ಹೊರರಾಜ್ಯಕ್ಕೆ ಮೇವು ಸಾಗಣೆಗೆ ನಿರ್ಬಂಧ

ಬಸವನಬಾಗೇವಾಡಿ ತಹಸೀಲ್ದಾರ್ ಎಂ.ಎನ್. ಚೋರಗಸ್ತಿ ಹಾಗೂ ಉಪ ತಹಸೀಲ್ದಾರ್, ಕಂದಾಯ ನಿರೀಕ್ಷಕರು ಮೇಲುಸ್ತುವಾರಿ ವಹಿಸಿರುತ್ತಾರೆ. ಗ್ರಾಮ ಲೆಕ್ಕಾಧಿಕಾರಿಗಳು, ಅವರ ಸಹಾಯಕರು 8 ಗಂಟೆಗೊಮ್ಮೆಯಂತೆ ಮೂರು ಸರದಿಯಲ್ಲಿ ದಿನದ 24 ಗಂಟೆ ಕಾರ್ಯನಿರ್ವಹಿಸುತ್ತಾರೆ. ತಪಾಸಣೆ ಚೆಕ್​ಪೋಸ್ಟ್​ನಲ್ಲಿ ಜಪ್ತಿ ಮಾಡಿದ ಮೇವನ್ನು ಹೂವಿನಹಿಪ್ಪರಗಿಯಲ್ಲಿ ಗ್ರಾಮ ಪಂಚಾಯಿತಿ ಕಚೇರಿ ಮತ್ತು ಪಿಕೆಪಿಎಸ್ ಸಂಘದ ಸಹಾಯದೊಂದಿಗೆ ಸೂಕ್ತ ಸ್ಥಳ ನಿಗದಿ ಮಾಡಿ ಅಲ್ಲಿ ಸಂಗ್ರಹಿಸಲಾಗುವುದು ಎಂದು ಉಪ ತಹಸೀಲ್ದಾರ್ ಜಗದೀಶ ಹಾರಿವಾಳ ಹೇಳಿದರು.

ಕಂದಾಯ ನಿರೀಕ್ಷಕ ವಿ.ಜಿ. ಸಿಂದಗಿ ಮಾತನಾಡಿ, ರೈತರಿಗೆ ಕಡಿಮೆ ಬೆಲೆಯಲ್ಲಿ ಮೇವು ದೊರೆಯುವಂತೆ ಮಾಡಲು ಸರ್ಕಾರವೇ ಈ ಕ್ರಮ ಕೈಗೊಂಡಿದ್ದು, ರೈತರು ಸಹಕರಿಸಬೇಕು ಎಂದು ಹೇಳಿದರು. ಗ್ರಾಮ ಲೆಕ್ಕಾಧಿಕಾರಿಗಳಾದ ಎಸ್.ಕೆ. ಯಲಗೋಡ, ಆರ್.ಎ. ಖಾದಿಮ, ಗ್ರಾಮ ಸಹಾಯಕರಾದ ಹೊನ್ನಪ್ಪ ವಾಲಿಕಾರ, ಚಂದಪ್ಪ ವಾಲೀಕಾರ ಇತರರು ಇದ್ದರು.