ನನ್ನನ್ನು ಬ್ಲ್ಯಾಕ್​ಮೇಲ್​ ಮಾಡಿದ್ದು ಬೇರಾರೂ ಅಲ್ಲ, ನನ್ನ ಅಕ್ಕ ಸರಸ್ವತಿ: ಭಾರತದ ಚಿಗರೆ ಧ್ಯುತಿ ಚಂದ್

ಭುವನೇಶ್ವರ್​: ನನ್ನನ್ನು ಬ್ಲ್ಯಾಕ್​ಮೇಲ್​ ಮಾಡಿದ್ದು ಬೇರಾರೂ ಅಲ್ಲ. ನನ್ನ ಮನೆಯವರು. ಅದರಲ್ಲೂ ನನ್ನ ಅಕ್ಕ ಸರಸ್ವತಿ ಎಂದು ಭಾರತದ ಚಿಗರೆ ಎಂದೆ ಪ್ರಖ್ಯಾತರಾದ ಅಥ್ಲೀಟ್​ ಧ್ಯುತಿ ಚಂದ್​ ಹೇಳಿದ್ದಾರೆ.

ಭುವನೇಶ್ವರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ಅಕ್ಕ 25 ಲಕ್ಷ ರೂಪಾಯಿ ಕೊಡುವಂತೆ ಬ್ಲ್ಯಾಕ್​ಮೇಲ್​ ಮಾಡಿದಳು. ಹಣ ಕೊಡದಿದ್ದಾಗ ನನ್ನ ಮೇಲೆ ಹಲ್ಲೆ ಮಾಡಿದಳು. ಈ ಕುರಿತು ನಾನು ಪೊಲೀಸರಿಗೆ ದೂರು ಕೊಟ್ಟಿದ್ದೆ ಎಂದು ವಿವರಿಸಿದರು.

ಇಷ್ಟಾಗಿಯೂ ಆಕೆಯ ಬ್ಲ್ಯಾಕ್​ಮೇಲ್​ ನಿಲ್ಲಲಿಲ್ಲ. ಹಾಗಾಗಿ ತಾವು ತಮ್ಮ ಸಲಿಂಗ ಪ್ರೇಮದ ಸಂಗತಿಯನ್ನು ಬಹಿರಂಗಗೊಳಿಸಲು ನಿರ್ಧರಿಸಿ, ಅದರಂತೆ ನಡೆದುಕೊಂಡಿದ್ದಾಗಿ ತಿಳಿಸಿದರು. (ಏಜೆನ್ಸೀಸ್​)