ರಾಜಕೀಯಕ್ಕೆ ಬಂದು ಹೆಸರು ಮಾಡುವ ಅಗತ್ಯ ನನಗಿಲ್ಲ; ಅಂಬರೀಷ್ ಕನಸುಗಳನ್ನು ಸಾಕಾರ ಮಾಡಬೇಕಿದೆ

Latest News

24 ಗಂಟೆಯೊಳಗೆ ಕುರಿಯ ಡಬಲ್ ಮರ್ಡರ್ ಆರೋಪಿಯನ್ನು ಬಂಧಿಸಿದ ಪುತ್ತೂರು ಪೊಲೀಸರು

ವಿಜಯವಾಣಿ ಸುದ್ದಿಜಾಲ ಪುತ್ತೂರು ನ.19 ರಂದು ಬೆಳಗ್ಗೆ ಬೆಳಕಿಗೆ ಬಂದ ಜೋಡಿ ಕೊಲೆ ಕೃತ್ಯದ ಆರೋಪಿಯನ್ನು ಕೇವಲ 24 ಗಂಟೆಯಲ್ಲಿ ಬಂಧಿಸುವಲ್ಲಿ ಬಂಧಿಸುವಲ್ಲಿ ದಕ್ಷಿಣ ಕನ್ನಡ ಜಿಲ್ಲಾ...

ಮಾಜಿ ಸಿಎಂ ಸಿದ್ದು ವಿರುದ್ಧ ಗುಡುಗಿದ ಸಿಎಂ ಬಿಎಸ್​ವೈ ಸಂಸದೆ ಸುಮಲತಾ ಬೆಂಬಲ ಕುರಿತು ಹೇಳಿದ್ದು ಹೀಗೆ…

ಬೆಂಗಳೂರು: ಉಪಚುನಾವಣೆಯ ಕದನ ದಿನೇ ದಿನೇ ಕುತೂಹಲ ಕೆರಳಿಸುತ್ತಿದೆ. ಹಾಲಿ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮಾತಿನ ಚಾಟಿ...

ಶಾಸಕ ತನ್ವೀರ್​ ಸೇಠ್​ಗೆ ಭದ್ರತೆ ಹೆಚ್ಚಳ ಮಾಡಿದ ಸರ್ಕಾರ: 24 ತಾಸು 3 ಪಾಳಿಗಳಲ್ಲಿ ಗನ್​ಮ್ಯಾನ್​ ಭದ್ರತೆ

ಮೈಸೂರು: ತೀವ್ರ ಹಲ್ಲೆ ಹಿನ್ನೆಲೆಯಲ್ಲಿ ಶಾಸಕ ತನ್ವೀರ್​ ಸೇಠ್​ಗೆ ಒದಗಿಸಿದ್ದ ಭದ್ರತೆಯನ್ನು ಮೂರುಪಟ್ಟು ಹೆಚ್ಚಳ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ದಿನದ 24 ತಾಸು...

ಸಿನಿಮಾದಂತೆ ರಾಜಕೀಯದಲ್ಲೂ ಮೋಡಿ ಮಾಡಲು ರಜಿನಿ-ಕಮಲ್​ ಸಜ್ಜು: ತ.ನಾಡು ಪಾಲಿಟಿಕ್ಸ್​ ಬಗ್ಗೆ ಮಹತ್ತರ ಸುಳಿವು ನೀಡಿದ ನಟದ್ವಯರು!

ಚೆನ್ನೈ: ತಮಿಳುನಾಡು ರಾಜಕೀಯದಲ್ಲಿ ಭಾರಿ ಬದಲಾವಣೆಯಾಗುವ ಮುನ್ಸೂಚನೆ ಕಾಣುತ್ತಿದೆ. ಅದಕ್ಕೆ ಕಾರಣ ನಟನೆಯಿಂದ ರಾಜಕೀಯಕ್ಕೂ ಹೊರಳಿರುವ ರಜನಿಕಾಂತ್​ ಮತ್ತು ಕಮಲ್​ ಹಾಸನ್​ ಎಂಬುದೇ...

ಕೆಪಿಎಲ್​ ಮ್ಯಾಚ್​ ಫಿಕ್ಸಿಂಗ್ ಹಗರಣ: ಇಂದು 7 ತಂಡಗಳ ಮಾಲೀಕರ ವಿಚಾರಣೆ ನಡೆಸಲಿರುವ ಸಿಸಿಬಿ

ಬೆಂಗಳೂರು: ಕರ್ನಾಟಕ ಪ್ರಿಮೀಯರ್​ ಲೀಗ್​ ಕ್ರಿಕೆಟ್​ ಮ್ಯಾಚ್​ ಫಿಕ್ಸಿಂಗ್​ ಹಗರಣದ ವಿಚಾರಣೆಗೆ 7 ತಂಡಗಳ ಮಾಲೀಕರು ಇಂದು ಹಾಜರಾಗಲಿದ್ದಾರೆ. ಕೆಪಿಎಲ್​ನ 7 ತಂಡಗಳ ಮಾಲೀಕರು...

ಬೆಂಗಳೂರು: ಮಂಡ್ಯದ ಜನರು ಮುಗ್ಧರು. ಆದರೆ, ಮುಠಾಳರಲ್ಲ ಎಂದು ಅಂಬರೀಷ್​ ಯಾವಾಗಲೂ ಹೇಳುತ್ತಿದ್ದರು. ಆ ಮಾತು ಅಕ್ಷರಶಃ ಸತ್ಯ ಎಂದು ಸಾಬೀತು ಮಾಡುವ ಕಾಲ ಮಂಡ್ಯದ ಜನರ ಎದುರು ಬಂದಿದೆ. ಅದನ್ನು ರುಜುವಾತು ಮಾಡುತ್ತಾರೆ ಎಂಬ ಭರವಸೆಯೂ ನನಗೆ ಇದೆ ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಸುಮಲತಾ ಅಂಬರೀಷ್​ ಹೇಳಿದರು.

ಇಂದು ನಾಮಪತ್ರ ಸಲ್ಲಿಸಿದ ಬಳಿಕ ಸಿಲ್ವರ್ ಜ್ಯುಬಿಲಿ ಪಾರ್ಕ್ ನಲ್ಲಿ ಆಯೋಜಿಸಿದ್ದ ಸಮಾವೇಶದಲ್ಲಿ ಮಾತನಾಡಿದ ಅವರು, ನೀವೆಲ್ಲ ನನ್ನ ಪರ ನಿಂತರೆ ನಾನೂ ನಿಮ್ಮ ಪರವೇ ನಿಲ್ಲುತ್ತೇನೆ. ನಿಮ್ಮನ್ನು ಬಿಟ್ಟು ಎಲ್ಲಿಗೂ ಹೋಗುವುದಿಲ್ಲ. ಅಂಬರೀಷ್​ ಹೋದಾಗ ನನ್ನನ್ನು ಸಮಾಧಾನ ಮಾಡಿದ್ದು ಮಂಡ್ಯದ ಜನತೆ. ನಿಮ್ಮೊಂದಿಗೆ ನಾವಿದ್ದೇವೆ ಎಂದು ಭರವಸೆ ಕೊಟ್ಟಿದ್ದೂ ಇದೇ ಜನರು. ಅಂಥವರಿಗೋಸ್ಕರ ನಾನು ಏನಾದರೂ ಮಾಡಬೇಕು ಎಂಬ ಭಾವನೆ ನನ್ನದು ಎಂದರು.

ನನಗೆ ಅಧಿಕಾರದ ದುರಾಸೆ ಇಲ್ಲ. ರಾಜಕೀಯಕ್ಕೆ ಬಂದು ಹೆಸರು ಮಾಡಬೇಕಾದ ಅಗತ್ಯವೂ ಇಲ್ಲ. 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದೇನೆ. ನನಗೆ ನನ್ನದೇ ಆದ ಹೆಸರಿದೆ. ಅಧಿಕಾರದ ಆಸೆಯಿದ್ದರೆ ಅವರು ನೀಡಿದ್ದ ಆಮಿಷಗಳನ್ನು ಒಪ್ಪಿಕೊಳ್ಳುತ್ತಿದ್ದೆ. ಬೆಂಗಳೂರು ದಕ್ಷಿಣದಿಂದ ಸ್ಪರ್ಧಿಸಿದರೆ ಮಂತ್ರಿ ಮಾಡುತ್ತೇವೆ ಎಂದರು. ಆದರೆ, ನನಗೆ ಅದ್ಯಾವುದೂ ಬೇಡ ಎಂದರು.

ಅಂಬರೀಷ್​ ನಿಧನದ ಬಳಿಕ ನನ್ನ ಎದುರು ಎರಡು ದಾರಿಗಳಿದ್ದವು. ಅವರು ನಮ್ಮ ಬದುಕಿಗಾಗಿ ಬೇಕಾದಷ್ಟು ಮಾಡಿ ಹೋಗಿದ್ದಾರೆ. ನಾನು ನನ್ನ ಮಗ ಆರಾಮಾಗಿ ಜೀವನ ಸಾಗಿಸಬಹುದಾಗಿತ್ತು. ಆದರೆ, ಸುಲಭದ ದಾರಿ ಬೇರೆ, ಸರಿಯಾದ ದಾರಿ ಬೇರೆ. ಅಂಬರೀಷ್​ ಬಿಟ್ಟು ಹೋದ ಕನಸು ನನಸು ಮಾಡಬೇಕು. ಅವರು ಅದೆಷ್ಟೋ ಒಳ್ಳೆ ಕೆಲಸಗಳನ್ನು ಮಾಡಿಕೊಟ್ಟಿದ್ದಾರೆ. ವಸತಿ ಸಚಿವರಾಗಿದ್ದಾಗ ಮನೆ ಕಟ್ಟಿಸಿಕೊಟ್ಟಿದ್ದಾರೆ. ಹಳ್ಳಿಹಳ್ಳಿಗಳಲ್ಲಿ ಸಮುದಾಯ ಭವನ, ಶಾಲೆಗಳಿಗೆ ಕಾಂಪೌಂಡ್​ ಕಟ್ಟಿಸಿದ್ದಾರೆ. ಮಂಡ್ಯಕ್ಕೆ ಮೆಡಿಕಲ್​ ಕಾಲೇಜು ತಂದವರು ಅಂಬರೀಷ್​. ಅವರು ಇನ್ನೂ 15-20 ವರ್ಷಗಳ ಕಾಲ ಜೀವಿಸಿದ್ದರೆ ಇನ್ನು ಏನೇನೋ ಸಮಾಜಮುಖಿ ಕೆಲಸ ಮಾಡುತ್ತಿದ್ದರು ಎಂದು ನನಗೆ ಗೊತ್ತು. ಅದನ್ನೆಲ್ಲ ಸಾಕಾರಗೊಳಿಸುವ ಹೊಣೆ ಹೊತ್ತು ಈ ಹೋರಾಟದ ಹೆಜ್ಜೆ ಇಟ್ಟಿದ್ದೇನೆ ಎಂದು ಹೇಳಿದರು.

ಕಾಂಗ್ರೆಸ್​ ಬಾಗಿಲು ತೆರೆಯಲಿಲ್ಲ
ನಾನು ರಾಜಕೀಯಕ್ಕೆ ಬರಬೇಕು ಎಂದು ನಿರ್ಧರಿಸಿದಾಗ ಮೊದಲು ಆದ್ಯತೆ ಕೊಟ್ಟಿದ್ದು ಕಾಂಗ್ರೆಸ್​ಗೆ. ಅದೇ ಪಕ್ಷಕ್ಕಾಗಿ ಅಂಬರೀಷ್​ ಹಲವು ವರ್ಷ ದುಡಿದಿದ್ದಾರೆ. ಆದರೆ, ಟಿಕೆಟ್​ ಕೇಳಿದಾಗ ಆ ಪಕ್ಷದ ಮುಖಂಡರು ಮೈತ್ರಿ ಧರ್ಮ ಪಾಲನೆ ಮುಖ್ಯ ಎಂದರು. ಆದರೆ, ಯಾರು ಎಷ್ಟು ಮೈತ್ರಿ ಧರ್ಮ ಪಾಲಿಸುತ್ತಿದ್ದಾರೆ ಎಂದು ನನಗೆ ಗೊತ್ತು. ಕಾರ್ಯಕರ್ತರು, ಜನರಿಗೆ ಬೆದರಿಕೆ ಹಾಕುವ ಕೆಲಸಗಳೆಲ್ಲ ನಡೆಯುತ್ತದಾ? ಅದಕ್ಕೆಲ್ಲ ನೀವೇ ಉತ್ತರ ಕೊಡಬೇಕು ಎಂದು ಜನರಿಗೆ ಹೇಳಿದರು.

ನನ್ನೆದುರು ಕಠಿಣ ಸವಾಲುಗಳಿವೆ. ನನ್ನ ನಿರ್ಧಾರ ತಿಳಿಸುವ ಮೊದಲೇ ಬಾಣದಂತೆ ಬಂದ ಮಾತುಗಳು ಚುಚ್ಚಿವೆ. ಆದರೆ, ಅವುಗಳಿಗೆ ಯಾವುದಕ್ಕೂ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಜನರೇ ನನ್ನ ಪರ ಮಾತನಾಡುತ್ತಾರೆ ಎಂಬ ನಂಬಿಕೆ ಇದೆ ಎಂದರು.

ನನ್ನ ಮಕ್ಕಳು ನನ್ನ ಪರ ಪ್ರಚಾರಕ್ಕೆ ಬಂದಿದ್ದಾರೆ
ಇವತ್ತು ಇಡೀ ಚಿತ್ರರಂಗ ನನ್ನ ಬೆನ್ನೆಲುಬಾಗಿ ನಿಂತಿದೆ. ಯಶ್​, ದರ್ಶನ್​ ನನ್ನ ಮಕ್ಕಳಾಗಿ ನನ್ನ ಪರ ಪ್ರಚಾರಕ್ಕೆ ಬಂದಿದ್ದಾರೆ. ಇವರೆಲ್ಲ ಮಕ್ಕಳನ್ನು ಚುನಾವಣೆಗೆ ನಿಲ್ಲಿಸಿ, ಅವರ ಪರ ಮತಯಾಚನೆ ಮಾಡಬಹುದು. ನನ್ನ ಮಕ್ಕಳು ನನ್ನ ಜತೆ ಬರಬಾರದಾ? ಚಿತ್ರರಂಗ ನನ್ನ ಜತೆ ಇದೆ ಎಂದು ಹೇಳುವವರು ಯಾರೂ ಚಿತ್ರನಟರನ್ನು ಬಳಸಿಕೊಂಡಿಲ್ಲವಾ ಎಂದು ಸುಮಲತಾ ಪ್ರಶ್ನಿಸಿದರು.

ಯಶ್, ದರ್ಶನ್​, ಅಂಬರೀಷ್​ಗೆ ದೇಶಾದ್ಯಂತ ಅಭಿಮಾನಿಗಳಿದ್ದರೆ. ಹೀಗೆ ಕೆಟ್ಟದಾಗಿ ಮಾತನಾಡುವ ಮೊದಲು ಯೋಚಿಸಬೇಕು. ಬೇರೆಬೇರೆ ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದ್ದೀರಿ. ಅಲ್ಲಿನ ಅಭಿಮಾನಿಗಳ ಮತಗಳಿಂದಲೂ ವಂಚಿತರಾಗಬಹುದು ಎಂದು ಹೇಳಿದರು.

ಇವತ್ತು ಮಹತ್ವದ ದಿನ
ಇಂದು ನಾಮಪತ್ರ ಸಲ್ಲಿಸಿದ್ದು ನನ್ನ ಪಾಲಿಗೆ ವಿಶೇಷ ದಿನ. ನಾನ್ಯಾರೆಂದು ಪ್ರಶ್ನಿಸುವವರಿಗೆ ಉತ್ತರ ನೀಡುವ ಕಾಲ ಇದು. ನಾನು ನಿಮ್ಮ ಊರಿನ ಮಳವಳ್ಳಿ ಹುಚ್ಚೇಗೌಡರ ಸೊಸೆ. ಅಭಿಷೇಕ್​ ಗೌಡ ತಾಯಿ, ಈ ಮಣ್ಣಿನ ತಾಯಿ, ನಿಮ್ಮ ಪ್ರೀತಿಯ ಅಂಬರೀಷ್​ ಅವರ ಧರ್ಮಪತ್ನಿ, ಈ ಮಣ್ಣಿನ ಹೆಣ್ಣುಮಗಳು. ಈ ಮಂಡ್ಯದ ಹೆಣ್ಣುಮಗಳನಾದ ನನ್ನ ಬಳಿ ಯಾರು ಎಂದು ಕೇಳುವವರಿಗೆ ನೀವೇಲ್ಲ ಉತ್ತರ ಕೊಡುತ್ತೀರಿ ಎಂಬ ಭರವಸೆ ಇದೆ ಎಂದರು.

ನಾನು ಅಂಬರೀಷ್​ ಅವರನ್ನು ಪ್ರೀತಿಸುವ ಜನರಿಗಾಗಿ ಎಲ್ಲ ಅವಮಾನ, ನೋವುಗಳನ್ನೂ ನುಂಗಿಕೊಳ್ಳಲು ಸಿದ್ಧನಿದ್ದೇನೆ ಎಂದು ತಿಳಿಸಿದರು.

- Advertisement -

Stay connected

278,614FansLike
572FollowersFollow
610,000SubscribersSubscribe

ವಿಡಿಯೋ ನ್ಯೂಸ್

VIDEO: ಹೆಬ್ಬಾವು-ಚಿರತೆ ನಡುವಿನ...

ಕೀನ್ಯಾ: ಹಾವು-ಮುಂಗುಸಿ, ಬೆಕ್ಕು-ಹಾವು, ಎರಡು ಹುಲಿಗಳ ನಡುವಿನ ಕಾದಾಟದ ವಿಡಿಯೋಗಳನ್ನು ನೋಡಿದ್ದೇವೆ. ಇಂತಹ ವಿಡಿಯೋಗಳು ನೋಡೋದಕ್ಕೆ ಸಿಕ್ಕಾಪಟೆ ರೋಚಕವಾಗಿರುತ್ತವೆ ಕೂಡ. ಈಗ ಅಂಥದ್ದೇ ಒಂದು ವಿಡಿಯೋ ವೈರಲ್​ ಆಗಿದ್ದು ಅದನ್ನು ನೋಡಿದರೆ ಮೈನವಿರೇಳದೆ...

VIDEO| ಜೆಎನ್​ಯು ವಿದ್ಯಾರ್ಥಿಗಳ...

ನವದೆಹಲಿ: ಪಾಕಿಸ್ತಾನದ ಲಾಹೋರ್​​ನಲ್ಲಿ ನಡೆದಿದ್ದ ಫೈಜ್​ ಸಾಹಿತ್ಯೋತ್ಸವದಲ್ಲಿ ವಿದ್ಯಾರ್ಥಿಗಳು ಕೂಗಿದ್ದ "ಆಜಾದಿ" ಘೋಷಣೆಯ ವಿಡಿಯೋವನ್ನು ದೆಹಲಿಯ ಜವಹರ್​ಲಾಲ್​ ನೆಹರು ವಿಶ್ವವಿದ್ಯಾಲಯ(ಜೆಎನ್​ಯು)ದ ವಿದ್ಯಾರ್ಥಿಗಳ ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ತಪ್ಪಾಗಿ ಶೇರ್​ ಮಾಡಲಾಗಿದೆ. "ಜೆಎನ್​ಯು...

VIDEO| ಮೀಮ್ಸ್​ ವಿಡಿಯೋ...

ಬೆಳಗಾವಿ: ಗೋಕಾಕ್​ ಕ್ಷೇತ್ರದ ಉಪಚುನಾವಣೆಯ ಕದನ ತೀವ್ರ ಕುತೂಹಲ ಮೂಡಿಸಿದೆ. ಸಹೋದರರ ನಡುವಿನ ಜಿದ್ದಾಜಿದ್ದಿಯೇ ಅದಕ್ಕೆ ನೇರ ಕಾರಣವಾಗಿದೆ. ಕಾಂಗ್ರೆಸ್​ಗೆ ಗುಡ್​ಬೈ ಹೇಳಿ ಬಿಜೆಪಿ ಸೇರಿಕೊಂಡಿರುವ ಸೋದರ ರಮೇಶ್​ ಜಾರಕಿ...

VIDEO| ಶಾಸಕ ತನ್ವೀರ್​...

ಮೈಸೂರು: ಕಾಂಗ್ರೆಸ್​ ಶಾಸಕ ಹಾಗೂ ಮಾಜಿ ಸಚಿವ ತನ್ವೀರ್‌ ಸೇಠ್ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದ ಪೊಲೀಸ್​ ವಿಚಾರಣೆಯ ವೇಳೆ ಸ್ಪೋಟಕ ಮಾಹಿತಿಗಳು ಬಹಿರಂಗವಾಗುತ್ತಿದೆ. ತನ್ವೀರ್‌ ಸೇಠ್ ಹತ್ಯೆಗೆ ಈ ಹಿಂದೆ...

VIDEO: ಗೋಕಾಕ್​ ಕ್ಷೇತ್ರದಲ್ಲಿ...

ಗೋಕಾಕ್​: ಡಿಸೆಂಬರ್​ 5ಕ್ಕೆ ಉಪಚುನಾವಣೆ ನಡೆಯಲಿದ್ದು ಮೂರು ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುತ್ತಿದ್ದಾರೆ. ಬಹುತೇಕ ಅನರ್ಹರೆಲ್ಲ ತಮ್ಮ ಕ್ಷೇತ್ರಗಳಲ್ಲಿ ಬಿಜೆಪಿಯಿಂದ ಸ್ಪರ್ಧಿಸುತ್ತಿದ್ದಾರೆ. ಆದರೆ ಇವತ್ತು ಕುತೂಹಲ ಮೂಡಿಸಿದ್ದು ಗೋಕಾಕ್​ ಕ್ಷೇತ್ರ. ಇಲ್ಲಿ ಬಿಜೆಪಿಯಿಂದ ರಮೇಶ್​...

ಕೇಂದ್ರ ಪರಿಸರ ಸಚಿವ...

ಬೆಂಗಳೂರು: ದೆಹಲಿಯಲ್ಲಿ ಮಿತಿಮೀರಿದ ವಾಯುಮಾಲಿನ್ಯ ನಿಯಂತ್ರಣಕ್ಕೆ ನಾನಾ ಕ್ರಮಗಳನ್ನು ಸರ್ಕಾರ ತೆಗೆದುಕೊಂಡಿದೆ. ಆದರೂ, ವೈಯಕ್ತಿಕವಾಗಿ ಏನು ಮಾಡಬಹುದು ಎಂಬುದನ್ನು ಕೇಂದ್ರ ಪರಿಸರ ಖಾತೆ ಸಚಿವ ಪ್ರಕಾಶ ಜಾವಡೇಕರ್ ತೋರಿಸಿದ್ದಾರೆ. ಅವರು...

ಜಗತ್ತಿನ ಮೊದಲ ಫೋಲ್ಡೆಬಲ್​...

ಬೀಜಿಂಗ್​: ಕಂಪ್ಯೂಟರ್ ಜಗತ್ತಿನಲ್ಲಿ ನಿತ್ಯವೂ ಹೊಸ ಹೊಸ ಉತ್ಪನ್ನಗಳು ಗ್ರಾಹಕರಿಗೆ ಪರಿಚಯಿಸಲ್ಪಡುತ್ತಲೇ ಇವೆ. ವರ್ಷದ ಹಿಂದೆ ಖರೀದಿಸಿದ ಉತ್ಪನ್ನ ಇಂದಿಗೆ ಔಟ್​ಡೇಟೆಡ್​ ಎನ್ನುವ ಮಟ್ಟಿಗೆ ಇದೆ ಈ ಬದಲಾವಣೆಯ ವೇಗ....

VIDEO| ಲೋಕಸಭಾಧ್ಯಕ್ಷ ಓಂ...

ಜೈಪುರ: ಬಾಲಿವುಡ್​ ನಟಿ ರಾಣಿ ಮುಖರ್ಜಿ ಅವರ ಮುಂದಿನ ಚಿತ್ರ ಮರ್ದಾನಿ-2ಗೆ ಬಿಡುಗಡೆ ಮುನ್ನವೇ ವಿರೋಧದ ಕೂಗು ಕೇಳಿಬಂದಿದೆ. ಚಿತ್ರದ ವಿರುದ್ಧ ರಾಜಸ್ಥಾನದ ಕೋಟಾ ನಗರದ ನಿವಾಸಿಗಳು ಲೋಕಸಭಾ ಸ್ಪೀಕರ್​...

VIDEO| ಭಾರಿ ಭದ್ರತೆಯೊಂದಿಗೆ...

ಶಬರಿಮಲೆ: ವಿವಾದದ ನಡುವೆಯೇ ಭಾರಿ ಭದ್ರತೆಯೊಂದಿಗೆ ಅಯ್ಯಪ್ಪ ದೇವಸ್ಥಾನದ ಮುಖ್ಯ ದ್ವಾರವನ್ನು ಶನಿವಾರ ಸಂಜೆ ತೆರೆಯಲಾಯಿತು. ಸುದೀರ್ಘ ಎರಡು ತಿಂಗಳ ಮಂಡಲ-ಮಕರವಿಳಕ್ಕು ಪೂಜೆಗಾಗಿ ದೇವಸ್ಥಾನ ಬಾಗಿಲನ್ನು ಇಂದು ತೆರೆಯಲಾಗಿದೆ. ದೇವಸ್ಥಾನದ ಪ್ರಧಾನ...

VIDEO| ಹಿರಿಯ ಗಾಯಕಿ...

ಬೆಂಗಳೂರು: ಹಿರಿಯ ಗಾಯಕಿ ಲತಾ ಮಂಗೇಶ್ಕರ್ (90) ಅನಾರೋಗ್ಯದಿಂದ ಬಳಲುತ್ತಿದ್ದು ಕಳೆದ ಆರು ದಿನಗಳಿಂದ ಮುಂಬೈನಲ್ಲಿರುವ ಬ್ರೀಚ್​ ಕ್ಯಾಂಡಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರ ನಡುವೆ ಕಳೆದೆರಡು ದಿನಗಳಿಂದ...