ಮೃತ ಬಾಲಕಿ ಮನೆಗೆ ತಹಸೀಲ್ದಾರ್ ಭೇಟಿ

ಹೂವಿನಹಿಪ್ಪರಗಿ: ಗ್ರಾಮದಲ್ಲಿ ಸಂಶಯಾಸ್ಪದವಾಗಿ ಸಾವಿಗೀಡಾದ 10 ವರ್ಷದ ಸಂಜನಾ ಲಿಂಗದಳ್ಳಿ ಅವರ ಮನೆಗೆ ಬಸವನಬಾಗೇವಾಡಿ ತಹಸೀಲ್ದಾರ್ ಎಂ.ಎನ್. ಚೋರಗಸ್ತಿ ಮಂಗಳವಾರ ಭೇಟಿ ನೀಡಿ ಪಾಲಕರಿಗೆ ಸಾಂತ್ವನ ಹೇಳಿದರು.

ಈಗಾಗಲೇ ಪೊಲೀಸರು ತನಿಖೆ ನಡೆಸಿದ್ದು, ಶೀಘ್ರ ಪತ್ತೆ ಹಚ್ಚಲಿದ್ದಾರೆ ಎಂದು ತಹಸೀಲ್ದಾರ್ ಹೇಳಿದರು. ಹೂವಿನಹಿಪ್ಪರಗಿ ಉಪತಹಸೀಲ್ದಾರ್ ಜಗದೀಶ ಹಾರಿವಾಳ, ಶಿವರಾಜ ಚೌದ್ರಿ, ಹೂನ್ನಪ್ಪ ವಾಲಿಕಾರ ಇದ್ದರು.