ದಿವ್ಯಾ ಗೋಪಿನಾಥ್​ ಬಳಿ ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ ಎಂದ ಸಚಿವ ಸಾ.ರಾ.ಮಹೇಶ್​

ಬೆಂಗಳೂರು: ಪೊಲೀಸ್​ ಅಧಿಕಾರಿ ದಿವ್ಯಾ ಗೋಪಿನಾಥ್​ ಬಳಿ ಕ್ಷಮೆ ಕೇಳಲ್ಲ. ನಾನು ಯಾವುದೇ ಅಸಾಂವಿಧಾನಿಕ ಪದ ಬಳಸಿಲ್ಲ ಎಂದು ಸಚಿವ ಸಾ.ರಾ.ಮಹೇಶ್​ ಹೇಳಿದರು.

ಲಿಂಗೈಕ್ಯರಾದ ಸಿದ್ಧಗಂಗಾಶ್ರೀ ಕ್ರಿಯಾ ಸಮಾಧಿ ವೇಳೆ ಕರ್ತವ್ಯದಲ್ಲಿದ್ದ ಹಿರಿಯ ಪೊಲೀಸ್​ ಮಹಿಳಾ ಅಧಿಕಾರಿ ದಿವ್ಯಾ ಗೋಪಿನಾಥ್ ಶ್ರೀಗಳ ಗದ್ದುಗೆ ಬಳಿಗೆ ತೆರಳಲು ಅವಕಾಶ ನೀಡಿಲ್ಲ ಎಂದು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್​ ಆವಾಜ್‌ ಹಾಕಿದ್ದು ಚರ್ಚೆಗೆ ಗ್ರಾಸವಾಗಿತ್ತು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಾ.ರಾ.ಮಹೇಶ್​, ದಿವ್ಯಾ ಅವರು ತಮ್ಮನ್ನು ಬಿಡದೆ ಯಾರ್ಯಾರನ್ನೋ ಒಳಗೆ ಬಿಡುತ್ತಿದ್ದರು. ಪ್ರಕರಣದಲ್ಲಿ ನನ್ನದೇನೂ ತಪ್ಪಿಲ್ಲ. ನಾನು ಕ್ಷಮೆ ಕೇಳುವುದಿಲ್ಲ ಎಂದಿದ್ದಾರೆ.

ಸಂವಿಧಾನದ ಪ್ರಕಾರ ಹೋದರೆ ತನಿಖೆ ಮಾಡಬೇಕಾಗುತ್ತದೆ. ಮುಖ್ಯಮಂತ್ರಿಗಳು ಇದನ್ನು ಇಷ್ಟಕ್ಕೇ ಕ್ಲೋಸ್​ ಮಾಡಿದ್ದಾರೆ. ನಾನು ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ

One Reply to “ದಿವ್ಯಾ ಗೋಪಿನಾಥ್​ ಬಳಿ ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ ಎಂದ ಸಚಿವ ಸಾ.ರಾ.ಮಹೇಶ್​”

Comments are closed.