ದೇಶದ್ರೋಹಿಯನ್ನು ಗಡಿಪಾರು ಮಾಡಿ

ಪಾಕಿಸ್ತಾನ ಪ್ರೇರಿತ ಧ್ವಜ, ಬ್ಯಾನರ್‌ಗೆ ಬೆಂಕಿ ಗ್ರಾಮಸ್ಥರಿಂದ ತಹಸೀಲ್ದಾರ್‌ಗೆ ಮನವಿ

ಹೂವಿನಹಡಗಲಿ: ಸಾಮಾಜಿಕ ಜಾಲತಾಣದಲ್ಲಿ ಪಾಕ್ ಪರ ಪೋಸ್ಟ್ ಮಾಡಿದ್ದ ಹೊಳಲು ಗ್ರಾಮದ ಮೆಹಬೂಬ್ ಮುಜಾವರನನ್ನು ಕೂಡಲೆ ಗಡಿ ಪಾರು ಮಾಡಬೇಕು ಎಂದು ಆಗ್ರಹಿಸಿ ಹೊಳಲು ಗ್ರಾಮಸ್ಥರು ಪಾಕಿಸ್ತಾನ ಪ್ರೇರಿತ ಧ್ವಜ, ಬ್ಯಾನರ್‌ಗಳನ್ನು ಸುಟ್ಟು ಶುಕ್ರವಾರ ಆಕ್ರೋಶ ವ್ಯಕ್ತಪಡಿಸಿದರು.

ಈ ದೇಶದ ಅನ್ನ ಉಂಡು ಶತ್ರು ರಾಷ್ಟ್ರ ಪಾಕಿಸ್ತಾನವನ್ನು ಬೆಂಬಲಿಸಿದ ಯುವಕನ ಕುಟುಂಬಕ್ಕೆ ಮೂಲ ಸೌಕರ್ಯ ನೀಡಬಾರದು. ಪಾಕಿಸ್ತಾನ ಪ್ರೇರಿತ ಧ್ವಜ, ಭಾರಿ ಶಬ್ಧದೊಂದಿಗೆ ಪ್ರಾರ್ಥನೆ ಮಾಡುವುದನ್ನು ನಿಲ್ಲಿಸಬೇಕು. ಈ ಭಾಗಕ್ಕೆ ಧರ್ಮ ಬೋಧನೆಗೆ ಆಗಮಿಸುತ್ತಿರುವ ಬಿಹಾರ ಮೂಲದ ಮೌಲ್ವಿಗಳು ಉಗ್ರರಿಂದ ಪ್ರೇರಣೆ ಪಡೆದಿದ್ದಾರೆ. ಅವರ ಅಣತೆಯಂತೆ ಯುವಕರು ದೇಶದ್ರೋಹ ಕೆಲಸಕ್ಕೆ ಮುಂದಾಗಿದ್ದಾರೆ. ಇಂಥ ಮೌಲ್ವಿಗಳಿಗೆ ಗ್ರಾಮದಲ್ಲಿ ಪ್ರವೇಶ ನಿಷೇಧಿಸಬೇಕು. ಅಪರಿಚಿತರು ಗ್ರಾಮದಲ್ಲಿ ವಾಸಿಸಲು ಅವಕಾಶ ನೀಡಬಾರದು ಎಂದು ಆಗ್ರಹಿಸಿದರು. ಸ್ಥಳಕ್ಕೆ ಆಗಮಿಸಿದ ಪ್ರೊಬೆಷನರಿ ಡಿವೈಎಸ್ಪಿ ಜಾವೀದ್ ಇನಾಮದಾರ್ ಪ್ರತಿಭಟನೆ ಶಾಂತಗೊಳಿಸಿದರು. ಗ್ರಾಮಸ್ಥರು ಗ್ರಾಪಂ ಅಧ್ಯಕ್ಷ ಆರ್. ಹನುಮಂತಪ್ಪಗೆ ಮನವಿ ಸಲ್ಲಿಸಿದರು. ಜಿಪಂ ಸದಸ್ಯ ಎಸ್.ಕೊಟ್ರೇಶ, ತಾಪಂ ಸದಸ್ಯ ಎನ್.ಬಸವರಾಜ, ಬಿಜೆಪಿ ಮುಖಂಡ ಎಂ.ಬಸವರಾಜ, ಎಪಿಎಂಸಿ ನಿರ್ದೇಶಕ ರೇವಣೆಪ್ಪ ದೇವರಮನಿ, ಮುಖಂಡರಾದ ಗುರುಲಿಂಗಪ್ಪ ಹಾವೇರಿ, ಶಿವಾನಂದಪ್ಪ ಬೂದನೂರು, ಮಂಜುನಾಥ ಹಾವೇರಿ, ಭಜರಂಗ್ ದಳ, ಸ್ವಾಮಿ ವಿವೇಕಾನಂದ ಯಂಗ್‌ಸ್ಟಾರ್ಸ್‌ ಗ್ರೂಪ್‌ನ ಯುವಕರು, ಗ್ರಾಪಂ ಸದಸ್ಯರು ಇದ್ದರು.