ಬೆಂಗಳೂರು: ಪ್ರತಿಯೊಬ್ಬ ನಾಗರಿಕನಿಗೂ ರಕ್ಷಣೆ ಒದಗಿಸೋದಕ್ಕೆ ನಾವು ಬದ್ಧರಾಗಿದ್ದೇವೆ. 100 ಸಂಖ್ಯೆಗೆ ಕರೆ ಮಾಡಿದರೆ, ಏಳು ಸೆಕೆಂಡ್ನಲ್ಲಿ ನಿಮಗೆ ಪ್ರತಿಕ್ರಿಯೆ ಬರುತ್ತೆ.
ಹೀಗೆಂದು ಹೇಳಿದವರು ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್.
ಹೈದರಾಬಾದ್ನಲ್ಲಿ ನಡೆದ ಪಶು ವೈದ್ಯಾಧಿಕಾರಿ ಅತ್ಯಾಚಾರ ಮತ್ತು ಕೊಲೆ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಹೈದರಾಬಾದ್ನಲ್ಲಿ ಘಟನೆ ಬಗ್ಗೆ ಗೊತ್ತಿದೆ. ಕರೆ ಮಾಡಿದ ತಕ್ಷಣ ಹೊಯ್ಸಳ ವಾಹನ ನಿಮ್ಮ ಬಳಿ ಬರುತ್ತೆ.
ಈಗಾಗಲೇ ಕಮಾಂಡ್ ಸೆಂಟರ್ಗೆ ಸೂಚನೆ ನೀಡಲಾಗಿದೆ. ಕರೆ ಮಾಡಿದ 9 ನಿಮಿಷಕ್ಕೆ ಹೊಯ್ಸಳ ನಿಮ್ಮ ಬಳಿ ಇರುತ್ತೆ. ಇದಕ್ಕಾಗಿ ಸುರಕ್ಷಾ ಆಪ್ ಬಳಕೆ ಮಾಡಿ. ಅದರಲ್ಲಿ ದೂರು ಕೊಡಿ ರೆಡ್ ಬಟನ್ ಒತ್ತಿದ ಕೂಡಲೆ ಅದು ಹಸಿರು ಬಣ್ಣಕ್ಕೆ ತಿರುಗುತ್ತೆ. ನೀವು ಮಾಡಿದ ಕರೆ ಕಟ್ ಆದ್ರೂ ಕಂಟ್ರೋಲ್ ರೂಂನಿಂದ ನಿಮಗೆ ಕರೆ ಬರುತ್ತದೆ. ಹೆಚ್ಚಾಗಿ ಕಾಲೇಜು ಹೆಣ್ಮಕ್ಕಳಿಗೆ, ಟ್ಯೂಷನ್ ಗೆ ಹೋಗೋ ಮಕ್ಕಳು ತಡರಾತ್ರಿ ಬರುವವರಿಗೆ ಇದು ಸಹಾಯವಾಗುತ್ತೆ ಎಂದು ಮಾಹಿತಿ ನೀಡಿದರು.
ಚುನಾವಣೆ ಕ್ರಮ: ಈಗಾಗಲೇ 620 ಜನ ರೌಡಿಗಳಿಗೆ ಬಾಂಡ್ ಬರೆಸಿ ಎಚ್ಚರಿಕೆ ನೀಡಲಾಗಿದೆ. ಬೆಂಗಳೂರಲ್ಲಿ ಬರುವ ನಾಲ್ಕು ಕ್ಷೇತ್ರಗಳಲ್ಲಿ ಏಳು ಜನ ಡಿಸಿಪಿ , 14 ಎಸಿಪಿ ,30 ಇನ್ಸ್ಪೆಕ್ಟರ್, 68 ಪಿಎಸ್ಐ, 160 ಎಎಸ್ಐ, 1666 ಹೆಡ್ ಕಾನ್ಸ್ಟೇಬಲ್ ಮತ್ತು ಪಿಸಿಗಳ ನಿಯೋಜನೆ ಮಾಡಲಾಗಿದೆ ಎಂದರು.
ಪೊಲೀಸ್ ಸಿಬ್ಬಂದಿ ಜತೆ ಹೋಂಗಾರ್ಡ್ಸ್ ಸೇರಿ ಒಟ್ಟು 2,896 ಜನ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.
ನಾಲ್ಕು ಕ್ಷೇತ್ರಗಳಲ್ಲಿ ಒಟ್ಟು 1,064 ಬೂತ್ಗಳಿವೆ. ಅದರಲ್ಲಿ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ 238 ಬೂತ್ಗಳು. ಅವುಗಳ ಮೇಲೆ ಹೆಚ್ಚು ಗಮನವಿರಿಸಿದ್ದು, ಹೆಚ್ಚಿನ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ ಎಂದಿ ತಿಳಿಸಿದರು.
ದೇಶಾದ್ಯಾಂತ ಜಾರಿಯಲ್ಲಿರುವ ‘112 ಇಂಡಿಯಾ’ ಆ್ಯಪ್ ಅನ್ನು ಎಲ್ಲ ರೀತಿಯ ತುರ್ತು ಸೇವೆಗಳಿಗೆ ಬಳಸಬಹುದು. ಈ ಆ್ಯಪ್ನಲ್ಲೂ ಪ್ಯಾನಿಕ್ ಬಟನ್ ಇದ್ದು, ಅಪಾಯ ಸಂದರ್ಭದಲ್ಲಿ ಇದನ್ನು ಒತ್ತಿದರೆ ಶೀಘ್ರವೆ ಸ್ಥಳೀಯ ಪೊಲೀಸರು ಆಗಮಿಸಲಿದ್ದಾರೆ.
https://play.google.com/store/apps/details?id=com.trinity.bnglrpolicesos&hl=en
https://play.google.com/store/apps/details?id=in.cdac.ners.psa.mobile.android.national&hl=en_IN