ನನ್ನ ಮಾತಿಗೆ ನಾನು ಬದ್ಧ, ನಮ್ಮ ತಂಡದೊಂದಿಗೆ ರಾಜೀನಾಮೆ ನೀಡುವೆ: ರಮೇಶ್​ಜಾರಕಿಹೊಳಿ

ಬೆಂಗಳೂರು: ಸೌಜನ್ಯಕ್ಕಾಗಿ ಎಸ್​.ಎಂ.ಕೃಷ್ಣ ಅವರನ್ನು ಭೇಟಿ ಮಾಡಲಾಗಿದ್ದು ರಾಜಕೀಯ ಸಂಬಂಧವಾಗಿ ಯಾವುದೇ ವಿಚಾರ ಚರ್ಚೆ ಮಾಡಿಲ್ಲ. ರಾಜೀನಾಮೆ ನೀಡುವ ಮಾತಿಗೆ ನಾನು ಬದ್ಧನಾಗಿದ್ದು, ಯಾವಾಗ ರಾಜೀನಾಮೆ ನೀಡುವೆ ಎಂಬುದಾಗಿ ಹೇಳುವುದಿಲ್ಲ ಎಂದು ಶಾಸಕ ರಮೇಶ್​ ಜಾರಕಿಹೊಳಿ ಹೇಳಿದರು.

ಎಸ್​.ಎಂ.ಕೃಷ್ಣ ಅವರ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ನಮ್ಮ ತಂಡದ ಜತೆಗೆ ರಾಜೀನಾಮೆ ನೀಡುವೆ. ರಾಜೀನಾಮೆ ನೀಡುವ ಹೇಳಿಕೆಗೆ ಬದ್ಧನಾಗಿರುವುದಾಗಿ ಅವರು ತಿಳಿಸಿದರು.

ಎಸ್.ಎಂ.ಕೃಷ್ಣ ನಮ್ಮ ನಾಯಕರಾಗಿದ್ದು ಅಲ್ಲಿ ಚರ್ಚಿಸಿರುವುದರ ಕುರಿತು ಏನೂ ಹೇಳಲಾಗುವುದಿಲ್ಲ. ಸ್ಟಿಂಗ್ ಆಪರೇಷನ್ ಮಾಡುವಾಗ ಮಾಧ್ಯಮದವರು ಎಲ್ಲರಿಗೂ ಹೇಳಿ ಹೋಗ್ತಿರಾ? ಎಂದು ಪ್ರಶ್ನಿಸಿದ ಅವರು, ಇದು ಹಾಗೇಯೇ ಎಂದರು. (ದಿಗ್ವಿಜಯನ್ಯೂಸ್​)

Leave a Reply

Your email address will not be published. Required fields are marked *