ಗ್ರಾಹಕರೊಂದಿಗೆ ಲೈಂಗಿಕ ಕ್ರಿಯೆ ನಿರಾಕರಿಸಿದ ಬಾರ್​​ ಡ್ಯಾನ್ಸರ್​ಗೆ ಪಬ್​ ಮ್ಯಾನೇಜ್​ಮೆಂಟ್​​ ಕೊಟ್ಟಿದ್ದು ಕ್ರೂರ ಶಿಕ್ಷೆ

ಹೈದರಾಬಾದ್​: ಗ್ರಾಹಕರೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಲು ನಿರಾಕರಿಸಿದ ಬಾರ್​ ಡ್ಯಾನ್ಸರ್​ ಒಬ್ಬಳನ್ನು ಥಳಿಸಿ, ವಿವಸ್ತ್ರಗೊಳಿಸಿರುವ ಅಮಾನವೀಯ ಘಟನೆ ತೆಲಂಗಾಣ ರಾಜಧಾನಿ ಹೈದರಾಬಾದ್​ನ ಬೆಗುಂಪೇಟ್​ ಪ್ರದೇಶದಲ್ಲಿ ನಡೆದಿರುವುದಾಗಿ ಪೊಲೀಸರು ಭಾನುವಾರ ತಿಳಿಸಿದ್ದಾರೆ.

ಸಂತ್ರಸ್ತೆ ಕೆಲ ತಿಂಗಳ ಹಿಂದೆ ಬೆಗುಂಪೇಟ್​ ಪ್ರದೇಶದಲ್ಲಿರುವ ಪಬ್​ವೊಂದರಲ್ಲಿ ಡ್ಯಾನ್ಸರ್​​ ಆಗಿ ಕೆಲಸಕ್ಕೆ ಸೇರಿದ್ದಳು. ಕೆಲಸ ಶುರುಮಾಡಿದ ಕೆಲ ದಿನಗಳ ಬಳಿಕ ಬಾರ್​ ಮ್ಯಾನೇಜ್​ಮೆಂಟ್,​ ತಮ್ಮಲ್ಲಿಗೆ ಬರುವ ಗ್ರಾಹಕರೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗುವಂತೆ ಆಕೆಗೆ ಕಿರುಕುಳ ನೀಡಲು ಶುರುಮಾಡಿದ್ದಾರೆ ಎಂದು ಪಂಜಗುಟ್ಟ ಠಾಣಾ ಪೊಲೀಸರು ಮಾಹಿತಿ ನೀಡಿದ್ದಾರೆ.

ಮ್ಯಾನೇಜ್​ಮೆಂಟ್​ ಬೇಡಿಕೆಯನ್ನು ಡ್ಯಾನ್ಸರ್​ ತಿರಸ್ಕರಿಸಿದ್ದಕ್ಕೆ, ಓರ್ವ ವ್ಯಕ್ತಿ ಹಾಗೂ ನಾಲ್ವರು ಮಹಿಳೆಯರು ಸೇರಿದಂತೆ ಆಕೆಯ ಸಹೋದ್ಯೋಗಿಗಳು ಆಕೆಯನ್ನು ವಿವಸ್ತ್ರಗೊಳಿಸಿ ಥಳಿಸಿದ್ದಾರೆ ಎಂದು ಹೇಳಲಾಗಿದೆ.

ಭಾರತೀಯ ದಂಡ ಸಂಹಿತೆ ಸೆಕ್ಷನ್​ 354(ಮಹಿಳೆಯ ಸ್ವಭಾವನ್ನು ಕೆರಳಿಸುವ ಉದ್ದೇಶದಿಂದ ಆಕೆಯ ಮೇಲೆ ಹಲ್ಲೆ), 506 (ಮಹಿಳೆಯ ನಮ್ರತೆಯನ್ನು ಅವಮಾನಿಸುವ ಉದ್ದೇಶ), 506 (ಕ್ರಿಮಿನಲ್ ಬೆದರಿಕೆ), 323 (ಸ್ವಯಂಪ್ರೇರಣೆಯಿಂದ ನೋವನ್ನುಂಟುಮಾಡಿದ್ದು) ಹಾಗೂ 34 (ಸಾಮಾನ್ಯ ಉದ್ದೇಶದಿಂದ ಹಲವಾರು ವ್ಯಕ್ತಿಗಳು ಅಪರಾಧ ಮಾಡಿರುವುದು)ರ ಪ್ರಕಾರ ಆರೋಪಿಗಳ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿದೆ.

ನಾಲ್ವರು ಮಹಿಳಾ ಆರೋಪಿಗಳನ್ನು ಬಂಧಿಸಲಾಗಿದೆ. ಓರ್ವ ಆರೋಪಿ ಪರಾರಿಯಾಗಿದ್ದಾನೆ. ಆರೋಪಿಗಳನ್ನು ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದ್ದು, ಪರಾರಿಯಾಗಿರುವ ಓರ್ವ ಆರೋಪಿಯ ಬಂಧನಕ್ಕೆ ಪೊಲೀಸ್​ ಕಾರ್ಯಾಚರಣೆ ನಡೆಯುತ್ತಿದೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *