ಬೈಕ್‌ಗಳ ನಡುವೆ ಡಿಕ್ಕಿ

ಹಟ್ಟಿಚಿನ್ನದಗಣಿ (ರಾಯಚೂರು): ಹಟ್ಟಿ ಹೊಸೂರು ಕ್ರಾಸ್‌ನಲ್ಲಿ ಎರಡು ಬೈಕ್‌ಗಳ ನಡುವೆ ಭಾನುವಾರ ಬೆಳಗ್ಗೆ ಡಿಕ್ಕಿಯಾಗಿ ನಾಲ್ವರು ಗಾಯಗೊಂಡಿದ್ದಾರೆ. ವಾಹನಗಳು ನಜ್ಜುಗುಜ್ಜಾಗಿವೆ. ಎರಡು ಬೈಕ್‌ನಲ್ಲಿದ್ದ ನಾಲ್ವರು ಸಮೀಪದ ರೋಡಲಬಂಡಾ (ತವಗ) ಗ್ರಾಮದವರು. ಶರಣಲಿಂಗಪ್ಪ ಹಾಗೂ ಅವರ ಪುತ್ರ ಶಂಭುಲಿಂಗಗೆ ಗಾಯಗಳಾಗಿವೆ. ಮತ್ತೊಂದು ಬೈಕ್‌ನಲ್ಲಿದ್ದ ಶರಣಬಸವ, ಯಲ್ಲಪ್ಪಗೂ ಸಣ್ಣಪುಟ್ಟ ಗಾಯಗಳಾಗಿವೆ. ಹಟ್ಟಿಚಿನ್ನದಗಣಿ ಕಂಪನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.