Friday, 16th November 2018  

Vijayavani

ಜನಾರ್ದನರೆಡ್ಡಿ ಕೇಸ್ ಬೆನ್ನಲ್ಲೇ ಡಿಕೆಶಿಗೆ ಬಂಧನ ಭೀತಿ - ಇಡಿಯಿಂದ 3ನೇ ಬಾರಿ ಇಡಿ ನೋಟಿಸ್ ಜಾರಿ        ಆ್ಯಂಬಿಂಡೆಟ್ ಪ್ರಕರಣದಲ್ಲಿ ಇಡಿ ಹೆಸರಿಗೆ ಆಕ್ಷೇಪ - ಸಿಸಿಬಿ ವಿರುದ್ಧ ಇಡಿ ಜಂಟಿ ನಿರ್ದೇಶಕ ಗರಂ        ಸಚಿವ ಸಂಪುಟ ವಿಸ್ತರಣೆಗೆ ಧನುರ್ಮಾಸದ ಎಫೆಕ್ಟ್ - ಸದ್ಯಕ್ಕಿಲ್ಲ ಆಕಾಂಕ್ಷಿಗಳಿಗೆ ಸಚಿವ ಭಾಗ್ಯ - ಕಾಂಗ್ರೆಸ್ಸಿಗರಲ್ಲಿ ಮತ್ತೆ ಅಸಮಾಧಾನ        ರಾಜ್ಯಾದ್ಯಂತ ಭುಗಿಲೆದ್ದ ರೈತರ ಹೋರಾಟದ ಕಿಚ್ಚು - ರೈತರನ್ನು ಭೇಟಿಯಾಗುವುದಾಗಿ ಹೇಳಿದ ಕುಮಾರಸ್ವಾಮಿ        ಗಾಂಧಿ ಕುಟುಂಬ ಬಿಟ್ಟು ಬೇರೆಯವರು ಎಐಸಿಸಿ 5 ಅಧ್ಯಕ್ಷರಾಗಲಿ - ಕಾಂಗ್ರೆಸ್​ಗೆ ಪ್ರಧಾನಿ ಮೋದಿಯಿಂದ ನೇರ ಸವಾಲು        ತಮಿಳುನಾಡಿನಾದ್ಯಂತ ಗಜ ಚಂಡಮಾರುತದ ಅರ್ಭಟ - 20ಕ್ಕೂ ಹೆಚ್ಚು ಮಂದಿ ದುರ್ಮರಣ - ಅಪಾರ ಆಸ್ತಿ ಪಾಸ್ತಿ, ಬೆಳೆ ನಾಶ       
Breaking News

ಸಿದ್ದರಾಮಯ್ಯ ಮಣಿದರೂ ವಿಶ್ವನಾಥ್​ ತಣಿಯಲಿಲ್ಲ: ನಿರಂಜನಾನಂದಪುರಿ ಶ್ರೀ

Saturday, 30.06.2018, 2:25 PM       No Comments

ದಾವಣಗೆರೆ: ಜೆಡಿಎಸ್​ನ ಹಿರಿಯ ಮುಖಂಡ ಎಚ್​. ವಿಶ್ವನಾಥ್​ ಅವರಿಗೆ ಕಾಂಗ್ರೆಸ್​ನಲ್ಲಿ ತೊಂದರೆಯಾದಾಗ ಅವರ ಪರವಾಗಿ ನಾವೆಲ್ಲ ಇದ್ದೆವು. ವಿಶ್ವನಾಥ್​ಗೆ ಅನ್ಯಾಯವಾಗದಂತೆ ನೋಡಿಕೊಳ್ಳಿ ಎಂದಾಗ ಸಿದ್ದರಾಮಯ್ಯ ಮಣಿದರೂ, ವಿಶ್ವನಾಥ್​ ಮಣಿಯಲಿಲ್ಲ ಎಂದು ಕನಕಗುರು ಪೀಠದ ನಿರಂಜನಾನಂದಪುರಿ ಸ್ವಾಮೀಜಿ ಹೇಳಿದ್ದಾರೆ.

ನನಗೆ ಅನ್ಯಾಯವಾದಾಗ ಸ್ವಾಮೀಜಿಗಳು ಮತ್ತು ಕುರುಬ ಸಂಘಟನೆಗಳು ಎಲ್ಲಿ ಹೋಗಿದ್ದವು ಎಂಬ ಎಚ್​. ವಿಶ್ವನಾಥ್​ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಶ್ರೀಗಳು ” ವಿಶ್ವನಾಥ್ ನಮ್ಮ ಸಮಾಜದ ನಾಯಕರು. ಅವರು ಮಠವನ್ನು ಕಟ್ಟಿಲ್ಲ ಎಂದು ಹೇಳಿಲ್ಲ, ಹೇಳುವುದೂ ಇಲ್ಲ. ಆದರೆ, ನಮ್ಮನ್ನು ಮತ್ತು ಕುರುಬ ಸಮಾಜವನ್ನು ಟೀಕೆ ಮಾಡಿದರೆ ಅವರಿಗೆ ಒಳ್ಳೆಯದಾಗುತ್ತೆ ಎಂದಾದರೆ ಟೀಕೆ ಮಾಡಲಿ. ವಿಶ್ವನಾಥ್​ ಅವರಿಗೆ ಸಂಕಟವಾದಾಗ ಅವರಿಗೆ ಸಮಾಧಾನ ಹೇಳಿದ್ದೆವು. ವಿಶ್ವನಾಥ್ ಅವರನ್ನು ಕೈ ಬಿಡಬೇಡಿ ಎಂದು ಸಿದ್ದರಾಮಯ್ಯನವರಿಗೆ ಹೇಳಿದ್ದೆವು. ಸಿದ್ದರಾಮಯ್ಯ ಅವರು ಮೃದುವಾದರೂ, ವಿಶ್ವನಾಥ್​ ಮಣಿಯಲಿಲ್ಲ. ವೈಯಕ್ತಿಕ ಟೀಕೆ ಮುಂದುವರಿಸಿದ್ದರು,” ಎಂದು ಹೇಳಿದರು.

ಸಿದ್ದರಾಮಯ್ಯ ಅವರು ಜೆಡಿಎಸ್​ನಲ್ಲಿದ್ದಾಗ ದೇವೇಗೌಡರನ್ನು ಘಟಸರ್ಪಕ್ಕೆ ಹೋಲಿಸಿ, ಸಿದ್ದರಾಮಯ್ಯ ಅವರನ್ನು ಕಪ್ಪೆಗೆ ಹೋಲಿಸಿದ್ದ ವಿಶ್ವನಾಥ್​ ಅವರು ಸರ್ಪ ಕಪ್ಪೆಯನ್ನು ತಿಂದು ಹಾಕಲಿದೆ ಎಂದು ಹೇಳಿಕೆ ನೀಡಿದ್ದರು. ಈಗ ಅದೇ ವಿಶ್ವನಾಥ್​ ಎಲ್ಲಿದ್ದಾರೆ? ಯಾವ ಸರ್ಪದ ಅಡಿಯಲ್ಲಿದ್ದಾರೆ ಎಂಬುದನ್ನು ಅವರೊಮ್ಮೆ ಯೋಚಿಸಬೇಕು ಎಂದು ಹಿಂದಿನದನ್ನು ನೆನಪು ಮಾಡಿಕೊಟ್ಟರು.

ಆನೆ ಕೆರೆಯಲ್ಲಿ ಸ್ನಾನ ಮಾಡುತ್ತದೆ. ಆದರೆ, ದಡಕ್ಕೆ ಬಂದ ಕೂಡಲೇ ಮಣ್ಣನ್ನು ತನ್ನ ತಲೆ ಮೇಲೆ ಹಾಕಿ ಕೊಳ್ಳುತ್ತೆ. ವಿಶ್ವನಾಥ್ ತಮ್ಮ ತಲೆ ಮೇಲೆ ಮಣ್ಣು ಹಾಕಿಕೊಂಡು ಸಮಾಜದ ಮೇಲೆ, ಮಠದ ಮೇಲೂ ಮಣ್ಣು ಹಾಕಬಾರದು ಎಂದು ಶ್ರೀಗಳು ಸಲಹೆ ನೀಡಿದರು.

ನಾವು ಎಂದಿಗೂ ರಾಜಕಾರಣದಲ್ಲಿ ಮೂಗು ತೂರಿಸಿಲ್ಲ. ಮುಂದೆಯೂ ಆ ಕೆಲಸ ಮಾಡುವುದಿಲ್ಲ. ಆದರೆ, ಸಮಾಜಕ್ಕೆ ತೊಂದರೆಯಾದರೆ, ಸಾಮಾಜಿಕ ನ್ಯಾಯಕ್ಕೆ ತೊಂದರೆಯಾದರೆ ಮಾತನಾಡಲೇಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿದರು.

Leave a Reply

Your email address will not be published. Required fields are marked *

Back To Top