ಫೇಸ್‌ಬುಕ್‌ನಲ್ಲಿ ಪಾಕ್ ಪರ ಪೋಸ್ಟ್ : ಆರೋಪಿಗಳು ವಶ

ಹಟ್ಟಿಚಿನ್ನದಗಣಿ: ಕೆಲ ಪಾಕ್ ಪ್ರೇಮಿಗಳು ಉಗ್ರಗಾಮಿಗಳ, ಪಾಕಿಸ್ತಾನದ ಪರ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕುತ್ತಾ ವಿಕೃತಿ ಮೆರೆಯುತ್ತಿರುವುದು, ಪುಲ್ವಾಮಾ ದಾಳಿ ಬೆಂಬಲಿಸಿ ಭಾರತೀಯ ಸೈನಿಕರ ವಿರುದ್ಧ ಕಾಮೆಂಟ್ ಮಾಡುತ್ತಾ ಸಮಾಜದ ಸ್ವಾಸ್ಥ್ಯ, ಐಕ್ಯೆತೆಗೆ ಧಕ್ಕೆ ಉಂಟು ಮಾಡುತ್ತಿರುವ ಘಟನೆಗಳು ಮೇಲಿಂದ ಮೇಲೆ ಜರುಗುತ್ತಲೆ ಇವೆ.

ಅಂತೆಯೆ ಹಟ್ಟಿಚಿನ್ನದಗಣಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂಥ ಘಟನೆಗಳು ನಡೆದಿವೆ. ಉಗ್ರಗಾಮಿಗಳನ್ನು ಬೆಂಬಲಿಸಿ ಹಾಗೂ ಪಾಕಿಸ್ತಾನ ಪರ ಫೇಸ್‌ಬುಕ್‌ನಲ್ಲಿ ಪೋಸ್ಟ್ ಅಪಡೇಟ್ ಮಾಡಿದ್ದಕ್ಕಾಗಿ ಸಮೀಪದ ಗುರುಗುಂಟಾ ಗ್ರಾಮದ ಇಬ್ಬರು ಯುವಕರನ್ನು ಹಟ್ಟಿ ಪಿಎಸೈ ಕಚೇರಿಯಲ್ಲಿ ವಿಚಾರಣೆ ಮಾಡಿದ್ದಾರೆ.
ಇಬ್ಬರು ಬಂಧಿತರು, ಪಾಕ್ ಧ್ವಜ, ಉಗ್ರರ ಭಾವಚಿತ್ರಗಳನ್ನು ಸ್ಟೇಟಸ್‌ಗೆ ಹಾಕಿಕೊಂಡಿದದಾರೆ. ಸದ್ಯ ದೇಶದ್ರೋಹದ ಆರೋಪದ ಮೇಲೆ ವಿಚಾರಣೆಗೆ ಹಾಜರಾಗಿದ್ದು, ಸ್ಥಳೀಯ ಠಾಣೆಯಲ್ಲಿ ತನಿಖೆ ನಡೆಯುತ್ತಿದೆ.

ದೇಶದಲ್ಲಿರುವ ಪಾಕ್ ಪ್ರೇಮಿಗಳ ಅಟ್ಟಹಾಸ ಮಿತಿ ಮೀರಿದೆ. ಸಾಮಾಜಿಕ ಜಾಲತಾಣಗಳಲ್ಲಿ ಉಗ್ರರು ಹಾಗೂ ಪಾಕ್ ಬೆಂಬಲಿಸುವ ದೇಶದ್ರೋಹಿಗಳಿಗೆ ತಕ್ಕ ಶಾಸ್ತಿಯಾಗಬೇಕು.
| ಶ್ರೀಕಾಂತ ಹೊಸಕೇರಿ ಹಿಂದು ಜಾಗರಣ ವೇದಿಕೆ, ಉತ್ತರಕರ್ನಾಟಕ ಮುಖ್ಯಸ್ಥ