ಎಚ್‌ಡಿಕೆ ಹೇಳಿಕೆಗೆ ಎಚ್.ವಿಶ್ವನಾಥ್ ಸಹಮತ

ಮೈಸೂರು: ಮಾಧ್ಯಮಗಳ ನಿಯಂತ್ರಣಕ್ಕೆ ಕಾಯ್ದೆ ತರಲಾಗುವುದು ಎಂಬ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಕೂಡ ಸಹಮತ ವ್ಯಕ್ತಪಡಿಸಿದರು.
ಮಾಧ್ಯಮಗಳ ಕೆಲ ಕಾರ್ಯಕ್ರಮಗಳಿಗೆ ನಿಯಂತ್ರಣ ಬೇಕಾಗಿದೆ. ರಾಜಕಾರಣಿಗಳನ್ನು ಕೆಟ್ಟ ರೀತಿ ತೋರಿಸಲಾಗುತ್ತಿದ್ದು, ನಗೆಪಾಟಲಿಗೆ ಸಿಲುಕಿಸಿ ಮುಜುಗರ ಉಂಟು ಮಾಡಲಾಗುತ್ತಿದೆ. ಇದು ಅಷ್ಟು ಸಮಂಜಸವಲ್ಲ. ರಾಜಕಾರಣಿಗಳಿಗೆ ಅವಮಾನವಾಗುವಂತಹ ಕಾರ್ಯಕ್ರಮಗಳು ಬೇಡ ಎಂದು ಮಾಧ್ಯಮದವರ ಮುಂದೆ ಹೇಳಿದರು.

‘ಗೊಂದಲಗಳ ಮಧ್ಯೆ ಹೋಗುವುದಕ್ಕಿಂತ ಸರ್ಕಾರ ವಿಸರ್ಜನೆ ಮಾಡಬೇಕು’ ಎಂಬ ಬಸವರಾಜ ಹೊರಟ್ಟಿ ನೀಡಿರುವ ಹೇಳಿಕೆ ಸರಿಯಲ್ಲ. ನಾನು ಹೊರಟ್ಟಿ ಆತ್ಮೀಯ ಗೆಳೆಯರು. ಇಬ್ಬರೂ ಒಟ್ಟಿಗೆ ವಿಧಾನಸೌಧ ಪ್ರವೇಶಿಸಿದ್ದೆವು. ಈಗ ಅವರು ಪರಿಷತ್, ನಾನು ವಿಧಾನಸಭೆ ಸದಸ್ಯರಾಗಿದ್ದೀವಿ. ಆದರೆ, ಈ ಸಂದರ್ಭದಲ್ಲಿ ಅವರಾಡಿರುವ ಮಾತು ಸರಿಯಲ್ಲ. ಕೇವಲ ಒಂದು ವರ್ಷಕ್ಕೆ ಸರ್ಕಾರ ವಿಸರ್ಜನೆ ಮಾಡಿ ಚುನಾವಣೆ ಮಾಡೋದು ಸಮಂಜಸವಲ್ಲ ಎಂದರು.

ಮೈತ್ರಿ ಸರ್ಕಾರದಲ್ಲಿ ಸಣ್ಣಪುಟ್ಟ ಸಮಸ್ಯೆಗಳು ಇರುತ್ತವೆ. ಸಿದ್ದರಾಮಯ್ಯನವರು ದೆಹಲಿಗೆ ಹೋಗಿ ಸಮಸ್ಯೆ ಸರಿ ಮಾಡಿಕೊಂಡು ಬರ್ತಾರೆ. ಈ ಬಾರಿಯ ಲೋಕಸಭಾ ಚುನಾವಣೆ ಫಲಿತಾಂಶವನ್ನು ಯಾರೂ ಊಹಿಸಲು ಸಾಧ್ಯವಿಲ್ಲ. ಜನರೇ ಸ್ವಯಂಪ್ರೇರಿತವಾಗಿ ಮತದಾನ ಮಾಡಿದ್ದಾರೆ. ಅದು ಹಾಲಿ ಸರ್ಕಾರದ ವಿರುದ್ಧ ಇರುವ ಆಕ್ರೋಶ. ಆದರೆ ಯಾವ ರೀತಿ ಜನ ಮತ ಹಾಕಿದ್ದಾರೆ ಅಂತ ಊಹೆ ಮಾಡೋಕೆ ಆಗೋದಿಲ್ಲ ಎಂದರು.

Leave a Reply

Your email address will not be published. Required fields are marked *