ವಚನಗಳು ವಿಶ್ವದ ಶ್ರೇಷ್ಠ ಸಾಹಿತ್ಯ- ನಿವೃತ್ತ ಪ್ರಾಧ್ಯಾಪಕ ಡಾ.ಎಸ್.ಶಿವಾನಂದ ಅಭಿಮತ

ಹೂವಿನಹಡಗಲಿ: ಸರ್ವರಿಗೂ ಒಳ್ಳೆಯದು ಬಯಸಿ, ಕಾಯಕದಲ್ಲಿ ನಿರತರಾಗಿ ದುಡಿಮೆಯ ಒಂದಾಂಶ ಸತ್ಕಾರ್ಯಗಳಿಗೆ ದಾನ ಮಾಡುವವರೇ ಶರಣರು ಎಂದು ನಿವೃತ್ತ ಪ್ರಾಧ್ಯಾಪಕ ಡಾ.ಎಸ್.ಶಿವಾನಂದ ಹೇಳಿದರು.

ಶ್ರಾವಣ ಮಾಸ ಪ್ರಯುಕ್ತ ಪಟ್ಟಣದ ರಂಗಮಂದಿರದಲ್ಲಿ ರಂಗಭಾರತಿ ಸಂಸ್ಥೆ ಆಯೋಜಿಸಿದ್ದ ವಚನ ಗಾಯನ, ವಚನ ಚಿಂತನ, ನೃತ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಶರಣರ ವಚನಗಳು ವಿಶ್ವದ ಶ್ರೇಷ್ಠ ಸಾಹಿತ್ಯ ಪ್ರಕಾರ ಹಾಗೂ ಸಾಮಾಜಿಕ, ಧಾರ್ಮಿಕ ಮತ್ತು ಆರ್ಥಿಕ ಸಮಾನತೆ ತಳಹದಿಯಲ್ಲಿ ರಚನೆಯಾಗಿವೆ ಎಂದು ಹೇಳಿದ್ದರು.

ರಂಗಭಾರತಿ ಕಾರ್ಯಾಧ್ಯಕ್ಷೆ ಎಂ.ಪಿ.ಸುಮಾ ವಿಜಯ್ ಮಾತನಾಡಿದರು. ಕೊಪ್ಪಳ ಗವಿಸಿದ್ಧೇಶ್ವರ ಸ್ವರ ಸಂಚಾರ ತಂಡ, ಶ್ರೀ ಪಂ.ಪುಟ್ಟರಾಜ ಗವಾಯಿಗಳ ಸಂಗೀತ ಸಾಧಕರ ಬಳಗ ಹಾಗೂ ಹೊಸಪೇಟೆ ವಿದ್ಯಾರ್ಥಿಗಳು ವಚನ ಹಾಡಿದರು. ಪಟ್ಟಣದ ಎಂ.ಪಿ.ಪ್ರಕಾಶ್ ಕಲಾನಿಕೇತನದ ವಿದ್ಯಾರ್ಥಿಗಳ ವಚನ ನೃತ್ಯ ಸಭಿಕರ ಮನಸೂರೆಗೊಂಡಿತು. ಸಂಗೀತ ಶಿಕ್ಷಕಿ ಕಲಾವತಿ ಹವಾಲ್ದಾರ್, ಅರ್ಚನಾ ಜೋಷಿ, ಮೆಹಬೂಬ್‌ಸಾಬ್, ವೀರೇಶ್ ಹಿಟ್ನಾಳ್, ರಂಗಭಾರತಿ ಸಂಸ್ಥೆ ಕಾರ್ಯದರ್ಶಿ ಎಸ್.ದ್ವಾರಕೀಶರೆಡ್ಡಿ, ಶಿವರಾಜ ಪಾಟೀಲ್, ನವೀನ್, ಶಿವಕುಮಾರ್ ಇತರರಿದ್ದರು.

Leave a Reply

Your email address will not be published. Required fields are marked *