ಧರ್ಮ ಒಡೆಯುವ ಕೆಲಸಕ್ಕೆ ಕೈಹಾಕಲ್ಲ – ಡಿ.ಕೆ.ಶಿವಕುಮಾರ್ ಹೇಳಿಕೆ

ಹೂವಿನಹಡಗಲಿ: ಕೆಲವರ ಮಾತು ಕೇಳಿ ಧರ್ಮ ಒಡೆಯುವ ಕೆಲಸಕ್ಕೆ ಕೈಹಾಕಿದ್ದೆವು. ಇನು ಮುಂದೆ ಧರ್ಮ ಒಡೆಯುವ ಕೆಲಸಕ್ಕೆ ಕೈಹಾಕುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು.

ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಸೋಮವಾರ ಮಾತನಾಡಿದರು. ಧರ್ಮ ಒಡೆಯುವ ವಿಚಾರದಲ್ಲಿ ಕೈಹಾಕಿದ್ದಕ್ಕೆ ನಿಮ್ಮ ಬಳಿ ಕ್ಷಮೆ ಕೋರುತ್ತೇನೆ. ಧರ್ಮದಲ್ಲಿ ರಾಜಕೀಯ ಹಾಗೂ ರಾಜಕೀಯದಲ್ಲಿ ಧರ್ಮ ಇರಬಾರದು. ಜಿಲ್ಲೆಯ ಬಿಜೆಪಿ ನಾಯಕರ ಕೊಡುಗೆ ಏನು?. ಉಗ್ರಪ್ಪ ಅವರನ್ನು ಆರಿಸಿ ಕಳಿಸಿದರೆ ಸಂಸತ್ತಿನಲ್ಲಿ ಮಾತನಾಡುತ್ತಾರೆ. ಏಳನೇ ತರಗತಿ ಓದಿದ ಬಿಜಪಿ ಅಭ್ಯರ್ಥಿ ದೇವೇಂದ್ರಪ್ಪ ಸಂಸತ್ತಿನಲ್ಲಿ ಏನು ಮಾತನಾಡಲು ಸಾಧ್ಯ ಎಂದು ಕುಟುಕಿದರು.

ಸಚಿವ ಪಿ.ಟಿ.ಪರಮೇಶ್ವರನಾಯ್ಕ, ಅಭ್ಯರ್ಥಿ ಉಗ್ರಪ್ಪ, ಮಾಜಿ ಶಾಸಕ ಸಿರಾಜ್ ಶೇಖ್, ನಂದಿಹಳ್ಳಿ ಹಾಲಪ್ಪ ಮಾತನಾಡಿದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಿ.ವಿ.ಶಿವಯೋಗಿ, ಮಹಿಳಾ ಘಟಕದ ಅಧ್ಯಕ್ಷೆ ಆಶಾಲತಾ, ಮುಖಂಡರಾದ ಐಗೋಳ್ ಚಿದಾನಂದ, ಪರಮೇಶ್ವರಪ್ಪ, ಕೆ.ಪುತ್ರೇಶ, ಸೊನ್ನದ ಮಹೇಶ, ಜಿ.ಶಿವಕುಮಾರಗೌಡ, ವಾರದ ಗೌಸ್ ಮೊಹಿದ್ದೀನ್, ಅರವಳ್ಳಿ ವೀರಣ್ಣ, ಮಂಜುನಾಥ ಇತರರು ಇದ್ದರು.

Leave a Reply

Your email address will not be published. Required fields are marked *