ಪೇಪರ್ ಹಾಕುವ ಹರೀಶ್‌ಗೆ ಶೇ.89 ಅಂಕ

ಹೂವಿನಹಡಗಲಿ: ಬೆಳಗ್ಗೆ ದಿನಪತ್ರಿಕೆಗಳನ್ನು ಹಾಕುತ್ತಾ ಎಂ.ಎಂ. ಪಾಟೀಲ್ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿ ವಾಲಿ ಹರೀಶ್ 537 (ಶೇ.89.5) ಅಂಕ ಪಡೆದಿದ್ದಾರೆ. ವಿದ್ಯಾರ್ಥಿ ಮಿತ್ರ ನೆರವಿನಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದ ಹರೀಶ್ ಪಿಯುಸಿಯಲ್ಲೂ ವಿದ್ಯಾರ್ಥಿ ಮಿತ್ರ ಓದಿ ಕಾಲೇಜ್‌ಗೆ ದ್ವಿತೀಯ ಸ್ಥಾನ ಪಡೆದಿದ್ದಾರೆ. ಕನ್ನಡ ವಿಷಯದಲ್ಲಿ 97, ಇಂಗ್ಲಿಷ್ 80, ಗಣಿತ 97, ಭೌತಶಾಸ್ತ್ರ 95, ರಾಸಾಯನಿಕ ಶಾಸ್ತ್ರ 87, ಜೀವಶಾಸ್ತ್ರ 81 ಅಂಕ ಗಳಿಸಿದ್ದಾರೆ. ಎಸ್ಸೆಸ್ಸೆಲ್ಸಿಯಿಂದ ಇಂದಿನವರೆಗೂ ವಿದ್ಯಾರ್ಥಿ ಮಿತ್ರ ಓದುತ್ತಿರುವುದರಿಂದ ಹೆಚ್ಚಿನ ಅಂಕಗಳಿಸಲು ನೆರವಾಯಿತು. ಮುಂದೆ ಐಎಎಸ್ ಅಧಿಕಾರಿಯಾಗುವ ಗುರಿಯಿದೆ ಎನ್ನುತ್ತಾರೆ ವಾಲಿ ಹರೀಶ್.