ಗೋವಿಂದ ಕಾರಜೋಳ ಅವರೇ ನನಗೆ ಬಿಜೆಪಿ ಸೆಟ್ಟಾಗ್ತಿಲ್ಲ; ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ್ದ ಉಮೇಶ್​​ ಜಾಧವ್​​

ಕಲಬುರಗಿ: ‘ಗೋವಿಂದ ಕಾರಜೋಳ ಅವರೇ ನನಗೆ ಬಿಜೆಪಿ ಸೆಟ್ಟಾಗ್ತಿಲ್ಲ’ ಬಿಜೆಪಿ ಏನೆಂದು ಗೊತ್ತಾಗುತ್ತಿಲ್ಲ. ನಿಮ್ಮ ಕಾಲಿಗೆ ಬಿದ್ದು ಕೇಳುತ್ತೇನೆ ನನಗೆ ಸಹಕಾರ ನೀಡಬೇಕು ಎಂದು ಡಾ. ಉಮೇಶ್​​ ಜಾಧವ್​​​​​​ ಹೇಳಿಕೆ ನೀಡಿದ್ದಾರೆ.


ಇಲ್ಲಿ ನಡೆದ ದಲಿತಾ ಸಮಾವೇಶದಲ್ಲಿ ಮಾತನಾಡಿದ ಬಿಜೆಪಿ ಅಭ್ಯರ್ಥಿ ಉಮೇಶ್​​​ ಜಾಧವ್​​​ ಅವರು, ನನಗೆ ಬಿಜೆಪಿ ಪಕ್ಷ ಸರಿಹೊಗುತ್ತಿಲ್ಲ. ನನ್ನ ಗೆಲುವಿಗೆ ನೀವು ಸಹಕಾರ ನೀಡಬೇಕು. ನಿಮ್ಮ ಕಾಲಿಗೆ ಬಿದ್ದು ಕೇಳಿಕೊಳ್ಳುವೆ ಎಂದು ಮಾಜಿ ಸಚಿವ ಗೋವಿಂದ ಕಾರಜೋಳ ಅವರಿಗೆ ಕೈಮುಗಿದು ಕೇಳಿಕೊಂಡಿದ್ದಾರೆ. ಜಾಧವ್​​ ಅವರ ಈ ಹೇಳಿಕೆಯಿಂದ ಬಿಜೆಪಿಗೆ ಇರಿಸುಮುರಿಸು ಉಂಟಾಗಿದೆ.


ಜಾಧವ್​​ ಅವರ ಈ ಹೇಳಿಕೆಯಿಂದ ರಾಜ್ಯದ ಬಿಜೆಪಿ ನಾಯಕರು ತಬ್ಬಿಬ್ಬುಗೊಂಡಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ಪಕ್ಷವನ್ನು ನಂಬಿಕೊಂಡಿದ್ದರೆ ನನಗೆ ಸೋಲು ಖಚಿತ. ಆದ್ದರಿಂದ ನೀವು ನನ್ನ ಗೆಲುವಿಗೆ ಸಹಾಯ ಮಾಡಬೇಕು ಎಂದು ಕೈಮುಗಿದು ಮನವಿ ಮಾಡಿಕೊಂಡಿದ್ದಾರೆ.


ಅನೇಕ ನಿವೃತ್ತಿ ಐಎಎಸ್​​​ ಅಧಿಕಾರಿಗಳು ನನಗೆ ಚುನಾವಣೆಯಲ್ಲಿ ನಿಲ್ಲುವಂತೆ ಹೇಳಿದರು. ಮಲ್ಲಿಕಾರ್ಜುನ ಖರ್ಗೆ ಅವರು ನಮಗೆ ಬಹಳ ನೋವುಂಟು ಮಾಡಿದ್ದಾರೆ. ಅದಕ್ಕೆ ನೀವು ಚುನಾವಣೆಗೆ ನಿಲ್ಲಬೇಕು ನಾವೆಲ್ಲರು ನಿಮಗೆ ಸಹಕಾರ ನೀಡುತ್ತೇವೆ ಎಂದು ಅವರು ಹೇಳಿದ್ದರು ಎಂದು ಜಾಧವ್​​ ಮಾತನಾಡಿದ್ದಾರೆ. ನಮ್ಮ ಮನೆಗೆ ನೀವು ದಿನದ 24 ಗಂಟೆಯಲ್ಲಿ ಯಾವ ಸಮಯದಲ್ಲಿ ಬೇಕಾದರೂ ಬಂದು ಕೈ ಹಿಡಿದು ಕೆಲಸ ಮಾಡಿಕೊಳ್ಳಬಹುದು ಎಂದು ಕಲಬುರಗಿ ಜನತೆಗೆ ಉಮೇಶ್​​ ಜಾಥವ್​​ ಆಶ್ವಾಸನೆ ನೀಡಿದ್ದಾರೆ. (ದಿಗ್ವಿಜಯ ನ್ಯೂಸ್​)