ಆನಂದ್​ ಸಿಂಗ್​ ಮೇಲೆ ಹಲ್ಲೆ ಮಾಡಿಲ್ಲ, ಜಗಳದ ವೇಳೆ ಕೆಳಗೆ ಬಿದ್ದರು: ಕುಟುಂಬಸ್ಥರೊಂದಿಗೆ ಹೋಗಿ ಕ್ಷಮೆ ಕೋರುವೆ

ಬೆಂಗಳೂರು: ಶಾಸಕ ಆನಂದ್ ಸಿಂಗ್​ ಮತ್ತು ನನ್ನ ನಡುವೆ ಜಗಳವಾಗಿದ್ದು ನಿಜ. ಆದರೆ, ಅವರ ಮೇಲೆ ನಾನು ಹಲ್ಲೆ ಮಾಡಿಲ್ಲ ಎಂದು ಕಂಪ್ಲಿ ಶಾಸಕ ಗಣೇಶ್​ ಇಂದು ಸ್ಪಷ್ಟನೆ ನೀಡಿದ್ದಾರೆ.

ರಾಮನಗರದ ಬಿಡದಿ ಬಳಿಯ ಈಗಲ್ಟನ್​ ರೆಸಾರ್ಟ್​ನಲ್ಲಿದ್ದ ವೇಳೆ ಶಾಸಕ ಆನಂದ್​ ಸಿಂಗ್​ ಅವರ ಮೇಲೆ ಗಣೇಶ್​ ಹಲ್ಲೆ ನಡೆಸಿದರು, ಅವರ ಹಲ್ಲೆಯಿಂದ ಗಾಯಗೊಂಡ ಆನಂದ್​ ಸಿಂಗ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿದ ಗಣೇಶ್​ ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿದರು.

“ನಾನು, ಭೀಮಾ ನಾಯ್ಕ್​ ಮತ್ತು ಆನಂದ್​ ಸಿಂಗ್​ ಮುಖಾಮುಖಿಯಾಗಿದ್ದ ನಿಜ. ನಾವು ಜಗಳವಾಡಿದ್ದೂ ನಿಜ. ಆದರೆ, ನಾನು ಆನಂದ್​ ಮೇಲೆ ಹಲ್ಲೆ ಮಾಡಲಿಲ್ಲ. ಆಕಸ್ಮಿಕವಾಗಿ ಕೆಳಗೆ ಬಿದ್ದು ಗಾಯಗೊಂಡಿದ್ದಾರಷ್ಟೇ. ಹಲ್ಲೆ ನಡೆದಿದೆ ಎಂಬ ವರದಿಗಳೆಲ್ಲವೂ ಸುಳ್ಳು. ಹಾಗೊಂದು ವೇಳೆ ಆನಂದ್​ ಅವರಿಗೆ ಬೇಸರವಿದ್ದರೆ ನಾನು ನನ್ನ ಕುಟುಂಬ ಸಹಿತ ಹೋಗಿ ಅವರಲ್ಲಿ ಕ್ಷಮೆ ಕೋರುವೆ,” ಎಂದು ಗಣೇಶ್​ ತಿಳಿಸಿದರು.