ಪತ್ನಿ, ಮಗು ಕೊಲೆಗೈದ ಪತಿ

ಹೂವಿನಹಡಗಲಿ: ಅನೈತಿಕ ಸಂಬಂಧ ಇಲ್ಲ ಎಂದು ಆಣೆ ಮಾಡುವಂತೆ ಪತ್ನಿ, ಮಗುವನ್ನು ಅರಣ್ಯಕ್ಕೆ ಕರೆದೊಯ್ದ ಪತಿ ಇಬ್ಬರನ್ನು ಕೊಲೆಗೈದು, ಪತ್ನಿಯ ತಂದೆಗೆ ಕೃತ್ಯದ ಮಾಹಿತಿ ನೀಡಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಕುಂಚೂರಿನ ಸಿದ್ದಪ್ಪ ಆರೋಪಿ, ಪವಿತ್ರಾ (25), ಮಮತಾ (3) ಮೃತರು. ಹರಪನಹಳ್ಳಿ ತಾಲೂಕಿನ ಕುಂಚೂರಿನ ಸಿದ್ದಪ್ಪ, ಪವಿತ್ರಾ ಜತೆ ಮೂರು ವರ್ಷಗಳ ಹಿಂದೆ ಮದುವೆಯಾಗಿತ್ತು. ಎರಡು ವರ್ಷಗಳಿಂದ ಸಿದ್ದಪ್ಪ ಪತ್ನಿ ಶೀಲ ಶಂಕಿಸಿ ಕಿರುಕುಳ ನೀಡುತ್ತಿದ್ದ. ನಾವು ಬುದ್ಧಿ ಹೇಳಿದರೂ, ಆತ ಬದಲಾಗಿರಲಿಲ್ಲ. ಕೊಲೆ ಮಾಡುವ ಉದ್ದೇಶದಿಂದ ಸಿದ್ದಪ್ಪ ಆಣೆ ಮಾಡಿಸುವ ನೆಪದಲ್ಲಿ ಶುಕ್ರವಾರ ಕುಂಚೂರು, ಹ್ಯಾರಡಾ ಮಧ್ಯದಲ್ಲಿರುವ ಅರಣ್ಯ ಪ್ರದೇಶಕ್ಕೆ ಕರೆದೊಯ್ದು ಪವಿತ್ರಾ, ಮಮತಾ ಮೇಲೆ ಕಲ್ಲು ಎತ್ತಿ ಹಾಕಿದ್ದಾನೆ ಎಂದು ಪವಿತ್ರಾ ತಂದೆ ಲೋಕಪ್ಪ ಬಡ್ಡಿ ನೀಡಿದ ದೂರಿನ ಮೇರೆಗೆ ಹಿರೇಹಡಗಲಿ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.