ಮೈಸೂರ್ ಹಾಫ್‌ಬಾರ್ ಸೋಪು ವಿತರಣೆಗೆ ಸೂಚನೆ

ಹಟ್ಟಿಚಿನ್ನದಗಣಿ: ಹಟ್ಟಿಚಿನ್ನದಗಣಿ ಕಂಪನಿ ನೌಕರರಿಗೆ ಎಬಿ-ಸ್ಕೀಂ, ಫುಡ್‌ಕಿಟ್‌ನಲ್ಲಿ ವಿತರಿಸುವ ರಿನ್ ಸೋಪು ಬದಲು ಮೈಸೂರ್ ಹಾಫ್‌ಬಾರ್ ಸೋಪು ವಿತರಿಸುವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪ್ರಧಾನಿ ಕಚೇರಿ ಪತ್ರ ರವಾನಿಸಿದೆ.

ರಾಜ್ಯ ಸರ್ಕಾರ ಸ್ವಾಮ್ಯದ ಹಟ್ಟಿಚಿನ್ನದಗಣಿ ಕಂಪನಿಯ 4,400 ಕಾರ್ಮಿಕರಿಗೆ ರಿನ್ ಸಾಬೂನು ಬದಲು ರಾಜ್ಯ ಸರ್ಕಾರದ ಆಧೀನದ ಮೈಸೂರು ಹಾಫ್‌ಬಾರ್ ವಿತರಿಸಲು ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಬಿಜೆಪಿ ತಾಲೂಕು ಘಟಕದ ಮುಖಂಡ ಶಿವರಾಜ ಕಂದಗಲ್ ಪ್ರಧಾನಿಗೆ ಪತ್ರ ರವಾನಿಸಿದ್ದರು. ಇದಕ್ಕೆ ಪ್ರಧಾನಿ ಕಚೇರಿ ಸ್ಪಂದಿಸಿದೆ.