ಹೈದರಾಬಾದ್: ( Video Viral ) ಬ್ರ್ಯಾಂಡೆಡ್ ಪಾದರಕ್ಷೆಗಳನ್ನು ಕದ್ದು ನಂತರ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಸ್ಥಳೀಯರ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುವ ಘಟನೆ ಉಪ್ಪಲ್‌ನ ವಾಸವಿ ನಗರದಲ್ಲಿ ನಡೆದಿದೆ. ಈ ಕುರಿತಾದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ವೈರಲ್ ಆಗಿರುವ ವೀಡಿಯೊದಲ್ಲಿ, ದಂಪತಿ ತಮ್ಮ ಮನೆಯಲ್ಲಿ ಹಲವಾರು ಜೋಡಿ ಬ್ರಾಂಡ್ ಶೂಗಳು ಮತ್ತು ಚಪ್ಪಲಿಗಳನ್ನು ಸಂಗ್ರಹಿಸಿಟ್ಟುರುವುದನ್ನು ಕಾಣಬಹುದು. ದಂಪತಿ ರಾತ್ರಿ ವೇಳೆ ವಸತಿ ಕಾಲೋನಿಗಳಲ್ಲಿ ಪಾದರಕ್ಷೆಗಳನ್ನು ಕದ್ದು ಬೋರಬಂಡಾ ವಾರದ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದರು ಎಂದು ನಿವಾಸಿಗಳು ಆರೋಪಿಸಿದ್ದಾರೆ.
ಆರೋಪಿಗಳನ್ನು ವಾಸವಿನಗರದ ತಳರಿ ಮಲ್ಲೇಶ್ ಮತ್ತು ಆತನ ಪತ್ನಿ ರೇಣುಕಾ ಎಂದು ಗುರುತಿಸಲಾಗಿದ್ದು, ಚಪ್ಪಲಿ ಕಳ್ಳತನವಾದ ಬಳಿಕ ಎರ್ರಗಡ್ಡ ಮಾರುಕಟ್ಟೆಯಲ್ಲಿ 100 ಹಾಗೂ 200 ರೂ.ಗೆ ಮಾರಾಟ ಮಾಡುತ್ತಿದ್ದರು. ವಾಸವಿ ನಗರ, ಶ್ರೀನಗರ ಕಾಲೋನಿ, ರಾಮಂತಪುರ, ಉಪ್ಪಳದ ಭಾರತ್ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪಾದರಕ್ಷೆಗಳನ್ನು ಕಳ್ಳತನ ಮಾಡುತ್ತಿದ್ದರು ಎನ್ನಲಾಗಿದೆ.
ಸ್ಥಳೀಯ ವ್ಯಕ್ತಿಯೊಬ್ಬ ವ್ಯಕ್ತಿಯೊಬ್ಬ ಅನುಮಾನಾಸ್ಪದವಾಗಿ ವರ್ತಿಸುತ್ತಿರುವುದನ್ನು ಗಮನಿಸಿ ಆತನನ್ನು ಹಿಂಬಾಲಿಸಿದ. ಇನ್ನು ಕೆಲ ಸ್ಥಳೀಯರು ಕೂಡ ಸೇರಿಕೊಂಡು ತನಿಖೆ ನಡೆಸಿದಾಗ ಹಲವು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ. ಅವರ ಮನೆಯಲ್ಲಿ ಸುಮಾರು 100 ಜೋಡಿ ಬೂಟುಗಳು ಮತ್ತು ಚಪ್ಪಲಿಗಳು ಪತ್ತೆಯಾಗಿವೆ.
ಶಂಕಿತರ ಮನೆಗೆ ಸ್ಥಳೀಯರು ದಾಳಿ ನಡೆಸಿದಾಗ ಕಳ್ಳತನ ಬೆಳಕಿಗೆ ಬಂದಿದೆ ಎಂದು ವರದಿಯಾಗಿದೆ. ಕಳ್ಳತನವಾದ ಕೆಲವು ಚಪ್ಪಲಿಗಳು ತಮ್ಮದೆಂದು ಸ್ಥಳೀಯರು ಗುರುತಿಸಿದ್ದಾರೆ. ಇದನ್ನೇ ಮಾನದಂಡವಾಗಿಟ್ಟುಕೊಂಡು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದು, ಕಳ್ಳತನಕ್ಕೆ ಸಂಬಂಧಿಸಿದ ಕೃತ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿವೆ. ದಂಪತಿ ಕದ್ದಿರುವ ಶೂ, ಚಪ್ಪಲಿಗಳಿರುವ ರಾಶಿ.. ರಾಶಿ ವಿಡಿಯೋದಲ್ಲಿ ವೈರಲ್ ಆಗಿದೆ.