More

  ಜನರ ಪರ ನ್ಯಾಯಾಂಗದಲ್ಲೂ ದನಿ ಎತ್ತಿದ್ದೆ

  ಕಳಸ: ನಾನು ಸಂಸದನಾಗಿದ್ದಾಗ ಇಲ್ಲಿನ ಇನಾಂ ಭೂಮಿ ಸಮಸ್ಯೆ ಕುರಿತು ಸರ್ಕಾರದ ಮಟ್ಟದಲ್ಲಿ ಮಾತ್ರವಲ್ಲ ನ್ಯಾಯಾಂಗದಲ್ಲೂ ಹೋರಾಟ ಮಾಡಿದ್ದೆ. ಅಡಕೆ ಹಾಗೂ ಕಾಫಿ ಬೆಳೆಗಾರರ ಸಮಸ್ಯೆಗಳಿಗೆ ಸ್ಪಂದಿಸಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದ್ದೇನೆ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಹೇಳಿದರು.

  ಪಟ್ಟಣದಲ್ಲಿ ಭಾನುವಾರ ಏರ್ಪಡಿಸಿದ್ದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಬೇರೆ ಪಕ್ಷದವರು ಭಾಷಣ ಮಾಡುತ್ತಿದ್ದಾರೆ. ಅವರಿಗೆ ಅಭಿವೃದ್ಧಿ ಮಾಡುವ ಯೋಚನೆಯೇ ಇಲ್ಲ. ನಾಯಕರ ಹೆಸರಿನಲ್ಲಿ ಹತ್ತು ವರ್ಷ ಸಂಸದರಾಗಿದ್ದವರನ್ನು ಕೊನೆಗೆ ಪಕ್ಷದವರೆ ಗೋಬ್ಯಾಕ್ ಎನ್ನುವಂತಾಯಿತು. ಹತ್ತು ವರ್ಷ ಸಂಸದರಾದವರು ಕ್ಷೇತ್ರಕ್ಕೆ ಭೇಟಿ ನೀಡಲಿಲ್ಲ. ನೀವು ಅಭ್ಯರ್ಥಿ ನೋಡಿ ಮತ ಹಾಕದ ಕಾರಣ ಗೆದ್ದ ಅಭ್ಯರ್ಥಿ ಕ್ಷೇತ್ರದ ಕಡೆ ಮುಖ ಮಾಡಿಲ್ಲ ಎಂದು ಟೀಕಿಸಿದರು.
  ಈ ಹಿಂದೆ ಗೋರಖ್ ಸಿಂಗ್ ವರದಿ ಜಾರಿಯಾಗಿಲ್ಲ ಎಂದು ಹೋರಾಟ ಮಾಡುತ್ತಿದ್ದವರು ಅವರದ್ದೇ ಸರ್ಕಾರ ಇದ್ದಾಗ ವರದಿ ಬಗ್ಗೆ ಕಳೆದ 10 ವರ್ಷಗಳಲ್ಲಿ ಚರ್ಚೆಯನ್ನೇ ಮಾಡಲಿಲ್ಲ. ಯಾವುದೇ ಸಂಸದರು ಕಡತದ ಹಿಂದೆ ಹೋಗದಿದ್ದರೆ ಕೆಲಸ ಆಗುವುದಿಲ್ಲ ಎಂಬುದನ್ನು ಅರ್ಥಮಾಡಿಕೊಂಡಿದ್ದೇನೆ. ನನ್ನ 20 ತಿಂಗಳ ಅವಧಿಯಲ್ಲಿ ಏನು ಕೆಲಸ ಆಗಿದೆ, ನಂತರದ ಅವಧಿಯಲ್ಲಿ ಏನು ಕೆಲಸ ಆಗಿದೆ ಎಂದು ತುಲನೆ ಮಾಡಿ ನೋಡಿ ಎಂದರು.
  ಶಾಸಕಿ ನಯನಾ ಮೋಟಮ್ಮ ಮಾತನಾಡಿ, 20 ವರ್ಷಗಳ ಕಾಲ ಮೂಡಿಗೆರೆ ಕ್ಷೇತ್ರದಲ್ಲಿ ಶಾಸಕರೇ ಇರಲಿಲ್ಲ. ಹಾಗೆಯೇ ಹತ್ತು ವರ್ಷ ಸಂಸದರು ಇರಲಿಲ್ಲ ಎಂದು ಛೇಡಿಸಿದ ಅವರು, ಈ ಹಿಂದೆ ಹತ್ತು ವರ್ಷಗಳ ಕಾಲ ಇಲ್ಲಿ ಸಂದರಾಗಿದ್ದವರು ಈ ಭಾಗಕ್ಕೆ ಏನು ಮಾಡಿದ್ದಾರೆ ಎಂಬುದೇ ಪ್ರಶ್ನೆಯಾಗಿದೆ ಎಂದರು.
  ನಮ್ಮ ಅಭ್ಯರ್ಥಿ ಎರಡು ವರ್ಷ ಸಂಸದರಾಗಿ ಮಾಡಿದ ಕೆಲಸವನ್ನು ಈಗಿನ ಸಂಸದರು ಮಾಡಲಿಲ್ಲ. ಕೃಷಿ ಮಂತ್ರಿ ಆಗಿದ್ದರೂ ಇಲ್ಲಿನ ಕಾಫಿ, ಅಡಕೆ ಸೇರಿದಂತೆ ಕೃಷಿ ಸಮಸ್ಯೆ ಬಗ್ಗೆ ಹೋರಾಟ ಮಾಡಲಿಲ್ಲ. ಅದಕ್ಕೆ ಅವರದ್ದೇ ಪಕ್ಷದವರು ಅವರನ್ನು ಗೋಬ್ಯಾಕ್ ಎಂದೇಳಿ ಇಲ್ಲಿಂದ ಓಡಿಸಿ ಹೊಸ ಮುಖವನ್ನು ತಂದು ನಿಲ್ಲಿಸಿದ್ದಾರೆ. ಆದರೆ ಜನ ಮೂರ್ಖರಲ್ಲ. ನಾವು ನಮ್ಮ ಐದು ಗ್ಯಾರಂಟಿಗಳನ್ನು ಜನರಿಗೆ ನೀಡಿರುವುದರಿಂದ ಧೈರ್ಯವಾಗಿ ಮುಖ ಎತ್ತಿ ಮತದಾರರ ಬಳಿ ಹೋಗಬಹುದು. ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ತಾಲೂಕಿನಾದ್ಯಂತ 42 ಹಳ್ಳಿಗಳಲ್ಲಿ ಚುನಾವಣೆ ಬಹಿಷ್ಕರಿಸಲಾಗಿತ್ತು. ಆದರೆ ನಾನು ಶಾಸಕಿಯಾದ 11 ತಿಂಗಳಲ್ಲಿ ಎಲ್ಲ ಹಳ್ಳಿಗಳಿಗೂ ಅನುದಾನ ನೀಡಿದ್ದೇನೆ ಎಂದು ಹೇಳಿದರು.
  ಕಳಸ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ.ಎ.ಶ್ರೇಣಿಕ್, ಜಿಲ್ಲಾಧ್ಯಕ್ಷ ಡಾ. ಅಂಶುಮಂತ್, ಕೆಪಿಸಿಸಿ ಸದಸ್ಯ ಕೆ.ಆರ್.ಪ್ರಭಾಕರ್, ಮಾಜಿ ಸಚಿವ ಬಿ.ಬಿ.ನಿಂಗಯ್ಯ, ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ, ಕಾಂಗ್ರೆಸ್ ಮುಖಂಡರಾದ ರಾಜೇಂದ್ರ ಹೆಬ್ಬಾರ್, ಕೆ.ಸಿ.ಧರಣೇಂದ್ರ, ವಿಶ್ವನಾಥ್ ಇದ್ದರು.

  See also  ಆನಂದಪುರ: ಶ್ರೀ ಕಡ್ಲೆಹಂಕ್ಲು ಮಾರಿಕಾಂಬಾ ದೇಗುಲ ಕಳಸ ಪ್ರತಿಷ್ಠಾಪನೆ ಸಂಪನ್ನ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts