ಮುಂಬೈ: ನಿಮಗೆ ಮೀರಾ ಚೋಪ್ರಾ ನೆನಪಿದೆಯಾ? ಬಹಳ ವರ್ಷಗಳ ಹಿಂದೆ ಬಿಡುಗಡೆಯಾದ ದರ್ಶನ್ ಅಭಿನಯದ ‘ಅರ್ಜುನ್’ ಎಂಬ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾಕೆಯ ಹೆಸರೇ ಮೀರಾ ಚೋಪ್ರಾ. ಈ ಚಿತ್ರವಾದ ನಂತರ ಮೀರಾ, ಕನ್ನಡದಲ್ಲಿ ಯಾವ ಚಿತ್ರದಲ್ಲೂ ನಟಿಸಲಿಲ್ಲ. ಒಂದು ಚಿತ್ರಕ್ಕಷ್ಟೇ ಸೀಮಿತವಾದ ಮೀರಾ, ಹೀಗೆ ಬಂದು ಹಾಗೆ ಮಾಯವಾಗಿಯೇ ಹೋದರು.
ಇದನ್ನೂ ಓದಿ: 15 ವರ್ಷ ಆಯಿತಾ ಮಹೇಶ್ ಬಾಬು ‘ಪೋಕಿರಿ’ಗೆ?
ಈಗ್ಯಾಕೆ ಮೀರಾ ವಿಷಯ ಎಂದರೆ, ಅದಕ್ಕೂ ಕಾರಣವಿದೆ. ಪ್ರಮುಖವಾಗಿ, ಈ ಮೀರಾ, ನಟಿ ಪ್ರಿಯಾಂಕಾ ಚೋಪ್ರಾ ಅವರ ಕಸಿನ್ ಎಂದು ಹೇಳಿಕೊಂಡು ಚಿತ್ರರಂಗಕ್ಕೆ ಬಂದರು. ಆ ನಂತರ ಒಂದಿಷ್ಟು ಚಿತ್ರಗಳಲ್ಲೂ ಆಕೆ ನಟಿಸಿದರು. ಆದರೆ, ಪ್ರಿಯಾಂಕಾ ಕಸಿನ್ ಎಂಬ ಕಾರಣಕ್ಕೆ, ಇದುವರೆಗೂ ಒಂದೇ ಒಂದು ಚಿತ್ರದಲ್ಲೂ ಅವಕಾಶ ಸಿಕ್ಕಿಲ್ಲ ಎಂದು ಮೀರಾ ಹೇಳಿಕೊಂಡಿದ್ದಾರೆ.
ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ‘ನಾನು ಚಿತ್ರರಂಗಕ್ಕೆ ಬಂದ ಹೊಸದರಲ್ಲಿ, ನಾನು ಪ್ರಿಯಾಂಕಾ ಚೋಪ್ರಾ ಕಸಿನ್ ಎಂಬ ಸುದ್ದಿ ಹರಡಿತ್ತು. ಹಾಗಂತ ನನಗೆ ಆಕೆಯಿಂದ ಒಂದೇ ಒಂದು ಚಿತ್ರವೂ ಸಿಗಲಿಲ್ಲ. ಪ್ರತಿ ಚಿತ್ರದ ಹಿಂದೆಯೂ ಒಂದಿಷ್ಟು ಹೋರಾಟಗಳಿವೆ ನಾನು ಇಷ್ಟು ಚಿತ್ರಗಳಲ್ಲೇನಾದರೂ ನಟಿಸಿದ್ದೇನೆ ಎಂದರೆ ಅದು ಸ್ವಂತ ತಾಕತ್ತಿನಿಂದ ಹೊರತು, ಆಕೆಯ ಹೆಸರಿನಿಂದ ಅಲ್ಲ’ ಎಂದು ಮೀರಾ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಕರೊನಾ ನಡುವೆಯೂ ಚಿತ್ರೀಕರಣ ಮುಂದುವರೆಸಿದ ರಜನಿಕಾಂತ್
ಆದರೆ, ಪ್ರಿಯಾಂಕಾ ಕಸಿನ್ ಎಂಬ ಕಾರಣಕ್ಕೆ ಒಂದು ಉಪಕಾರವೂ ಆಗಿದೆ ಎಂದು ಮೀರಾ ಹೇಳಿದ್ದಾರೆ. ‘ಅವಕಾಶಗಳು ಸಿಗದಿದ್ದರೂ, ಪ್ರಿಯಾಂಕಾ ಕಸಿನ್ ಎಂಬ ಕಾರಣಕ್ಕೆ ಒಂದಿಷ್ಟು ಒಳ್ಳೆಯದು ಆಗಿವೆ. ಪ್ರಮುಖವಾಗಿ, ಸಿನಿಮಾ ಗೊತ್ತಿರುವವರ ಕುಟುಂಬದಿಂದ ಬಂದವಳು ಎಂಬ ಕಾರಣಕ್ಕೆ, ಎಲ್ಲರೂ ನನ್ನನ್ನು ಗಂಭೀರವಾಗಿ ನೋಡಿದರೇ ಹೊರತು, ಟೇಕನ್ ಫಾರ್ ಗ್ರಾಂಟೆಡ್ ಮಾಡಿಕೊಳ್ಳಲಿಲ್ಲ’ ಎಂದು ನೆನಪಿಸಿಕೊಂಡಿದ್ದಾರೆ ಮೀರಾ.
ಬೆಡ್, ಆಕ್ಸಿಜನ್ ಒದಗಿಸುವುದು 100 ಕೋಟಿ ಬಜೆಟ್ನ ಚಿತ್ರದಲ್ಲಿ ನಟಿಸುವುದಕ್ಕಿಂತ ದೊಡ್ಡದೆಂದ ಸೋನು ಸೂದ್