ವರದಿಗಾರನ ಮೇಲೆ ಹಲ್ಲೆಗೆ ಖಂಡನೆ – ತಹಸೀಲ್ದಾರ್‌ಗೆ ಕಾರ್ಯನಿರತ ಪತ್ರಕರ್ತರ ಸಂಘ ಮನವಿ

ಹೂವಿನಹಡಗಲಿ: ಬೆಳಗಾವಿ ಜಿಲ್ಲೆ ಕಿತ್ತೂರು ತಾಲೂಕಿನ ವರದಿಗಾರ ಬಸವರಾಜ ಮೇಲೆ ನಡೆದ ಹಲ್ಲೆ ಖಂಡಿಸಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಸೋಮವಾರ ತಹಸೀಲ್ದಾರ್ ಕೆ.ರಾಘವೇಂದ್ರರಾವ್ ಮೂಲಕ ಸಿಎಂಗೆ ಮನವಿ ಸಲ್ಲಿಸಿತು.

ಸದಾ ಸಮಾಜಕ್ಕಾಗಿ ದುಡಿಯುವ ಪತ್ರಕರ್ತರ ಮೇಲೆ ಪದೇಪದೆ ಹಲ್ಲೆ ನಡೆಯುತ್ತಿರುವುದು ನೋವಿನ ಸಂಗತಿಯಾಗಿದೆ. ಹಲ್ಲೆ ನಡೆಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ವರದಿಗಾರನ ಕುಟುಂಬಕ್ಕೆ ನ್ಯಾಯ ಒದಗಿಸಬೇಕು. ಮುಂದಿನ ದಿನಗಳಲ್ಲಿ ಇಂಥ ಘಟನೆಗಳು ಮರುಕಳಿಸದಂತೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಂಘದ ಸದಸ್ಯರು ಒತ್ತಾಯಿಸಿದರು. ಸಂಘದ ಅಧ್ಯಕ್ಷ ಜಿ.ಬುಳ್ಳಪ್ಪ, ಸದಸ್ಯ ಹಲಗಿ ಸುರೇಶ, ಕಲಿಕೇರಿ ಬಸವರಾಜ್, ಮಡ್ಡಿ ಮಂಜುನಾಥ, ಪಿ.ನಿಂಗಪ್ಪ, ನಾಗರಾಜ್ ಮಲ್ಕಿ ಒಡೆಯರ್ ಇದ್ದರು.

Leave a Reply

Your email address will not be published. Required fields are marked *