ಹೂವಿನಹಡಗಲಿ: ಶಿವಾನುಭವ ಕಾರ್ಯಕ್ರಮಗಳು ಮನುಷ್ಯನಲ್ಲಿ ನವಚೈತನ್ಯ ತುಂಬುತ್ತವೆ ಎಂದು ಬೂದಿಹಾಳದ ಪ್ರವಚನಕಾರ ಗವಿಸಿದ್ಧೇಶ್ವರ ಶಾಸ್ತ್ರಿ ಹೇಳಿದರು.

ತಾಲೂಕಿನ ಹೊಳಲು ಗ್ರಾಮದ ಮಲ್ಲಿಕಾರ್ಜುನ ಮಠದಲ್ಲಿ ಬುಧವಾರ ಆಯೋಜಿಸಿದ್ದ 19ನೇ ಮಾಸಿಕ ಅನುಭಾವ ಸಂಗಮ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರಸ್ತುತ ದಿನಗಳಲ್ಲಿ ಮನುಷ್ಯ ಯಂತ್ರಗಳ ಕೈಗೊಂಬೆಯಾಗಿದ್ದಾನೆ. ಅತಿಯಾಸೆಯಿಂದ ನೆಮ್ಮದಿ ಕಳೆದುಕೊಳ್ಳುತ್ತಿದ್ದಾನೆ. ದೈವಶಕ್ತಿಗಿಂತ ಮಿಗಿಲಾದದ್ದು ಈ ಜಗತ್ತಿನಲ್ಲಿ ಮತ್ತೊಂದಿಲ್ಲ ಎಂದರು.
ಚನ್ನಬಸವ ಸ್ವಾಮೀಜಿ ಮಾತನಾಡಿ, ಮನುಷ್ಯ ಜ್ಞಾನವನ್ನು ಹುಡುಕುವ ಪ್ರಯತ್ನ ಮಾಡಬೇಕು. ಜ್ಞಾನಕ್ಕೆ ಎಲ್ಲವನ್ನೂ ಗೆಲ್ಲುವ ಶಕ್ತಿ ಇದೆ ಎಂದರು. ಶಿಕ್ಷಕ ಕೊಟ್ರೇಶ ಜವಳಿ, ಗ್ರಾಮಸ್ಥರಾದ ಮಂಜುನಾಥ, ನಾಗರಾಜಪ್ಪ, ಕೊಟ್ರೇಶ್ ಹಾಗೂ ಅಕ್ಕನ ಬಳಗದ ಸದಸ್ಯರು ಇದ್ದರು.