿಸುವುದರಿಂದ ಮಾಧ್ಯಮಗಳಿಗೆ ಏನೂ ಸಿಗಲಾರದು. ನನ್ನ ಪ್ರತಿಕೃತಿಗೆ ಕೊಡಲಿ ಏಟು ಹಾಕಿದ ದೃಶ್ಯವನ್ನು ಪದೇ ಪದೆ ತೋರಿಸಿದ್ದರಿಂದ ಮಾಧ್ಯಮಗಳಿಗೆ ಸಿಕ್ಕಿದ್ದಾದರೂ ಏನು? ಇದರಿಂದ ಮುಗ್ಧ ಜನರಿಗೆ ತಪ್ಪು ಸಂದೇಶ ಹೋಗುತ್ತದೆ,”ಎಂದರು.

- Advertisement -

Stay connected

278,507FansLike
569FollowersFollow
608,000SubscribersSubscribe

ವಿಡಿಯೋ ನ್ಯೂಸ್

VIDEO| ಲೋಕಸಭಾಧ್ಯಕ್ಷ ಓಂ...

ಜೈಪುರ: ಬಾಲಿವುಡ್​ ನಟಿ ರಾಣಿ ಮುಖರ್ಜಿ ಅವರ ಮುಂದಿನ ಚಿತ್ರ ಮರ್ದಾನಿ-2ಗೆ ಬಿಡುಗಡೆ ಮುನ್ನವೇ ವಿರೋಧದ ಕೂಗು ಕೇಳಿಬಂದಿದೆ. ಚಿತ್ರದ ವಿರುದ್ಧ ರಾಜಸ್ಥಾನದ ಕೋಟಾ ನಗರದ ನಿವಾಸಿಗಳು ಲೋಕಸಭಾ ಸ್ಪೀಕರ್​...

VIDEO| ಭಾರಿ ಭದ್ರತೆಯೊಂದಿಗೆ...

ಶಬರಿಮಲೆ: ವಿವಾದದ ನಡುವೆಯೇ ಭಾರಿ ಭದ್ರತೆಯೊಂದಿಗೆ ಅಯ್ಯಪ್ಪ ದೇವಸ್ಥಾನದ ಮುಖ್ಯ ದ್ವಾರವನ್ನು ಶನಿವಾರ ಸಂಜೆ ತೆರೆಯಲಾಯಿತು. ಸುದೀರ್ಘ ಎರಡು ತಿಂಗಳ ಮಂಡಲ-ಮಕರವಿಳಕ್ಕು ಪೂಜೆಗಾಗಿ ದೇವಸ್ಥಾನ ಬಾಗಿಲನ್ನು ಇಂದು ತೆರೆಯಲಾಗಿದೆ. ದೇವಸ್ಥಾನದ ಪ್ರಧಾನ...

VIDEO| ಹಿರಿಯ ಗಾಯಕಿ...

ಬೆಂಗಳೂರು: ಹಿರಿಯ ಗಾಯಕಿ ಲತಾ ಮಂಗೇಶ್ಕರ್ (90) ಅನಾರೋಗ್ಯದಿಂದ ಬಳಲುತ್ತಿದ್ದು ಕಳೆದ ಆರು ದಿನಗಳಿಂದ ಮುಂಬೈನಲ್ಲಿರುವ ಬ್ರೀಚ್​ ಕ್ಯಾಂಡಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರ ನಡುವೆ ಕಳೆದೆರಡು ದಿನಗಳಿಂದ...

VIDEO: ನೆಟ್ಟಿಗರ ಪ್ರೀತಿಯನ್ನು...

ನವದೆಹಲಿ: ಈ ನಾಲ್ಕು ತಿಂಗಳ ಪುಟಾಣಿ ಕಪ್ಪುಬೆಕ್ಕಿಗೆ ಎರಡು ಮುಖ ! ಅದರ ವಿಲಕ್ಷಣ ರೂಪಕ್ಕೆ ನೆಟ್ಟಿಗರು ಮನಸೋತಿದ್ದಾರೆ. ಎರಡು ಮುಖದ ಬೆಕ್ಕಿನ ಮರಿ ತುಂಬ ಆರೋಗ್ಯಕರವಾಗಿ ಬೆಳೆಯುತ್ತಿದ್ದು ಅದನ್ನು...

VIDEO: ಸುಮ್ಮಸುಮ್ಮನೆ ಟ್ರಾನ್ಸ್​ಫರ್​...

ನವದೆಹಲಿ: ಸರ್ಕಾರಿ ಕೆಲಸದಲ್ಲಿ ಇರುವವರಿಗೆ ವರ್ಗಾವಣೆ ಸಾಮಾನ್ಯ. ಆದರೆ ಕೆಲವು ಸಲ ಮೇಲಧಿಕಾರಿಗಳ ಸರ್ವಾಧಿಕಾರಿ ಧೋರಣೆಯಿಂದ ಅಧೀನ ಅಧಿಕಾರಿಗಳು ಸುಮ್ಮನೆ ವರ್ಗಾವಣೆಯಾಗುತ್ತಾರೆ. ಸಣ್ಣ ತಪ್ಪಿಗೂ ಬೇರೆ ಕಡೆ ವರ್ಗಗೊಳ್ಳಬೇಕಾದ ಪರಿಸ್ಥಿತಿ ಬರುತ್ತದೆ. ಹಾಗೆ ವರ್ಗಾವಣೆಗೊಂಡ...

VIDEO: ಪುನೀತ್ ರಾಜ್​ಕುಮಾರ್​​...

ಬೆಂಗಳೂರು: ಪುನೀತ್​ ರಾಜ್​ಕುಮಾರ್ ಅವರ ಪಿಆರ್​ಕೆ ಸಂಸ್ಥೆಯಲ್ಲಿ ನಿರ್ಮಾಣವಾಗಿರುವ ಮಾಯಾ ಬಜಾರ್​-2016 ಸಿನಿಮಾದ ಟೀಸರ್​ ನಿನ್ನೆ (ನ.15)ರಂದು ಸಂಜೆ 7.30ಕ್ಕೆ ಬಿಡುಗಡೆಯಾಗಿದೆ. 56 ಸೆಕೆಂಡ್​​ಗಳ ಟೀಸರ್​ ಬಿಡುಗಡೆಯಾಗಿದೆ. ನವೆಂಬರ್​ 8, 2016ರಂದು 500 ರೂ.ಹಾಗೂ...

VIDEO| ಆಯುಷ್ಮಾನ್​ ಭವ...

ಬೆಂಗಳೂರು: ಹ್ಯಾಟ್ರಿಕ್​ ಹಿರೋ ಶಿವರಾಜ್​ಕುಮಾರ್​ ಹಾಗೂ ಡಿಂಪಲ್​ ಕ್ವೀನ್​ ರಚಿತಾ ರಾಮ್ ನಟನೆಯ "ಆಯುಷ್ಮಾನ್​ ಭವ" ಚಿತ್ರ ಇಂದು ತೆರೆಕಂಡಿದೆ. ವಿಶೇಷವೆಂದರೆ ಈ ಚಿತ್ರದ ಮೂಲಕ ಸಂಗೀತ ನಿರ್ದೇಶಕ ಗುರುಕಿರಣ್​...

VIDEO| ಐತಿಹಾಸಿಕ ಪಾತ್ರದಲ್ಲಿ...

ಮುಂಬೈ: ಇತ್ತೀಚೆಗೆ ಬಿಡುಗಡೆಯಾದ ಹೌಸ್​ಫುಲ್​-4 ಚಿತ್ರದ ಯಶಸ್ಸಿನಲ್ಲಿ ತೇಲುತ್ತಿರುವ ಬಾಲಿವುಡ್​ ನಟ ಅಕ್ಷಯ್​ ಕುಮಾರ್​ ತಮ್ಮ ಮುಂದಿನ ಐತಿಹಾಸಿಕ ಪ್ರಾಜೆಕ್ಟ್​ಗೆ ತಯಾರಾಗುತ್ತಿದ್ದಾರೆ. ಪೃಥ್ವಿರಾಜ್​ ಹೆಸರಿನ ಇತಿಹಾಸ ಆಧಾರಿತ ಚಿತ್ರದ ಪೂಜಾ...

VIDEO| ಎಸ್ಸೆಸ್ಸೆಲ್ಸಿಯ ಎಲ್ಲ...

ವಡೋದರಾ: ರಿಮೋಟ್​ ಕಂಟ್ರೋಲ್​ನಿಂದ ಆಪರೇಟ್​ ಮಾಡಬಹುದಾದ 35 ದೇಶೀಯ ಹಗುರ ವಿಮಾನ ಮಾದರಿಗಳನ್ನು ತಯಾರಿಸುವ ಮೂಲಕ 17 ವರ್ಷದ ಹುಡುಗನೊಬ್ಬ ಎಲ್ಲರ ಹುಬ್ಬೇರಿಸಿದ್ದಾನೆ. ಪ್ರಿನ್ಸ್​ ಪಂಚಾಲ್ ವಿಮಾನ ಮಾದರಿ ತಯಾರಿಸಿದ ಹುಡುಗ....

ಒಸಮಾ ಬಿನ್​ ಲಾಡೆನ್​,...

ಇಸ್ಲಮಾಬಾದ್​: ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆ ವಿರುದ್ಧ ಹೋರಾಡಲು ಕಾಶ್ಮೀರಿಗಳಿಗೆ ಉಗ್ರ ತರಬೇತಿ ನೀಡಲಾಗುತ್ತಿತ್ತು ಎಂಬುದನ್ನು ಪಾಕಿಸ್ತಾನದ ಮಾಜಿ ಅಧ್ಯಕ್ಷ, ಪಾಕ್​ ಸೇನೆಯ ಮಾಜಿ ಜನರಲ್​ ಫರ್ವೇಜ್​ ಮುಷರಫ್​ ಅವರು ಒಪ್ಪಿಕೊಂಡಿದ್ದಾರೆ....