ಮಲ್ಲಿಗೆ ತೋಟಗಳಿಗೆ ಅಧಿಕಾರಿಗಳ ಭೇಟಿ

ಹೂವಿನಹಡಗಲಿ: ತಾಲೂಕಿನ ಮಿರಾಕೊರನಹಳ್ಳಿಯ ಮಲ್ಲಿಗೆ ತೋಟಗಳಿಗೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದರು.

ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ದುರ್ಗಾಪ್ರಸಾದ್ ಮಾತನಾಡಿ, ಇಳುವರಿ ಹೆಚ್ಚಳಕ್ಕೆ ರೈತರು ರಾಸಾಯನಿಕ ಗೊಬ್ಬರ ಬಳಕೆ ಕಡಿಮೆ ಮಾಡಿ ಕೊಟ್ಟಿಗೆ, ಕಾಂಪೋಸ್ಟ್ ಗೊಬ್ಬರ ಬಳಸಬೇಕು. ಜಮೀನಿನಲ್ಲೇ ಎರೆ ಹುಳು ಗೊಬ್ಬರ ತಯಾರಿಕೆಗೆ ಆದ್ಯತೆ ನೀಡಬೇಕು. ಇದರಿಂದ ಬೆಳೆಗೆ ಶಾಶ್ವತ ಶಕ್ತಿ ಸಿಗಲಿದೆ ಎಂದರು.

ಮಜ್ಜಿಗೆ ರೋಗ, ಎಲೆ ಒಣಗುವುದನ್ನು ತಪ್ಪಿಸಲು ಸಿಂಪಡಿಸಬೇಕಾದ ರಾಸಾಯನಿಕಗಳ ಕುರಿತು ರೈತರಿಗೆ ಸಲಹೆ ನೀಡಿದರು. ಇಲಾಖೆ ಅಧಿಕಾರಿಗಳಾದ ಸುಧಾಕರ್, ಹರೀಶ್, ಮಲ್ಲಿಗೆ ಬೆಳೆಗಾರರಾದ ಬಸವರಾಜರೆಡ್ಡಿ, ಕೊಟ್ರೇಶಗೌಡ ಇದ್ದರು. ತಾಲೂಕಿನಲ್ಲಿ ಮಲ್ಲಿಗೆ ಇಳುವರಿ ಕುಂಠಿತವಾಗಿರುವ ಕುರಿತು ವಿಜಯವಾಣಿ ಏ.18 ರಂದು ಬಿಸಿಲಿನ ಝಳಕ್ಕೆ ಬಾಡಿದ ಹಡಗಲಿ ಮಲ್ಲಿಗೆ ಹೂವು ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಿತ್ತು. ಎಚ್ಚೆತ್ತ ಅಧಿಕಾರಿಗಳು ಜಮೀನುಗಳಿಗೆ ಭೇಟಿ ನೀಡಿ ರೈತರಿಗೆ ಅಗತ್ಯ ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *