ಜೊಮ್ಯಾಟೊದಿಂದ ಫುಡ್‌ ಆರ್ಡರ್‌ ಜತೆಗೆ ಈ ಕೆಲಸವನ್ನು ಮಾಡಿದ ಗ್ರಾಹಕನ ಬುದ್ಧಿವಂತಿಕೆಗೆ ನೆಟ್ಟಿಗರು ಫಿದಾ ಆಗಿದ್ದೇಕೆ ಗೊತ್ತಾ?

ಹೈದರಾಬಾದ್‌: ಆನ್‌ಲೈನ್ ಆಧಾರಿತ ಆಹಾರ ಪೂರೈಕೆದಾರ ಸಂಸ್ಥೆ ಜೊಮ್ಯಾಟೊನಲ್ಲಿ ಆರ್ಡರ್‌ ಮಾಡಿದ ಆಹಾರ ಪೂರೈಕೆಗೆ ಹಿಂದುಯೇತರ ವ್ಯಕ್ತಿ ಬರುತ್ತಿದ್ದಾನೆ ಎಂಬುದನ್ನು ತಿಳಿದು ಆರ್ಡರ್‌ ಕ್ಯಾನ್ಸಲ್‌ ಮಾಡಿದ್ದ ಗ್ರಾಹಕ ಮತ್ತು ಕಂಪನಿ ನಡುವೆ ನಡೆದ ಮುಸುಕಿನ ಗುದ್ದಾಟ ಮರೆಯುವ ಮುನ್ನವೇ ಜೊಮ್ಯಾಟೊ ಇದೀಗ ಬೇರೊಂದು ಕಾರಣಕ್ಕೆ ಭಾರಿ ಸುದ್ದಿ ಮಾಡಿದೆ. ಅದು ಗ್ರಾಹಕನೊಬ್ಬನ ಬುದ್ಧಿವಂತಿಕೆಗೆ.

ಹೌದು, ಎಲ್ಲಿಗಾದರೂ ಹೋಗಬೇಕೆಂದರೆ ಸಾರ್ವಜನಿಕ ಸಾರಿಗೆ ಇಲ್ಲವೆ ಆಟೋ, ಕ್ಯಾಬ್‌ಗಳನ್ನು ಹಿಡಿಯಬೇಕಾಗುತ್ತದೆ. ಆದರೆ ಹೈದರಾಬಾದ್‌ ಗ್ರಾಹಕನೋರ್ವ ಜೊಮ್ಯಾಟೊದಲ್ಲಿ ಆಹಾರ ಆರ್ಡರ್‌ ಮಾಡುವ ಮೂಲಕ ಹೊಸದೊಂದು ಮಾರ್ಗವನ್ನು ಕಂಡುಕೊಂಡಿದ್ದಾನೆ. ಆಹಾರ ಡೆಲಿವರಿ ಮಾಡುವವನೊಂದಿಗೆ ತೆರಳಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಏಕಾಏಕಿ ಹಿರೋ ಆಗಿ ಬದಲಾಗಿದ್ದಾನೆ. ಅಲ್ಲದೆ ಗ್ರಾಹಕನ ಈ ಯೋಜನೆಗೆ ಜೊಮ್ಯಾಟೊ ಕೂಡ ಬೆರಗಾಗಿದೆ.

ಕಳೆದ ವಾರವಷ್ಟೇ ಒಬೆಷ್‌ ಕೊಮಿರಿಶೆಟ್ಟಿ ಎಂಬಾತ ಫೇಸ್‌ಬುಕ್‌ ಪೋಸ್ಟ್‌ ಮೂಲಕ ಈ ವಿಚಾರವನ್ನು ತಿಳಿಸಿದ್ದಾರೆ. ಸುಮಾರು 11.50 ಗಂಟೆಯಲ್ಲಿ ಮಾಲ್‌ವೊಂದರ ರಸ್ತೆಯಲ್ಲಿ ನಿಂತಿದ್ದೆ. ನನ್ನ ರೂಂಗೆ ತಲುಪಲು ಆಟೋಗಳನ್ನು ನೋಡುತ್ತಿದ್ದೆ. ಆದರೆ ಸಿಗಲಿಲ್ಲ. ಕ್ಯಾಬ್‌ ನೋಡಿದರೆ ಜಾಸ್ತಿ ಬೆಲೆ ತೋರಿಸುತ್ತಿತ್ತು. ಇದಕ್ಕಾಗಿ ಪ್ಲ್ಯಾನ್‌ವೊಂದನ್ನು ರೂಪಿಸಿ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದಿದ್ದ. ಹಸಿವಾಗುತ್ತಿದ್ದರಿಂದ ಜೊಮ್ಯಾಟೊದಲ್ಲಿ ಸಮೀಪದಲ್ಲೇ ಇದ್ದ ಫುಡ್‌ ಸ್ಟೋರ್‌ನಿಂದ ಆರ್ಡರ್‌ ಮಾಡಿದ್ದೆ.

It was around 11.50 pm, I am at Inorbit Mall road and looking for an auto but couldn’t find anything to reach my room….

Obesh Komirisetty ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಮಂಗಳವಾರ, ಆಗಸ್ಟ್ 6, 2019

ಬಳಿಕ ಬಂದ ಡೆಲಿವರಿ ಬಾಯ್‌ ನನ್ನ ಆರ್ಡರ್‌ ತೆಗೆದುಕೊಳ್ಳಲು ಹೋಗುತ್ತಿದ್ದ. ಹೀಗಿರುವಾಗ ಆತನನ್ನು ನಾನು ಕರೆದು ಇದು ನನ್ನ ಆರ್ಡರ್‌. ಡೆಲಿವರಿ ಮಾಡುವ ಸ್ಥಳಕ್ಕೆ ನನ್ನನ್ನು ಡ್ರಾಪ್‌ ಮಾಡುವಂತೆ ಕೇಳಿದೆ. ಆತ ಆರ್ಡರ್‌ ಸಮೇತ ನನ್ನನ್ನು ನನ್ನ ರೂಂಗೆ ಕರೆದೊಯ್ದ. ಬಳಿಕ ಸರ್‌ ದಯಮಾಡಿ ಐದು ಸ್ಟಾರ್‌ಗಳ ರೇಟಿಂಗ್‌ ನೀಡಿ ಎಂದು ಕೇಳಿದ. ನಾನು ಓಕೆ ಎಂದೆ. ಉಚಿತ ಪ್ರಯಾಣವನ್ನು ನೀಡಿದ್ದಕ್ಕಾಗಿ ಧನ್ಯವಾದಗಳು ಜೊಮ್ಯಾಟೊ ಎಂದು ಬರೆದುಕೊಂಡಿದ್ದ.

ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಪರಿಹಾರ ಕಂಡುಕೊಂಡಿದ್ದಕ್ಕಾಗಿ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಜೊಮ್ಯಾಟೊ ಕೇರ್‌ ಕೂಡ ಗ್ರಾಹಕನ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದೆ. ಈ ಕುರಿತ ಟ್ವೀಟ್‌ಗಳು ಇಲ್ಲಿವೆ ನೋಡಿ…

Leave a Reply

Your email address will not be published. Required fields are marked *