ಮಾರುಕಟ್ಟೆಗೆ ಹುಂಡೈ ವೆನ್ಯೂ ಲಗ್ಗೆ

ಬೆಂಗಳೂರು: ಅತ್ಯಾಧುನಿಕ ಸಂವಹನ ಮತ್ತು ಸುರಕ್ಷತಾ ತಂತ್ರಜ್ಞಾನಗಳನ್ನು ಹೊಂದಿರುವ ಹುಂಡೈ ಕಂಪನಿಯ ಬಹು ನಿರೀಕ್ಷಿತ ಕಾರು ಎಸ್​ಯುುವಿ ‘ವೆನ್ಯೂ’ ಮಾರುಕಟ್ಟೆಗೆ ಮಂಗಳವಾರ ಬಿಡುಗಡೆಯಾಗಿದೆ.

ಬೆಂಗಳೂರಿನ ಅದ್ವೈತ್ ಹುಂಡೈ ಶೋರೂಂನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರೇಡಿಯೋ ಜಾಕಿ ಜೋ ‘ವೆನ್ಯೂ’ ಕಾರು ಬಿಡುಗಡೆ ಮಾಡಿದರು. ಬ್ಲೂ ಲಿಂಕ್ ಸಾಧನ ಮೂಲಕ ಸಂಚಾರ ಪಥ, ಸ್ಥಳ ಗುರುತಿಸುವಿಕೆ, ಇಂಗ್ಲಿಷ್ ಉಚ್ಛಾರಣೆ ಗುರುತಿಸಿ ಜನರೊಂದಿಗೆ ಸಂವಹನ ಮಾಡುವ ಸಾಮರ್ಥ್ಯ ಹೊಂದಿರುವ ಕಾರಿನ ತಂತ್ರಜ್ಞಾನಕ್ಕೆ ಮನಸೋತಿರುವ ಗ್ರಾಹಕರು ಶೋರಂನಲ್ಲಿ ಪ್ರದರ್ಶನಕ್ಕಿಟ್ಟಿದ್ದ ವೆನ್ಯೂನೊಂದಿಗೆ ಸೆಲ್ಪಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು.

ಅದ್ವೈತ್ ಹುಂಡೈನ ನಿರ್ದೇಶಕ ಅಜಯ್ಸಿಂಗ್, ಪ್ರದೇಶ ನಿರ್ವಾಹಕ ಸರೋಜ್ ಗುಪ್ತ ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

ವಿನೂತನ ತಂತ್ರಜ್ಞಾನ

ಹುಂಡೈ ವೆನ್ಯೂ ವಿನೂತನ ತಂತ್ರಜ್ಞಾನ ಹೊಂದಿದೆ. ವಾಹನ ಅಪಘಾತಕ್ಕೀಡಾದರೆ ಸ್ವಯಂಚಾಲಿತ ಮಾಹಿತಿ ರವಾನಿಸಲಿದೆ. ತಾಪಮಾನ ನಿಯಂತ್ರಣ, ಹೊಸ ಮಾದರಿ ಡೋರ್ ಲಾಕ್, ಅನ್​ಲಾಕ್ ವ್ಯವಸ್ಥೆ, ಎಲ್​ಇಡಿ ಬ್ರೇಕ್ ಲೈಟ್, ಎಲ್​ಇಡಿ ಹೆಡ್​ಲ್ಯಾಂಪ್, ಟಬೋ ಇಂಜಿನ್, ಆರಾಮದಾಯಕ ಆಸನ ಮತ್ತು ಸೀಟ್ ಬೆಲ್ಟ್, ಸೆವೆನ್ ಸ್ಪೀಡ್ ಮತ್ತು ಡ್ಯುವೆಲ್ ಕ್ಲಚ್, ವಯರ್​ಲೆಸ್ ಚಾರ್ಜರ್ ಸೇರಿ 33 ಸೌಲಭ್ಯಗಳನ್ನು ವೆನ್ಯೂ ಕಾರು ಹೊಂದಿದೆ.

ಉತ್ತಮ ವಿನ್ಯಾಸದೊಂದಿಗೆ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ವೆನ್ಯೂ ಕಾರಿನ ಸೌಲಭ್ಯಗಳು ಗ್ರಾಹಕರಿಗೆ ಇಷ್ಟವಾಗಿದ್ದು, ಅದರಲ್ಲೂ ಯುವಜನರು ಆಕರ್ಷಿತರಾಗಿದ್ದಾರೆ. ಹೀಗಾಗಿ ಅದ್ವೈತ್ ಹುಂಡೈ ಶೋರೂಂ ಒಂದರಲ್ಲೇ ವೆನ್ಯೂ ಬಿಡುಗಡೆಗೂ ಮೊದಲೇ 150 ಕಾರು ಬುಕಿಂಗ್ ಆಗಿದ್ದವು. ಮಂಗಳವಾರ ಮತ್ತಷ್ಟು ಗ್ರಾಹಕರು ಬುಕ್ಕಿಂಗ್ ಮುಂದುವರಿಸಿದ್ದಾರೆ.

| ಪ್ರೇಮ್‌ಕುಮಾರ್ ನಾಯರ್, ಪ್ರಧಾನ ವ್ಯವಸ್ಥಾಪಕ, ಮಾರಾಟ ವಿಭಾಗ, ಅದ್ವೈತ್ ಹುಂಡೈ

Leave a Reply

Your email address will not be published. Required fields are marked *