ಉಗ್ರರ ಕೃತ್ಯಕ್ಕೆ ಮುಸ್ಲಿಂ ಒಕ್ಕೂಟ ಖಂಡನೆ

ಹಟ್ಟಿಚಿನ್ನದಗಣಿ: ಕಾಶ್ಮೀರದ ಪುಲ್ವಾಮನಲ್ಲಿ ಯೋಧರ ಮೇಲೆ ಉಗ್ರರು ನಡೆಸಿದ ಕೃತ್ಯವನ್ನು ಸ್ಥಳೀಯ ಮುಸ್ಲಿಂ ಒಕ್ಕೂಟ ಖಂಡಿಸಿತು. ಮದೀನಾ ಮಸ್ಜೀದ್‌ನಿಂದ ಹಳೇ ಬಸ್ ನಿಲ್ದಾಣದವರೆಗೆ ಮೆರವಣಿಗೆ ನಡೆಸಿದ ಒಕ್ಕೂಟ ಬಳಿಕ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿತು.

ಮೊಂಬತ್ತಿ ಹಿಡಿದುಕೊಂಡು ಹಿಂದುಸ್ತಾನ ಜಿಂದಾಬಾದ್, ಪಾಕಿಸ್ತಾನ ಮುರ್ದಾಬಾದ್, ಜೈ ಹಿಂದ್, ಬೋಲೋ ಭಾರತ ಮಾತಕೀ ಜೈ ಎಂಬ ಘೋಷಣೆಗಳನ್ನು ಕೂಗಿ ಉಗ್ರಗಾಮಿಗಳ ಕೃತ್ಯವನ್ನು ಒಕ್ಕೂಟ ಖಂಡಿಸಿತು. ಕೌಸರ್‌ಸಿದ್ದಿಕ್ಕಿ, ಮೊಹಿನುದ್ದೀನ್, ಸೈಯದ್ ಶಂಶುದ್ದೀನ್, ಸಿರಾಜುದ್ದೀನ್, ಟಿ.ಅಮೀನುದ್ದೀನ್, ಅನ್ವರ್‌ಪಾಷಾ, ಮೌಲಾಸಾಬ್ ಇತರರಿದ್ದರು.