ವಡವಡಗಿ ಗ್ರಾಪಂಗೆ ಗೋರಿಮಾ ಅವಿರೋಧ ಆಯ್ಕೆ

ಹೂವಿನಹಿಪ್ಪರಗಿ: ಸಮೀಪದ ವಡವಡಗಿ ಗ್ರಾಪಂನಲ್ಲಿ ಅನುಸೂಯಾ ವಾಲಿ ಅವರ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಗೋರಿಮಾ ಮೋದಿನಸಾಬ ಬಾಗವಾನ ಸೋಮವಾರ ಅವಿರೋಧವಾಗಿ ಆಯ್ಕೆಯಾದರು.

ಗೋರಿಮಾ ಅವರು ಒಬ್ಬರೆ ನಾಮಪತ್ರ ಸಲ್ಲಿಸಿದ್ದು ಗ್ರಾಪಂ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ ಎಂದು ಬಸವನಬಾಗೇವಾಡಿ ತಾಪಂ ಇಒ, ಚುನಾವಣಾಧಿಕಾರಿ ಬಿ.ಜೆ. ಇಂಡಿ ಘೋಷಿಸಿದರು. ಸಹಾಯಕ ಚುನಾವಣಾಧಿಕಾರಿಯಾಗಿ ಶಶಿಧರ ಪಾಟೀಲ ಕಾರ್ಯ ನಿರ್ವಹಿಸಿದರು.

ಅಭಿಮಾನಿಗಳು ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು. ಗ್ರಾಪಂ ಉಪಾಧ್ಯಕ್ಷ ಬಸವರಾಜ ಡೆಂಗಿ, ಸದಸ್ಯರಾದ ಶಿವಣ್ಣ ಬ್ಯಾಕೋಡ, ಸಿಂಗು ನಾಯಕ, ಆನಂದ ಹುಣಸಗಿ, ರೇಣುಕಾ ಸಜ್ಜನ, ರೇಣುಕಾ ಗೊಳಸಂಗಿ, ಬಸವರಾಜ ಜಾಲವಾದಿ, ಸಂಗಣ್ಣ ಚಿಮ್ಮಲಗಿ, ರಾಜು ಬಿರಾದಾರ, ಮಾಳಪ್ಪ ಮಾದರ ಹಾಗೂ ಮುಖಂಡರಾದ ಮೋದಿನಸಾಬ ಬಾಗವಾನ, ಶಿವಣ್ಣ ಡೆಂಗಿ, ಪ್ರಕಾಶಬಾಬು ಯಾಳವಾರ, ಚನ್ನಮಲ್ಲಪ್ಪ ವಾಲಿ, ಸುಭಾಸ ಮುತ್ತಗಿ, ಶಿವಣ್ಣ ಸಜ್ಜನ, ಚಿದಾನಂದ ಮನಹಳ್ಳಿ, ಸತೀಶ ಕಟ್ಟಿಮನಿ, ರವಿ ಜಮ್ಮಲದಿನ್ನಿ, ಮಲೆಗೆಪ್ಪ ಸಾಸನೂರ, ಸಿದ್ದಣ್ಣ ಬಿರಾದಾರ, ಸುಭಾಸ ಮುತ್ತಗಿ, ದೇವಣ್ಣ ಬೂದಿಹಾಳ ಇತರರು ಇದ್ದರು.

Leave a Reply

Your email address will not be published. Required fields are marked *